ಅಕ್ರಮ ಟೋಲ್ ತೆರವು ಆಗ್ರಹಿಸಿ ಈಗಾಗಲೇ ಸಮಾನ ಮನಸ್ಕ ಸಂಘಟನೆಗಳ ಹಗಲು ರಾತ್ರಿ ಮುಷ್ಕರವನ್ನು ತೀವ್ರ ಗೊಳಿಸುವ ನಿಟ್ಟಿನಲ್ಲಿ ದ.ಕ.ಜಿಲ್ಲೆಯ ಸರ್ವ ಜಾತ್ಯಾತೀತ ನಿಲುವು ಹೊಂದಿರುವ ಪಕ್ಷಗಳು ಮತ್ತು ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ನವಂಬರ್ 18 ರಂದು ಶುಕ್ರವಾರ ಅಪರಾಹ್ನ ಗಂಟೆ 03.00 ಕ್ಕೆ ಸುರತ್ಕಲ್ ತಡಂಬೈಲ್ ಜಂಕ್ಷನ್ ನಿಂದ ಎನ್.ಐ.ಟಿ. ಕೆ ಟೋಲ್ ಧರಣಿ ಸ್ಥಳಕ್ಕೆ , ಅಕ್ರಮ ಟೋಲ್ ತೆರವು ಆಗ್ರಹಿಸಿ, ಹಾಲಿ ಹಗಲು ರಾತ್ರಿ ಧರಣಿಗೆ ಬೆಂಬಲಿಸಿ, ಕೇಂದ್ರ ಸರಕಾರ ಮತ್ತು ಹೆದ್ದಾರಿ ಪ್ರಾಧಿಕಾರದ ಹಠಮಾರಿ ನಿಲುವು ಮತ್ತು ಜನ ವಿರೋಧಿ ಟೋಲ್ ಸಂಗ್ರಹ ಲೂಟಿ ನೀತಿ ವಿರೋಧಿಸಿ, ಶಾಂತಿಯುತ ಪ್ರಜಾಸತ್ತಾತ್ಮಕ ಕಾಲ್ನಡಿಗೆ ಜಾಥಾ ನಡೆಯಲಿದ್ದು, ಈ ಜಾಥಾಕ್ಕೆ ಸರ್ವರೂ ಭಾಗವಹಿಸಿ ಯಶಸ್ವಿ ಗೊಳಿಸಲು ಕರೆ ನೀಡಲಾಗಿದೆ ಎಂದು,ಕೆ.ಅಶ್ರಫ್(ಮಾಜಿ ಮೇಯರ್)ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ರವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸುರತ್ಕಲ್ ವಿರೋಧಿತ ಟೋಲ್ ಪ್ಲಾಜಾ
ಇನ್ನಷ್ಟು ವರದಿಗಳು
ಪಿ.ಎ.ಪ್ರಥಮ ಗ್ರೇಡ್ ಕಾಲೇಜು ರಕ್ತದಾನ ಶಿಬಿರ ಆಯೋಜನೆ: ರೆಡ್ ಕ್ರಾಸ್ ಸಂಸ್ಥೆಯಿಂದ ಅಬ್ಬಾಸ್ ಉಚ್ಚಿಲ್ ರೊಳಗೊಂಡು ಹಲವರಿಗೆ ಸನ್ಮಾನ.
ತೋಟಾಳ್ ಟಿ.ಕೆ.ಇಸ್ಮಾಯಿಲ್ ನಿಧನ: ಸೋ.ಮೀಡಿಯಾ ಯಾಕ್ಟಿವಿಸ್ಟ್ ಅಶ್ಫಾಕ್ ರವರಿಗೆ ಪಿತೃ ವಿಯೋಗ:
ಉಳ್ಳಾಲ, ಪಿಯು: ಅಲ್ ಬಯಾನ್ ಅರಬಿಕ್ ಕಾಲೇಜು: ಶೇ 100 ಫಲಿತಾಂಶ.