December 23, 2024

Vokkuta News

kannada news portal

ಕಾವೇರಿ ಜಲ ವಿವಾದ,ಬೆಂಗಳೂರು,ರಸ್ತೆಗೆ ಇಳಿಯದ ಜನತೆ,ಅಲ್ಲಲ್ಲಿ ಪ್ರಭಲ ಪ್ರತಿಭಟನೆ.

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸದಂತೆ ರಾಜಕೀಯ ಪಕ್ಷಗಳು ಕರೆದ ಇಂದಿನ ಬೆಂಗಳೂರು ಬಂದ್ ನಿಂದಾಗಿ ಜನರು ಇಂದು ರಸ್ತೆಗೆ ಇಳಿಯಲಿಲ್ಲ ಮತ್ತು ನಗರದಲ್ಲಿ ವಿರಳ ಸಂಚಾರ ಕಂಡು ಬಂದಿದೆ. ಕೆಲವಡೆ ಸ್ಥಳೀಯ ಕನ್ನಡ ಪರ ಸಂಘಟನೆಗಳು ಕಾವೇರಿ ಜಲದ ಹಕ್ಕಿನ ಬಗ್ಗೆ ಘೋಷಣೆ ಕೂಗಲು ಪ್ರಯತ್ನಿಸಿದ ಹೊರತಾಗಿಯೂ ಪೊಲೀಸರ ಪಾಲ್ಗೊಳ್ಳುವಿಕೆಯಿಂದ ತೆರವು ಗೊಳಿಸಿದ ವಿವರಗಳು ಲಭಿಸಿವೆ

ಬಾಯಿಗೆ ಮಣ್ಣು ಹಾಕಿಕೊಂಡು ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ ನಡೆಸಲಾಗಿದೆ. ಅಲ್ಲದೇ ಅರೆಬೆತ್ತಲೆ ಆಗಿ, ಉರುಳು ಸೇವೆ ಮಾಡಿ ಪ್ರತಿಭಟಿಸಿದ್ದರು. ಟೌನ್‌ ಹಾಲ್ ಮುಂದೆ ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡಲಾಗುತ್ತಿದೆ.

ಸೆಕ್ಷನ್ 144 ರ ಆದೇಶವನ್ನು ಉಲ್ಲಂಘಿಸಿ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸಿದ 20 ಕ್ಕೂ ಹೆಚ್ಚು ಜನರನ್ನು ಕರ್ನಾಟಕ ಪೊಲೀಸರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ತಮಿಳುನಾಡಿನಿಂದ ಕರ್ನಾಟಕಕ್ಕೆ ಬಸ್ ಸಂಚಾರ ಸ್ಥಗಿತಗೊಂಡಿದೆ. ತಮಿಳುನಾಡಿನಿಂದ ಬರುವ ಬಸ್‌ಗಳನ್ನು ಕೃಷ್ಣಗಿರಿ ಜಿಲ್ಲೆಯ ಜುಜುವಾಡಿಯಲ್ಲಿ ತಡೆಯಲಾಗಿದೆ

ಬಿಂದಿಗೆ ಬಡಿದು ಬಾಯಿ ಬಡಿದು ಕೊಂಡು ಸರ್ಕಾರದ ವಿರುದ್ದ ಆಕ್ರೋಶ. ಫ್ರೀಡಂ ಪಾರ್ಕ್ ನತ್ತ ಬರುತ್ತಿರುವ ಒಂದೊಂದೇ ಸಂಘಟನೆ, ಅಯ್ಯಯ್ಯೋ ಅನ್ಯಾಯ ಅನ್ಯಾಯ ಅಂತ ಆಕ್ರೋಶ ವ್ಯಕ್ತಪಡಿಸುತ್ತಿರುವ ಪ್ರತಿಭಟನಾಕಾರರು ರೈತ ಹಾಗೂ ಕನ್ನಡಪರ ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ- ತಮಿಳುನಾಡು ಗಡಿಯಲ್ಲಿ ಭಾರೀ ಪೊಲೀಸ್‌ ಬಂದೋಬಸ್ತ್‌ ಅನ್ನು ಏರ್ಪಡಿಸಲಾಗಿದೆ. ಅತ್ತಿಬೆಲೆ ಗಡಿಯಲ್ಲಿ ಎರಡೂ ರಾಜ್ಯಗಳ ಸಾರಿಗೆ ಬಸ್‌ಗಳನ್ನು ತಡೆಯಲಾಗಿದೆ.

ಬೆಳಗ್ಗೆ 11 ಗಂಟೆಗೆ ನಗರದ ಟೌನ್‌ಹಾಲ್‌ನಿಂದ ಮೈಸೂರು ಬ್ಯಾಂಕ್‌ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಫ್ರೀಡಂ ಪಾರ್ಕ್ ಮತ್ತು ರಾಜಭವನ ಎದುರು ಪ್ರತಿಭಟನೆ ನಡೆಸಲು ರೈತ ಮುಖಂಡರು ಮುಂದಾಗಿದ್ದಾರೆ. ಪ್ರತಿಭಟನೆಯಲ್ಲಿ ಹಲವು ಕನ್ನಡ ಪರ ಸಂಘಟನೆಗಳು ಭಾಗವಹಿಸಲಿವೆ.
ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಸರಕಾರದ ಬೇಜವಾಬ್ದಾರಿ: ಶೋಬಾ ಕರಂದ್ಲಾಜೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯಿಂದ ಕಾವೇರಿ ನದಿ ವಿವಾದ ಸೃಷ್ಟಿಯಾಗಿದೆ. ಕಾಂಗ್ರೆಸ್‌ನವರು ಅವರವರ ಹೊಡೆದಾಟದಲ್ಲಿ ಮುಳುಗಿ ಹೋಗಿದ್ದಾರೆ. ತಮಿಳುನಾಡನ್ನು ಓಲೈಸಲು ಸರ್ಕಾರ ಮುಂದಾದಂತಿದೆ. ಕಾವೇರಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ಕಾವೇರಿ ನೀರು ಪ್ರಾಧಿಕಾರಕ್ಕೆ ಸೂಕ್ತ ಮಾಹಿತಿ ನೀಡಿಲ್ಲ. ಸರ್ಕಾರ ನ್ಯಾಯಾಲಯಕ್ಕೂ ಕೂಡ ಸೂಕ್ತ ಅಂಕಿ ಅಂಶ ನೀಡಿಲ್ಲ. ನರೇಂದ್ರ ಮೋದಿಯವರು ಮೋದಿ ಕೇವಲ ತಮಿಳುನಾಡು, ಕರ್ನಾಟಕಕ್ಕೆ ಪ್ರಧಾನಿ ಅಲ್ಲ, ಬೇರೆ ರಾಜ್ಯಗಳ ಜಲ ವಿವಾದ ಕೂಡ ಪ್ರಧಾನಿಗಳು ಬಗೆಹರಿಸಬೇಕಿದೆ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.

ಬಂದ್ ನಿರ್ಣಯದಿಂದ ಮಾತ್ರ ಕಾವೇರಿ ಉಳಿಯುತ್ತಾಳೆ ಎನ್ನುವುದು ಸರಿಯಲ್ಲ: ಕರವೇ ನಾರಾಯಣ ಗೌಡ.

ಬೆಂಗಳೂರು ಬಂದ್‌ ಗೆ ಬೆಂಬಲ ವ್ಯಕ್ತಪಡಿಸದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ನಾರಾಣಗೌಡ ಅವರು ಪ್ರತಿಕ್ರಿಯಿಸಿದ್ದಾರೆ. ರಾಜಕಾರಣಿಗಳನ್ನು ನಂಬಿ ಹೋರಾಟಕ್ಕೆ ಇಳಿಯಬಾರದು. ಮಾತಿಗೆ ಮುಂಚೆ ಬಂದ್ ಒಂದೇನಾ ಬ್ರಹ್ಮಾಸ್ತ್ರ ಎಂದು ಪ್ರಶ್ನಿಸಿದರು. ಬಂದ್‌ನಿಂದಾಗಿ ಅವತ್ತೆ ದುಡಿದು ತಿನ್ನುವವರಿಗೆ, ಜನಸಮಾನ್ಯರಿಗೆ ಸಾಕಷ್ಟು ತೊಂದರೆ ಆಗುತ್ತದೆ. ಬಂದ್‌ನಿಂದ ಕಾವೇರಿ ಉಳಿಯುತ್ತಾಳೆ ಎಂಬ ನಂಬಿಕೆ ನನಗಿಲ್ಲ. ಬಂದ್ ಕರೆ ಕೊಟ್ಟು ಟೌನ್ ಹಾಲ್‌ನಿಂದ ಮೆರವಣಿಗೆ ಮಾಡುತ್ತೀರಿ ಮುಂದೇನು? ಎಂದು ಅವರು ತಿಳಿಸಿದ್ದಾರೆ.