February 10, 2025

Vokkuta News

kannada news portal

ಮುಸ್ಲಿಮ್ ಮಹಿಳಾ ವಿರುದ್ಧದ ಭಟ್ ಹೇಳಿಕೆ: ಡಿ.28 ಮುಸ್ಲಿಮ್ ಒಕ್ಕೂಟ ಉಳ್ಳಾಲ ಪ್ರತಿಭಟನೆ.

ಉಳ್ಳಾಲ: ಮಂಡ್ಯದ ಧಾರ್ಮಿಕ ಕಾರ್ಯಕ್ರಮ ಒಂದರಲ್ಲಿ ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ರವರು ತನ್ನ ಭಾಷಣದಲ್ಲಿ ಪ್ರಸ್ತಾಪಿಸುತ್ತಾ ಮುಸ್ಲಿಮ್ ಮಹಿಳಯರಿಗೆ ದಿನಕ್ಕೊಂದು ಗಂಡ, ಮುಸ್ಲಿಮ್ ಹೆಂಗಸರಿಗೆ ಪರ್ಮನೆಂಟ್ ಗಂಡಂದಿರನ್ನು ನೀಡಿದ್ದು ಮೋದಿ ಎಂಬಿತ್ಯಾದಿಯಾಗಿ ಮುಸ್ಲಿಮ್ ಮಹಿಳೆಯರ ವಿರುದ್ಧ ಅವಹೇಳನಾಕಾರಿ ಮತ್ತು ಕೋಮು ಪ್ರಚೋದಿತ,ಗಲಭೆಗೆ ಕಾರಣವಾಗುವ ವಿವಾದಿತ ಹೇಳಿಕೆಗಳನ್ನು ನೀಡಿದ್ದರು. ಈ ಹೇಳಿಕೆ ರಾಜ್ಯದಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದೆ.

ಮುಸ್ಲಿಮ್ ಒಕ್ಕೂಟ ಉಳ್ಳಾಲ ಕಲ್ಲಡ್ಕ ಭಟ್ಟರ ಈ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ನಾಳೆ ಡಿಸೆಂಬರ್ 28 ರಂದು ಪೂರ್ವಾಹ್ನ ಗಂಟೆ 11.00 ಕ್ಕೆ ಉಳ್ಳಾಲದ ಅಬ್ಬಕ್ಕ ವೃತ್ತದ ಬಳಿ ಸಾಮೂಹಿಕ ಶಾಂತಿಯುತ ಪ್ರತಿಭಟನೆ ನಡೆಸಲಿದೆ ಎಂದು ಸಂಘಟನೆಯ ಪದಾಧಿಕಾರಿಗಳಾದ ಅಬ್ದುಲ್ ರಹಿಮಾನ್ ಉಳ್ಳಾಲ,ಇಸ್ಮಾಯಿಲ್ ಉಳ್ಳಾಲ,ಖಲೀಲ್ ಮತ್ತು ಜತೆ ಕಾರ್ಯದರ್ಶಿ ಬಾತಿಷ್ ಉಳ್ಳಾಲ ಹೇಳಿಕೆ ನೀಡಿದ್ದಾರೆ.

ಕಲ್ಲಡ್ಕ ಭಟ್ ವಿರುದ್ಧ ಇತ್ತೀಚೆಗೆ ನಜ್ಮಾ ನಝೀರ್ ಅವರು ಮಂಡ್ಯ ಪೊಲೀಸ್ ಸ್ಟೇಶನ್ ನಲ್ಲಿ ದೂರು ಸಲ್ಲಿಸಿದ್ದು, ಜಾಮೀನು ರಹಿತ ಕಲಂ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ,ಎಂದು ತಿಳಿದು ಬಂದಿದೆ.