January 2, 2025

Vokkuta News

kannada news portal

ಉಳ್ಳಾಲ ನಾಗರಿಕ ವೇದಿಕೆಯ ಲಾಂಛನ ಬಿಡುಗಡೆ,ಸಾಧಕರಿಗೆ ಸನ್ಮಾನ.

ಉಳ್ಳಾಲ: ನಮ್ಮೂರನ್ನು ಸೌಹಾರ್ದತೆ ಯ ನೆಲೆಯಾಗಿ ನಿರ್ಮಾಣ ಮಾಡಲು ಎಲ್ಲರೂ ಶ್ರಮ ವಹಿಸಬೇಕು. ಜಾತಿ ಮತ ಪಂಥ ಬಿಟ್ಟು ಎಲ್ಲರೂ ಏಕತೆಯಿಂದ ಸಂಘಟನಾತ್ಮಕವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಇದು ಸಾಧ್ಯ ಎಂದು ಉಳ್ಳಾಲ ಪೋಲೀಸ್ ಇನ್ಸ್ಪೆಕ್ಟರ್ ಬಾಲಕೃಷ್ಣ ಹೇಳಿದರು.
ಅವರು ಉಳ್ಳಾಲ ನಾಗರಿಕ ವೇದಿಕೆ , ಸುಸ್ಥಿರ ಉಳ್ಳಾಲ ಕನಸು ಗಾರರ ಬಳಗ ಉಳ್ಳಾಲ ಮತ್ತು ರೋಶನಿ ಹಳೇ‌ ವಿದ್ಯಾರ್ಥಿ ಸಂಘ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ
ಮಾಸ್ತಿಕಟ್ಟೆ ಯಲ್ಲಿ ರುವ ಅದಮ್ಯ ಚೇತನ ವಿಶೇಷ ಮಕ್ಕಳ ಹಗಲು ಪಾಲನಾ ಕೇಂದ್ರದಲ್ಲಿ ನಡೆದ
ಪುಸ್ತಕ ಬಿಡುಗಡೆ, ಪೌರ ಸನ್ಮಾನ ಹಾಗೂ ಉಳ್ಳಾಲ ನಾಗರಿಕ ವೇದಿಕೆಯ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ರೋಶನಿ ಹಳೆ‌ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಿಸ್ ಇವಲಿನ್ ಬೆನಿಸ್ ಉದ್ಘಾಟಿಸಿದರು. ಉಳ್ಳಾಲ ನಾಗರಿಕ ವೇದಿಕೆಯ ಅಧ್ಯಕ್ಷ
ಸಾಗರ್ ಖಾಲೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಈ ಸಂದರ್ಭದಲ್ಲಿ ಕು. ತನುಜಾ ರವರು ಬರೆದ ಉಳ್ಳಾಲ ದ ಬದಲಾವಣೆಯ ಹರಿಕಾರರು ಪುಸ್ತಕ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಉಡುಪಿ ನಗರ ಸಭೆ ಪೌರಾಯುಕ್ತ ರಾಯಪ್ಪ, ದರ್ಗಾ ಮಾಜಿ ಅಧ್ಯಕ್ಷ ಅಬ್ದುಲ್ ರಶೀದ್, ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಕೆ ಎಂ ಕೆ ಮಂಜನಾಡಿ, ನಿವೃತ್ತ ಶಿಕ್ಷಕಿ ಜಾನಕಿ ಪುತ್ರನ್, ವಾಸುದೇವ ರಾವ್, ಸುಂದರ ಉಳಿಯ, ಪ್ರೀತಂ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರ ಸಭೆ ಕೌನ್ಸಿಲರ್
ಜಬ್ಬಾರ್, ಯೂತ್ ಸ್ಪೋರ್ಟ್ಸ್ ಅಕಾಡೆಮಿ ನಿರ್ದೇಶಕ ಸಾಜಿದ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು
ಉಳ್ಳಾಲ ನಾಗರಿಕ ವೇದಿಕೆಯ ಸಂಚಾಲಕ
ಝಾಕಿರ್ ಇಕ್ಲಾಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಉ.ನಾ.ವೇದಿಕೆ ಸದಸ್ಯರಾದ ಜ.ಇ.ಹಿಂದ್ ಉಳ್ಳಾಲ ಘಟಕ ಅಧ್ಯಕ್ಷ ಅಬ್ದುಲ್ ಕರೀಂ , ಮಾಜಿ ಕೌನ್ಸಿಲರ್ ಇಬ್ರಾಹಿಂ, ಫಿರೋಜ್ ಕೋಟೆಪುರ, ಇಪ್ತಿಕಾರ್ ಕೋಟೆಪುರ, ರೋಹಿದಾಸ್ ಬಂಗೇರ, ನವೀನ್ ನಾಯಕ್, ಶರೀಫ್, ಉಮರ್ ಫಾರೂಕ್ ಆಲೆಕಲ, ದಾಕ್ಷಾಯಿಣಿ, ಎನ್ ಐ ಟಿ ಕೆ ಪ್ರಾಂಶುಪಾಲೆ ಪ್ರಮೀಳಾ ಕೊಂಡಾಣ, ಇಮ್ತಿಯಾ ಸಿಎಂಸಿ, ಸೈಯದ್ ಬಂಗಲೆ, ಇಬ್ರಾಹಿಂ ಕಂದಕ್ ಇತರರು ಉಪಸ್ಥಿತರಿದ್ದರು.
ಮಕ್ಕಳ ಸಾಹಿತ್ಯ ಪರಿಷತ್ ಉಳ್ಳಾಲ ಅಧ್ಯಕ್ಷ ಸಿಹಾನ ಬಿ.ಎಂ., ಸುಸ್ಥಿರ ಉಳ್ಲಾಲ ಕನಸುಗಾರರ ಬಳಗದ ಸಂಚಾಲಕ ಕಿಶೋರ್ ಅತ್ತಾವರ್ ಕಾರ್ಯಕ್ರಮ ನಿರೂಪಿಸಿದರು.