ಉಳ್ಳಾಲ: ನರಿಂಗಾನ ಗ್ರಾಮದ ಟಿ.ಕೆ.ಇಸ್ಮಾಯಿಲ್ ರವರು ಇಂದು ಅವರ ಮೊಂಟೆಪದವು ಎಂಬಲ್ಲಿನ ಸ್ವಗೃಹದಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 88 ವರ್ಷ ಪ್ರಾಯವಾಗಿತ್ತು. ಟಿ.ಕೆ.ಇಸ್ಮಾಯಿಲ್ ಅವರು ನರಿಂಗಾನದ ಹಿರಿಯ ಧಾರ್ಮಿಕ ಮುತ್ಸದ್ದಿ ಆಗಿದ್ದು, ಮುಹಿಯುದ್ದೀನ್ ಜುಮ್ಮಾ ಮಸೀದಿಯ ಸೇವೆಯೊಂದಿಗೆ ಗುರುತಿಸಿ ಕೊಂಡಿದ್ದರು.
ಇತ್ತೀಚೆಗೆ ಅವರು ವಯಸ್ಸು ಸಂಬಂಧಿತ ಅನಾರೋಗ್ಯದರಿಂದ ಹಾಸಿಗೆ ಹಿಡಿದಿದ್ದರು ಮತ್ತು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಮೃತ ಟಿ.ಕೆ.ಇಸ್ಮಾಯಿಲ್ ರವರಿಗೆ ನಾಲ್ಕು ಪುತ್ರರನ್ನು ಆಗಲಿದ್ದು, ಹಿರಿಯ ಪುತ್ರ ಅಶ್ಫಾಕ್ ವಿದೇಶದಲ್ಲಿ ಉದ್ಯೋಗ ದಲ್ಲಿ ಇದ್ದು, ಸಾಮಾಜಿಕ ಜಾಲತಾಣದಲ್ಲಿ ಯಾಕ್ತಿವಿಸ್ಟ್ ಆಗಿದ್ದಾರೆ. ಶರೀಫ್ @ ಅಬೂ ಸಫ್ವಾನ್, ಅಶ್ರಫ್ ಮತ್ತು ಫಝಲ್ ರವರನ್ನು ಅಗಲಿದ್ದಾರೆ.
ಮೃತರನ್ನು ಇಂದು ಸಂಜೆ ಧಾರ್ಮಿಕ ವಿಧಿ ವಿಧಾನದ ನಂತರ ನರಿಂಗಾನದ ಮುಹಿಯುದ್ದೀನ್ ಜುಮ್ಮಾ ಮಸೀದಿ ಭೂಮಿಯಲ್ಲಿ ಅಂತಿಮ ಧಫನ ಕ್ರಿಯೆ ನೆರವೇರಿಸುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇನ್ನಷ್ಟು ವರದಿಗಳು
ಉಳ್ಳಾಲ, ಪಿಯು: ಅಲ್ ಬಯಾನ್ ಅರಬಿಕ್ ಕಾಲೇಜು: ಶೇ 100 ಫಲಿತಾಂಶ.
ಪುತ್ತೂರು ‘ ಅಶ್ರಫ್ ‘ ನಾಮಾಂಕಿತರ ಕರ್ನಾಟಕ ಒಕ್ಕೂಟ ಸಭೆ: ಜಿಲ್ಲಾವಾರು ಅಶ್ರಫರ ಹುಡುಕಾಟಕ್ಕೆ ಮಾಜಿ ಮೇಯರ್ ಕೆ.ಅಶ್ರಫ್ ಕರೆ.
ಪ್ರವಾದಿ ಮುಹಮ್ಮದ್ ಶಾಲಾ ಪಠ್ಯಕ್ರಮದಲ್ಲಿ ಸೇರ್ಪಡೆ: ಚುನಾವಣೆಗೂ ಮುನ್ನ ಸ್ಟಾಲಿನ್ ಮುಸ್ಲಿಂ ಪ್ರಚಾರ.