July 27, 2024

Vokkuta News

kannada news portal

ಕಾಂಗ್ರೆಸ್ ಸಂಘ ಸ್ಥಿತಿಯನ್ನು ಇನ್ನೂ ಅರಿತಿಲ್ಲ: ಮುಸ್ಲಿಮ್ ವಾಯ್ಸ್ ವರ್ಚುವಲ್ ಸಂವಾದದಲ್ಲಿ ನವೀನ್ ಸೂರಿಂಜೆ,ರಷೀದ್ ಹಾಜಿ.

ನಿನ್ನೆ ನಡೆದ ಮುಸ್ಲಿಮ್ ವಾಯ್ಸ್ ವಾಟ್ಸ್ ಆ್ಯಪ್ ವರ್ಚುವಲ್ ಸಂವಾದ ಕಾರ್ಯಕ್ರಮದಲ್ಲಿ ಮತೀಯ ವಿದ್ವೇಶತೆ ಮತ್ತು ಪ್ರಸಕ್ತ ರಾಜಕಾರಣ ಎಂಬ ವಿಷಯದ ಬಗ್ಗೆ ನಿರೂಪಕರ ಸಂವಾದ ಪ್ರಶ್ನೆಗೆ ಉತ್ತರಿಸುತ್ತಾ ನವೀನ್ ಸೂರಿಂಜೆ ಅವರು ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ವೊಂದರಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ರವರು ಮತೀಯ ವಿದ್ವೇಶ ಉದ್ದೇಶಿತ ಮಹಿಳೆಯರ ವಿರುದ್ಧದ ಹೇಳಿಕೆ,ನಂತರದ ಬೆಳವಣಿಗೆಯಲ್ಲಿ ಮೈಸೂರಿನ ನಜ್ಮಾ ನಝೀರ್ ಚಿಕ್ಕ ನೇರಳೆ ರವರು ದಾಖಲಿಸಿದ ಪ್ರಕರಣ, ರಾಜ್ಯದ ಜನತೆ ಕಲ್ಲಡ್ಕ ಪ್ರಭಾಕರ ಭಟ್ ರನ್ನು ಬಂಧಿಸುವಂತೆ ಮಾಡಿದ ಒತ್ತಾಯ, ಮಾನ್ಯ ನ್ಯಾಯಾಲಯ ಆರೋಪಿತ ರಿಗೆ ನೀಡಿದ ಮಧ್ಯಂತರ ಜಾಮೀನು , ಸರಕಾರಿ ವಕೀಲರ ನಡೆ,ನಂತರದ ಬೆಳವಣಿಗೆಯಲ್ಲಿ ಸಾರ್ವಜನಿಕರಿಗೆ ಪ್ರತಿಭಟನೆಗೆ ಅನುಮತಿ ನಿರಾಕರಣೆ, ಎಡ ಸಂಘಟನೆಗಳ ಪ್ರತಿಭಟನಾ ಕರ್ತರ ಮೇಲೆ ಪ್ರಕರಣ ದಾಖಲು,ಕಾಂಗ್ರೆಸ್ ಪಕ್ಷ ಸಂಘ ಮನಸ್ಥಿತಿಯನ್ನು ಅರಿಯದಿರುವಿಕೆ,ಸಾರ್ವಜನಿಕರ ಪ್ರಗತಿ ಪರರ, ಬುದ್ದಿಜೀವಿಗಳ ತೀವ್ರ ಪ್ರತಿರೋಧ ಇತ್ಯಾದಿ ಬಗ್ಗೆ ತಮ್ಮ ದ್ವನಿ ಸಂದೇಶ ದ ಮೂಲಕ ವಿವರಿಸಿದರು.
ಪ್ರಕರಣದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ನ್ಯಾಯಾಲಯವನ್ನು ಸಂಪರ್ಕಿಸುವ ಸಂಧರ್ಭದಲ್ಲಿ ಫಿರ್ಯಾದಿ ದಾರೆ ನಜ್ಮಾ ರವರ ವಕೀಲರು ನ್ಯಾಯಾಲಯಕ್ಕೆ ಕೆಲವು ವಿಷಯಗಳನ್ನು ಮನವರಿಕೆ ಮಾಡುವ ದೃಷ್ಟಿಯಿಂದ ಅವರ ತಂಡ ಮಾಡಿದ ಪ್ರಯತ್ನ ವನ್ನು ತಮ್ಮ ಸಂಭಾವ್ಯ ಪ್ರಶ್ನೆಗಳು.ನವೀನ್ ಸೂರಿಂಜೆ ಅವರು ತಮ್ಮ 6.17 ನಿಮಿಷ ಮತ್ತು 2.17 ನಿಮಿಷದ ದ್ವನಿ ಸಂದೇಶದಲ್ಲಿ ವಿವರಿಸಿದರು. ಮುಂದುವರಿದು ಅವರು,

1. ಮುಸ್ಲಿಮ್ ಮಹಿಳೆಯರನ್ನು ಅವಮಾನಿಸುವ ಮೂಲಕ ಪ್ರಭಾಕರ್ ಭಟ್,ವ್ಯಾಪಕವಾಗಿ ಮೈಸೂರು ಪ್ರಾಂತ್ಯವನ್ನು ಮತೀಯವಾದದ ಲ್ಯಾಬ್ ಆಗಿ ಪರಿವರ್ತಿಸಲು ಪ್ರಯತ್ನಿಸಿದೆ? ಎಂಬ ಪ್ರಶ್ನೆಗೆ ನವೀನ್ ಸೂರಿಂಜೆ ಅವರು ತಮ್ಮ 2.54 ನಿಮಿಷದ ದ್ವನಿ ಸಂದೇಶದಲ್ಲಿ ವಿವರಿಸಿದರು.

2. ಕರಾವಳಿಯಲ್ಲಿ ಪ್ರಸ್ತುತ ಸಂಘ ಮಿತ್ರರ ಉದ್ದೇಶಕ್ಕೆ ಹಾಲಿ ಪ್ರಗತಿಪರ ಸಂಘಟನೆಗಳ ತೀವ್ರ ಪ್ರತಿರೋಧ ಸೃಷ್ಟಿಯಾದ ಕಾರಣಕ್ಕೆ , ತಮ್ಮ ಕಾರ್ಯ ಚಟುವಟಿಕೆಗಳನ್ನು ಸಂಸ್ಕೃತ ನಗರಿ ಮೈಸೂರಿಗೆ ವರ್ಗಾಯಿಸಿದಂತಿದೆ? ಎಂಬ ಪ್ರಶ್ನೆಗೆ ಅವರು 2.25 ನಿಮಿಷ ದ್ವನಿಯಲ್ಲಿ ವಿವರಣೆ ನೀಡಿದ್ದಾರೆ.

3. ಆ ಮೂಲಕ ಮುಸ್ಲಿಮ್ ಸಮುದಾಯವನ್ನು ಪ್ರಚೋದಿಸಿ,ರಾಜ್ಯದ ಹಿಂದುಳಿದ,ದಲಿತರ,ಬುಡಕಟ್ಟು, ಪರಿಶಿಷ್ಟರ,ನೈಜ ಸಮಸ್ಯೆಗಳನ್ನು ಬದಿಗೆ ಸರಿಸಲು ಪ್ರಯತ್ನಿಸಿದೆ? ಇದಕ್ಕೆ ಅವರು ತಮ್ಮ 2.15 ನಿಮಿಷದ ದ್ವನಿ ಬಿಡುಗಡೆ ಗೊಳಿಸಿದ್ದಾರೆ.
4. ಪ್ರಜಾ ಪ್ರಭುತ್ವದ ಪ್ರತಿಭಟನಾ ಸ್ಥಳದ ಹಕ್ಕನ್ನು ದಲಿತ,ಪರಿಶಿಷ್ಟರ,ಬುಡಕಟ್ಟು, ಆದಿವಾಸಿ ಜನಾಂಗದಿಂದ ಅವರಿಗೆ ಅರಿವಿಲ್ಲ ದಂತೆ, ಅವರಿಂದ ಕಸಿದು, ಅವರಿಗೆ ಪ್ರತಿಭಟನಾ ಜಾಗೃತಿ ಸೃಷ್ಟಿ ಆಗದಂತೆ,ಮುಸ್ಲಿಮ್ ಸಮುದಾಯದ ಕೈಗೆ ಬಲವಂತವಾಗಿ ನೀಡಿದಂತಿದೆ ?. ಎಂಬ ಪ್ರಶ್ನೆಗೆ ಅವರು 2.51 ನಿಮಿಷದ ದ್ವನಿ ನೀಡಿದ್ದಾರೆ.
5. ಹಾಲಿ ಅಧಿಕಾರದಲ್ಲಿರುವ ಪ್ರಮುಖ ರಾಜಕೀಯ ಪಕ್ಷವು ನಿಧಾನವಾಗಿ ಬಲ ಪಂತೀಯ ನಿಲುವು ಹೊಂದಲು ಪ್ರಯತ್ನಿಸುತ್ತಿದೆ? ಎಂಬ ಪ್ರಶ್ನೆಗೆ 2.17 ಮತ್ತು 2.56 ನಿಮಿಷದ ದ್ವನಿ ನೀಡಿದ್ದಾರೆ.

6. ಕಲ್ಲಡ್ಕ ಪ್ರಭಾಕರ್ ಭಟ್ ರನ್ನು ಮಹಿಳಾ ನಿಂದನೆ ಪ್ರಕರಣದಲ್ಲಿ ಜಾಮೀನು ಲಭ್ಯವಾಗಿಸುವ ಮೂಲಕ ರಾಜ್ಯದಲ್ಲಿ ಒಂದು ಮಹಾ ಕಾನೂನು ಸುವ್ಯವಸ್ತೆ ಸಮಸ್ಯ ಯನ್ನು ನಿಭಾಯಿಸಿದಂತಿದೆ? ಎಂಬ ಪ್ರಶ್ನೆಗೆ ಅವರು 3.13 ನಿಮಿಷದ ದ್ವನಿ ನೀಡಿದ್ದಾರೆ.
9. ಧಾರ್ಮಿಕ ನಿಂದನೆ ವಿಷಯಗಳಲ್ಲಿ ಹಾಲಿ ಅಧಿಕಾರದಲ್ಲಿರುವ ಪ್ರಮುಖ ರಾಜಕೀಯ ಪಕ್ಷವು ಮುಸ್ಲಿಮ್ ಸಮುದಾಯಕ್ಕೆ ಪ್ರತಿಭಟನಾ ಹಕ್ಕನ್ನು ನಿರಾಕರಿಸುವಂತಿದೆ? ಎಂಬ ಪ್ರಶ್ನೆಗೆ 3.34 ನಿಮಿಷದ ದ್ವನಿ ನೀಡಿದ್ದಾರೆ.
ಕೊನೆಯಲ್ಲಿ ಉಳ್ಳಾಲ ದರ್ಗಾ ಷರೀಫ್ ಅಧ್ಯಕ್ಷರಾದ ಅಬ್ದುಲ್ ರಶೀದ್ ಹಾಜಿ ಮಾತನಾಡಿ ನವೀನ್ ಸೂರಿಂಜೆ ಮಾತಿಗೆ ದ್ವನಿಗೂಡಿಸಿ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ಕಾನೂನು ಹೋರಾಟವನ್ನು ಮುಂದುವರಿಸಿ ಕೊಂಡು ಹೋಗಲು ಕೋರಿದ್ದಾರೆ.
ವರ್ಚುವಲ್ ಸಂವಾದದಲ್ಲಿ ಸಿಪಿಎಂ ಪಕ್ಷದ ರಾಜ್ಯ ಪದಾಧಿಕಾರಿಗಳಾದ ಕಾಮ್. ಮುನೀರ್ ಕಾಟಿಪಳ್ಳ, ಇಮ್ತಿಯಾಜ್, ಕೆ.ಅಶ್ರಫ್,ಎಸ್.ಡಿ.ಪೀ.ಐ ಮುಂದಾಳು ರಿಯಾಝ್ ಪರಂಗಿಪೇಟೆ, ಅಬ್ದುಲ್ ಜಲೀಲ್ ಕೃಷ್ಣಾಪುರ ಮತ್ತು ಗ್ರೂಪ್ ಸದಸ್ಯರು ಭಾಗಿಯಾಗಿದ್ದರು.