November 19, 2024

Vokkuta News

kannada news portal

ಕೌಟುಂಬಿಕ ಬಂಧ ಸುದೃಢಗೊಳಿಸಿ : ಮುಟ್ಟಾಜೆ ಕುಂಞಾಲಿ ಹಾಜಿ ಫ್ಯಾಮಿಲಿ ದಶಮಾನೋತ್ಸವದಲ್ಲಿ ಶಾಸಕ ಎ.ಕೆ.ಎಮ್.ಅಶ್ರಫ್.

ಮಂಗಳೂರು : ಕೌಟುಂಬಿಕ ಸಂಪರ್ಕ ಉತ್ತಮವಾಗಿರಬೇಕು. ಒಗ್ಗಟ್ಟು ಇದ್ದರೆ ಹಲವು ಸೇವೆಗಳು ಸಮಾಜಕ್ಕೆ ಲಭಿಸುತ್ತವೆ.ಕುಟುಂಬ ಸಂಪರ್ಕ ಹತ್ತಿರ ಇದ್ದರೆ ಮಾತ್ರ ಸಮಾಜದಲ್ಲಿ‌ ಅತ್ಯುತ್ತಮ ಬದುಕು ಕಾಣಲು ಸಾಧ್ಯ.ಡಾ.ಕೆ.ಕುಂಞಾಲಿಯಂತವರು ತಮ್ಮ ಆತ್ಮ ಚರಿತ್ರೆಯನ್ನು ದಾಖಲಿಸಬೇಕು ಮತ್ತು ಸಮಾಜಕ್ಕೆ ಅರ್ಪಿಸಬೇಕು.ಸಮಾಜ ಅದರಿಂದ ಸ್ಪೂರ್ತಿ ಪಡೆಯುವಂತಾಗಬೇಕು ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಹೇಳಿದರು.ಅವರು ಮುಟ್ಟಾಜೆ ಕುಂಞಾಲಿ ಹಾಜಿ ಫ್ಯಾಮಿಲಿ ಅಸೋಸಿಯೇಷನ್ ದಶಮಾನೋತ್ಸವ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಅಸೋಸಿಯೇಷನ್ ಅಧ್ಯಕ್ಷರಾದ ಡಾ.ಕೆ.ಕುಂಞಾಲಿಯವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಅಸೋಸಿಯೇಷನ್ ಕಳೆದ ಹತ್ತು ವರ್ಷಗಳಲ್ಲಿ ಹಲವಾರು ಕೌಟುಂಬಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು ಶೈಕ್ಷಣಿಕವಾಗಿ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಕುಟುಂಬ ಸದಸ್ಯರು ಉತ್ತಮ ಸಾಧನೆ ಮಾಡಿರುತ್ತಾರೆ ಎಂದರು. ದಶಮಾನೋತ್ಸವ ಕಾರ್ಯಕ್ರಮ ಇಂದು ಉದ್ಘಾಟನೆಗೊಂಡು ಎರಡು ತಿಂಗಳ ಕಾಲ ನಿರಂತರ ಕಾರ್ಯಕ್ರಮಗಳು ನಡೆಯಲಿಕ್ಕಿದೆ. ಇದರ ಅಂಗವಾಗಿ ಸಾರ್ವಜನಿಕ ಬಸ್ಸು ತಂಗುದಾಣ, ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ರಕ್ತದಾನ ಶಿಬಿರ, ಸ್ವ ಉದ್ಯೋಗ ತರಭೇತಿ ಕಾರ್ಯಕ್ರಮಗಳು, ಕುಟುಂಬಸ್ಥರು ಇರುವ ಬೇರೆ ಬೇರೆ ಕಡೆಗಳಲ್ಲಿ ಕುಟುಂಬ ಸಂಗಮ ಕಾರ್ಯಕ್ರಮಗಳು ನಡೆಯಲಿದ್ದು ಜನವರಿ 2024ರ ಕೊನೆಯ ವಾರದಲ್ಲಿ ಸಮಾರೋಪಗೊಳ್ಳಲಿದೆ. ಅಸೋಸಿಯೇಷನ್ ಬೆಳವಣಿಗೆಯಲ್ಲಿ ಕುಟುಂಬದ ಪ್ರತಿಯೊಬ್ಬರ ಸಹಕಾರ ಮತ್ತು ಉತ್ಸಾಹಗಳಿಂದಾಗಿ ಕಳೆದ ಹತ್ತು ವರ್ಷಗಳಲ್ಲಿ ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಯಿತು.ಇದಕ್ಕಾಗಿ ಕುಟುಂಬದ ಪ್ರತಿಯೊಬ್ಬರಿಗೂ ಅಭಾರಿಯಾಗಿದ್ದೇನೆ ಎಂದರು.ಕುಟುಂಬದಲ್ಲಿ ಪರಸ್ಪರ ಭಾವನಾತ್ಮಕ ಸಂಬಂಧ ಬೆಳೆದಾಗ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಏಳಿಗೆ ಸಾಧಿಸಲು ಸಾಧ್ಯ ಎಂದು ಅವರು ಹೇಳಿದರು.

ನಿವೃತ್ತ ಪೋಲೀಸ್ ಅಧಿಕಾರಿ ಜಿ.ಎ.ಬಾವಾ ಅವರು ಮಾತನಾಡಿ ಡಾ.ಕೆ.ಕುಂಞಾಲಿಯವರ ನೇತೃತ್ವದಲ್ಲಿ ಮುಟ್ಟಾಜೆ ಫ್ಯಾಮಿಲಿ ಅಸೋಸಿಯೇಷನ್ ಸಮಾಜಮುಖೀ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಕಳೆದ ಹತ್ತು ವರ್ಷಗಳಲ್ಲಿ ಸತತವಾಗಿ ಅಧ್ಯಕ್ಷರಾಗಿ ಮುಂದುವರಿಯುತ್ತಿರುವುದು ಶ್ಲಾಘನೀಯ. ಯಾವುದೇ ಕುಟುಂಬ ಶೈಕ್ಷಣಿಕವಾಗಿ ಬಲಿಷ್ಠವಾದರೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಿಷ್ಠವಾಗುತ್ತದೆ ಮತ್ತು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಇರಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಹಿರಿಯರಾದ ಖತೀಜಮ್ಮ ಹಜ್ಜುಮ್ಮ ಬಾಚಳಿಕೆ ಮತ್ತು ಡಾ.ಮುಹಮ್ಮದ್ ಶಾಲಿಮಾರ್‌ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಡಾ.ಸಾದತ್ ಹುಸೈನ್, ಎಂಡಿ (ಜನ್ ಮೆಡ್)
ಅಝ್ಮೀನ ಬೀ.ಇ.
ಡಾ.ಹಸನ್ ಸಾನಿಮ್. ಬೀ.ಎ.ಎಂ.ಎಸ್
ಡಾ.ಅಬ್ದುಲ್ ಹಶದ್, ಬೀ.ಡಿ.ಎಸ್
ಖತೀಜತ್ ಅಸ್ಪಾನ ಎಂ.ಬೀ. ಎ.
ಇವರನ್ನು ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ನಿವೃತ್ತ ಅಧಿಕಾರಿ ಎನ್.ಇಬ್ರಾಹಿಂ ನಾಯರ್ ಮೂಲೆಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅಸೋಸಿಯೇಷನ್ ಉಪಾಧ್ಯಕ್ಷ ಡಾ.ಎನ್.ಉಮರು,ಅಬೂ ಸ್ವಾಲಿಹ್ ಹಾಜಿ ಪಾರೆ,ದಶಮಾನೋತ್ಸವ ಸಮಿತಿ ಚೆಯರ್‌ಮ್ಯಾನ್ ಹನೀಫ್ ಹಾಜಿ ಮುಟ್ಟಾಜೆ,ನೂತಿಲ ಮುಹಮ್ಮದ್,ಕನ್ವೀನರ್ ಹಮೀದ್ ಪಾರೆ,ಅಹ್ಮದಲಿ ಕಾನಾಜೆ,ಬಿ.ಕುಂಞಿ ಅಂದು,ಹಮೀದ್ ಎಡಂಬಳೆ,ಅಬ್ಬು ಹಾಜಿ, ರಝಾಕ್ ಬಾಚಳಿಕೆ, ಹಾರಿಸ್ ಬಾಚಳಿಕೆ,ಅಶ್ರಫ್ ಬಾಚಳಿಕೆ, ಇಬ್ರಾಹಿಂ ಪಾರೆ, ಅಬ್ದುಲ್ಲ ಪಾರೆ,ಕುಂಞಿಮೋನು ನಾಯರ್‌ಮೂಲೆ,ಕಾರ್ಯದರ್ಶಿ ನಫೀಸ ಉಮರು,ಕುಂಞಿ ಮುಟ್ಟಾಜೆ, ಸಾದಿಕ್ ಮುಟ್ಟಾಜೆ ಉಪಸ್ಥಿತರಿದ್ದರು.
ಹಮೀದ್ ಕುಂಞಾಲಿ ಸ್ವಾಗತಿಸಿದರು.ಆಲಿಕುಂಞಿ ಪಾರೆ, ಎನ್.ಇಬ್ರಾಹಿಂ ಕಾರ್ಯಕ್ರಮ ನಿರೂಪಿಸಿದರು.ಡಾ.ಎ.ಎ.ಫಝಲ್ ವಂದಿಸಿದರು. ವರದಿ : ಆಲಿಕುಂಞಿ ಪಾರೆ