ಮಂಗಳೂರು: ಇತ್ತೀಚೆಗೆ ಬಿಜೆಪಿ ಪಕ್ಷದ ದ.ಕ.ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ತನ್ನ ಭಾಷಣದಲ್ಲಿ ಹಾಲಿ ಚುನಾವಣೆ ದೇಶಪ್ರೇಮಿ ಗಳಿಗೂ ಮತ್ತು ದೇಶ ದ್ರೋಹಿಗಳ ಮದ್ಯೆ ನಡೆಯುವ ಚುನಾವಣೆ ಎಂದು ಹೇಳಿದ್ದಾರೆ. ಚೌಟ ಜನತೆಗೆ ಉತ್ತರಿಸಲಿ, ಬಹುಕೋಟಿ ಮೊತ್ತದ ಚುನಾವಣಾ ಬಾಂಡ್ ಅಕ್ರಮ, ಚುನಾವಣಾ ಪೂರ್ವ ಪ್ರಮುಖ ರಾಜಕೀಯ ನಾಯಕರ ಬಂಧನ, ಬ್ಯಾಕ್ ಖಾತೆಗಳ ಸ್ಥಗಿತತೆ,ಚುನಾವಣಾ ಆಯುಕ್ತರ ದಿಡೀರ್ ಬದಲಾವಣೆ,ಪೌರತ್ವ ಕಾನೂನುಗಳ ಜಾರಿ, ಭರವಸಿತ ಪ್ರಣಾಳಿಕೆಗಳ ಅನನುಷ್ಟಾನತೆ,ಸರ್ವಾಧಿಕಾರಿ ನೀತಿ, ಜಿಡಿಪಿ ಇಳಿಕೆಗಳೆಲ್ಲವೂ ದೇಶಪ್ರೇಮವನ್ನು ಒಳಗೊಂಡಿದೆಯೆ? ಎಂದು ಉತ್ತರಿಸಲಿ. ಕಳೆದ ಮೂರು ದಶಕಗಳಿಂದ ಲೋಕಸಭೆಯಲ್ಲಿ ದ.ಕ.ಜಿಲ್ಲೆಯ ಅಸ್ಮಿತೆಯ ಬಗ್ಗೆ ಒಂದಕ್ಷರವೂ ಪ್ರತಿನಿಧಿಸದ ಈ ಹಿಂದಿನ ಸಂಸದರು, ಈ ಜಿಲ್ಲೆಯನ್ನು ಎಷ್ಟು ಪ್ರಗತಿಗೊಳಿಸಿದ್ದಾರೆ?, ಈ ಜಿಲ್ಲೆಯ ಸಾಮರಸ್ಯವನ್ನು ಹೇಗೆ ನಿಭಾಯಿಸಿದ್ದಾರೆ?,ದ.ಕ.ಜಿಲ್ಲೆಗೆ ಪೂರಕವಾಗುವಂತಹ ಅಭಿವೃದ್ದಿ ಯೋಜನೆಗಳು ಕೈತಪ್ಪಲು ಯಾರು ಕಾರಣರು?, ಎಂಬಿತ್ಯಾದಿ ಪ್ರಶ್ನೆಗಳಿಗೆ ಮೊದಲು ಉತ್ತರಿಸಲಿ,ಜಿಲ್ಲೆಯ ನಾಡಿನ ಹೆಮ್ಮೆಯ ಪುತ್ರ ಪದ್ಮರಾಜ್ ಆರ್.ಗೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಚರಿತ್ರೆಯಿರುವ ಭಾರತೀಯ ಕಾಂಗ್ರೆಸ್ ಪಕ್ಷ ಈ ಬಾರಿ ಅಭ್ಯರ್ಥಿತನ ನೀಡಿದೆ.
ಪ್ರಗತಿ, ನಾಡು ರಕ್ಷಣೆ,ಸೌಹಾರ್ಧ ಸ್ಥಾಪನೆ,ಅಸ್ಮಿತೆಯ ಸಂರಕ್ಷಣೆಯ ಆಧಾರದಲ್ಲಿ ಜಿಲ್ಲೆಯ ಜನತೆ ಅವರನ್ನು ಲೋಕ ಸಭೆಗೆ ಚುನಾಯಿಸಿ ಕಳುಹಿಸಲಿದ್ದಾರೆ.ಮೂರು ದಶಕಗಳ ನಂತರ ಜಿಲ್ಲೆಯ ಹೆಸರು ಲೋಕಸಭೆಯಲ್ಲಿ ಮೊಳಗಲಿದೆ ಎಂದು ಕೆ.ಅಶ್ರಫ್( ಮಾಜಿ ಮೇಯರ್)
ದ.ಕ.ಜಿಲ್ಲಾ ಕಾಂಗ್ರೆಸ್ ರವರು ಹೇಳಿಕೆ ನೀಡಿದ್ದಾರೆ.
ಇನ್ನಷ್ಟು ವರದಿಗಳು
ಪಿ.ಎ.ಪ್ರಥಮ ಗ್ರೇಡ್ ಕಾಲೇಜು ರಕ್ತದಾನ ಶಿಬಿರ ಆಯೋಜನೆ: ರೆಡ್ ಕ್ರಾಸ್ ಸಂಸ್ಥೆಯಿಂದ ಅಬ್ಬಾಸ್ ಉಚ್ಚಿಲ್ ರೊಳಗೊಂಡು ಹಲವರಿಗೆ ಸನ್ಮಾನ.
ತೋಟಾಳ್ ಟಿ.ಕೆ.ಇಸ್ಮಾಯಿಲ್ ನಿಧನ: ಸೋ.ಮೀಡಿಯಾ ಯಾಕ್ಟಿವಿಸ್ಟ್ ಅಶ್ಫಾಕ್ ರವರಿಗೆ ಪಿತೃ ವಿಯೋಗ:
ಉಳ್ಳಾಲ, ಪಿಯು: ಅಲ್ ಬಯಾನ್ ಅರಬಿಕ್ ಕಾಲೇಜು: ಶೇ 100 ಫಲಿತಾಂಶ.