December 21, 2024

Vokkuta News

kannada news portal

ನಗರದಲ್ಲಿ ಇಂದು ಅಂಜುಮನ್ ಸಂಸ್ಥೆಯಿಂದ ಉರ್ದು ಮೆಹ್ಫಿಲೆ ಭಾಷಾ ಕಾರ್ಯಕ್ರಮ

ಮಂಗಳೂರು: ಅಂಜುಮನ್ ತರೀಕೆ – ಇ – ಉರ್ದು ದ.ಕ ಮತ್ತು ಉಡುಪಿ ಸಂಸ್ಥೆಯ ವತಿಯಿಂದ ಇಂದು ಮಂಗಳೂರಿನ ಪುರಭವನ ಕುದ್ಮುಲ್ ರಂಗ ರಾವ್ ಸಭಾ ಭವನದಲ್ಲಿ ಸಂಜೆ 6.30 ಕ್ಕೆ ಉರ್ದು ಮಹ್ ಫಿಲೆ ಮುಶಾ ಇರಾ ಭಾಷಾ ಕೂಟ ನಡೆಯಲಿದೆ.

ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಪರಿಗಣ ನಾತ್ಮಕವಾಗಿ ಉರ್ದು ಒಂದು ಪ್ರಭಾವಿ ಭಾಷೆ ಆಗಿದ್ದು ,ಇದರ ಉತ್ತೇಜನ ಉದ್ದೇಶಿತ ಕಾರ್ಯಕ್ರಮ ಇದಾಗಿದ್ದು,ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು ಎ ಇ. ಜನಾಬ್ ನಾಸೀರ್ ಸೈಯದ್, ಸಿ.ಏಚ್.ಎಸ್ ಗ್ರೂಪ್ ಸ್ಥಾಪಕರು ವಹಿಸಲಿದ್ದಾರೆ. ಅಝೀಝುದ್ದೀನ್ ಅಝೀ ಝೀ ಬೇಲ್ಗಾಮಿ, ಡಾ. ಮೊಹಮ್ಮದ್ ಹನೀಫ್ ಸಾಹೇಬ್ ಭಟ್ಕಳ್,ಜ. ಸಿರಾಜ್ ಶೋಲಾಪುರಿ ಮುಂಬೈ,ಜ. ಸೈಯದ್ ಅಹಮದ್ ಸಲೀಕ್ ನದ್ವಿ ಭಟ್ಕಳ , ಜ.ಅಬ್ದುಲ್ ಸಲಾಂ ಮದನಿ ಮಂಗಳೂರು.ಜ. ರಹಮತ್ ಉಲ್ಲಾ ರಹಮತ್ ಶಿವಮೊಗ್ಗ,ಜ.ಉಸಾಮ ಖಾಝಿ ಅಸದ್ ಕರ್ಣಾಟಕಿ ಗಂಗೊಳ್ಳಿ ಮುಂತಾದ ಉರ್ದು ಸಾಹಿತಿ,ಉಲೇಮಾ,ಮುಖಂಡರು ಭಾಗವಹಿಸಲಿದ್ದಾರೆ.