November 18, 2024

Vokkuta News

kannada news portal

ಪಿ.ಬಿ. ಡೆ’ಸ್ಸಾ ಅಂತಿಮ ದರ್ಶನ: ಕುಟುಂಬ, ಸಾರ್ವಜನಿಕರಿಂದ ವಾಕ್ ನಮನ.

ಮಂಗಳೂರು: ಮಾನವ ಹಕ್ಕು ಮತ್ತು ಸಾಮಾಜಿಕ ಹೋರಾಟಗಾರ ಪಿ. ಬಿ. ಡೆ’ಸ್ಸಾ ರವರ ನಿನ್ನೆ ನಿಧನ ಹೊಂದಿದ್ದು, ಇಂದು ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಮಂಗಳೂರು ವಲೆನ್ಸಿಯಾದ ಅವರ ನಿವಾಸ ಎನ್ ಫೋರ್ಸ್ ಪೌಲಿನ್ ಸಂಕೀರ್ಣ ದಲ್ಲಿ ಸಾರ್ವಜನಿಕ ವೀಕ್ಷಣೆ ಮಾಡಲಾಯಿತು.

ಕುಟುಂಬ ಸದಸ್ಯರಿಂದ ಮತ್ತು ಸಾರ್ವಜನಿಕರಿಂದ ಮತ್ತು ಎನ್.ಜಿ. ಓ ಗಳಿಂದ ವಾಕ್ ನಮನ ಮತ್ತು ಪ್ರಾರ್ಥನೆ ಏರ್ಪಡಿಸಲಾಗಿತ್ತು. ಕುಟುಂಬ ಸದಸ್ಯರಲ್ಲಿ ಪ್ರಮುಖರಾದ ಪ್ರೀತಿಕಾ ರವರು ಮೃತ ಪಿ.ಬಿ.ಡೆಸ್ಸಾ ರವರ ಜೀವನದ ಆಗು ಹೋಗು,ನೋವು ನಲಿವು,ಸಂಧಿಗ್ಧತೆಗಳ ಬಗ್ಗೆ ವಿವರಿಸಿದರು. ಮೆಲ್ವಿನ್ ರವರು ಮಾತನಾಡಿ ಆರಂಭದ ಮಾನವ ಹಕ್ಕು ಹೋರಾಟದ ಘಟನೆಗಳನ್ನು ವಿವರಿಸಿದರು. ಟಿ.ಆರ್.ಭಟ್, ಹಿರಿಯ ಪಿಯುಸಿಎಲ್ ಸದಸ್ಯರು ಡೆಸ್ಸಾ ಅವರ ಸಾಮಾಜಿಕ ಮತ್ತು ಮಾನವ ಹಕ್ಕು ಹೋರಾಟ ನಡೆದು ಬಂದ ದಾರಿ ಮತ್ತು ಹಲವು ಘಟನೆಗಳನ್ನು ಸ್ಮರಿಸಿದರು, ಅಂತಿಮ ದರ್ಶನದಲ್ಲಿ ಅವರ ಕುಟುಂಬಸ್ಥರು, ಹಿತೈಷಿಗಳು, ಸಾಮಾಜಿಕ ಕಾರ್ಯಕರ್ತರು ಸೇರಿ ಹಲವಾರು ಭಾಗವಹಿಸಿದರು.

ಪಿ.ಬಿ. ಡೇಸ್ಸಾ ರವರ ಪೂರ್ವ ಇಚ್ಚೆಯಂತೆ ಅವರ ಪಾರ್ಥಿವ ಶರೀರವನ್ನು ಶೈಕ್ಷಣಿಕ ಸಂಶೋಧನೆ ಉದ್ದೇಶಕ್ಕಾಗಿ ನಗರದ ಪ್ರಮುಖ ವೈದ್ಯಕೀಯ ಆಸ್ಪತ್ರೆಗೆ ಹಸ್ತಾಂತರ ಮಾಡುವುದೆಂದು ಕುಟುಂಬ ಮೂಲಗಳು ತಿಳಿಸಿವೆ.