December 23, 2024

Vokkuta News

kannada news portal

ಬಾಷೆ ಸಮುದಾಯದ ದ್ವನಿ, ಉರ್ದು ಮುಶಾಯಿರದಲ್ಲಿ ಸಲಾಮ್ ಮದನಿ.

ಮಂಗಳೂರು: ಅಂಜುಮನ್ ತರೀಕೆ – ಇ- ಉರ್ದು ದ.ಕ ಮತ್ತು ಉಡುಪಿ ಸಂಸ್ಥೆಯ ವತಿಯಿಂದ ಇಂದು ಮಂಗಳೂರಿನ ಪುರಭವನ ಕುದ್ಮುಲ್ ರಂಗ ರಾವ್ ಸಭಾ ಭವನದಲ್ಲಿ ಉರ್ದು ಮಹ್ ಫಿಲೆ ಮುಶಾ ಇರಾ ಭಾಷಾ ಕೂಟ ನಡೆಯಿತು.

ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಪರಿಗಣ ನಾತ್ಮಕವಾಗಿ ಉರ್ದು ಒಂದು ಪ್ರಭಾವಿ ಭಾಷೆ ಆಗಿದ್ದು ,ಇದರ ಉತ್ತೇಜನ ಉದ್ದೇಶದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು ಎ ಇ ಜನಾಬ್ ನಾಸೀರ್ ಸೈಯದ್ ಸಿ.ಏಚ್.ಎಸ್ ಗ್ರೂಪ್ ಸ್ಥಾಪಕರು ವಹಿಸಿದ್ದರು. ಅಝೀಝುದ್ದೀನ್ ಅಝೀಝೀ ಬೇಲ್ಗಾಮಿ, ಡಾ. ಮೊಹಮ್ಮದ್ ಹನೀಫ್ ಸಾಹೇಬ್ ಭಟ್ಕಳ್,ಜ. ಸಿರಾಜ್ ಶೋಲಾಪುರಿ ಮುಂಬೈ,ಜ. ಸೈಯದ್ ಅಹಮದ್ ಸಲೀಕ್ ನದ್ವಿ, ಜ.ಅಬ್ದುಲ್ ಸಲಾಂ ಮದನಿ ಮಂಗಳೂರು.ಜ. ರಹಮತ್ ಉಲ್ಲಾ ರಹಮತ್ ಶಿವಮೊಗ್ಗ,ಜ.ಉಸಾಮ ಖಾಝಿ ಅಸದ್ ಕರ್ಣಾಟಕಿ ಮುಂತಾದ ಉರ್ದು ಸಾಹಿತಿ,ಉಲೇಮಾ,ಮುಖಂಡರು ಭಾಗವಹಿಸಿದ್ದರು. ಆರಂಭದಲ್ಲಿ ಉರ್ದು ನಿವೃತ್ತ ಪ್ರಾಧ್ಯಾಪಕರಾದ ಮೊಹಮ್ಮದ್ ಹನೀಫ್ ಸಾಹೇಬ್ ರವರು ಸ್ವಾಗತಿಸಿ,ಅಬ್ದುಲ್ ಸಲಾಂ ಮದನಿ ರವರು ಉರ್ದು ಭಾಷೆಯ ಉಗಮ ಮತ್ತು ಇತಿಹಾಸವನ್ನು ವಿವರಿಸಿದರು. ಬಾಷೆ ಎಂಬುದು ಸಮುದಾಯದ ದ್ವನಿ ಎಂದು ಹೇಳಿದರು.
ಯು. ಎ. ಇ ಉದ್ಯಮಿ, ಮತ್ತು ಸಭೆಯ ಅಧ್ಯಕ್ಷರಾದ ಜನಾಬ್ ನಾಸೀರ್ ಸೈಯದ್ ರವರನ್ನು ಸನ್ಮಾನಿಸಲಾಯಿತು. ದ.ಕ.ಜಿಲ್ಲೆಯ ವಿವಿಧ ಸರಕಾರಿ ಉರ್ದು ಶಾಲೆ ಮತ್ತು ಇತರ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಸಾಧನೆಗೆ ನಗದು ಮತ್ತು ಪ್ರಶಸ್ತಿ ಬಹುಮಾನ ನೀಡಲಾಯಿತು. ಸಾಧನೆಗೈದ ಉರ್ದು ಪ್ರಾದ್ಯಾಪಿಕೆಯರಿಗೆ ಪ್ರಶಸ್ತಿ ನೀಡಲಾಯಿತು.ವಿವಿಧ ಉರ್ದು ಸಾಹಿತಿಗಳು ಮುಶಾಹಿರ ಮೂಲಕ ಪ್ರಭಲ ನೈತಿಕ ಸಂದೇಶ ನೀಡಿದರು.