November 5, 2024

Vokkuta News

kannada news portal

ಕೆಲಸದ ಒತ್ತಡ,ಇಂದಿನಿಂದ ಗ್ರಾಮ ಆಡಳಿತಾಧಿಕಾರಿಗಳ ಅನಿರ್ಧಾಷ್ಟಾವಧಿ ಮುಷ್ಕರ,ಬೇಡಿಕೆ.

ಉಳ್ಳಾಲ: ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿ ಗಳಿಗೆ ಹಾಲಿ ಸೇವೆಯಲ್ಲಿ ತೀವ್ರ ಒತ್ತಡ ಮತ್ತು ಯಾಪ್ ಆಧಾರಿತ ಸೇವೆಯ ತೀವ್ರ ಅವಲಂಬನೆ, ಸೇವೆಯ ಫಲಿತಾಂಶ ವ್ಯತ್ಯಯ, ಸಾರ್ವಜನಿಕ ದೂರು ವ್ಯಾಪಕತೆ ಮತ್ತು ಇತರ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಇಂದು ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರವನ್ನು ಇಂದು ಕೈಗೊಂಡಿದ್ದು, ಉಳ್ಳಾಲ ತಾಲ್ಲೂಕು ಮಟ್ಟದ ಗ್ರಾಮ ಆಡಳಿತಾಧಿಕಾರಿ ಗಳು ಇಂದು ತಾಲ್ಲೂಕು ಕೇಂದ್ರವಾದ ನಾಟೆಕಲ್ ನಲ್ಲಿ ಮುಷ್ಕರ ಹೂಡಿದ್ದಾರೆ.

ಇಂದು ತಾರೀಕು 26/09/2024 ರಿಂದ ಅನಿರ್ದಿಷ್ಟ ಅವಧಿಗೆ ನಡೆದ ಮುಷ್ಕರದಲ್ಲಿ ಉಳ್ಳಾಲ ತಾಲ್ಲೂಕು ವಿನ ವಿವಿಧ ಗ್ರಾಮಗಳ ಗ್ರಾಮ ಆಡಳಿತಾಧಿಕಾರಿಗಳು, ಪಾಲ್ಗೊಂಡರು, ಸಂಘದ ಅಧ್ಯಕ್ಷರಾದ ಶ್ರೀ ತೌಫಿಕ್ ರವರ ನೇತೃತ್ವದಲ್ಲಿ ನಡೆದ ಮುಷ್ಕರದಲ್ಲಿ ಶ್ರೀಮತಿ ಅಕ್ಷತಾ, ಶ್ರೀಮತಿ ನವ್ಯ ಎಸ್ ಎನ್ ರಾವ್, ಶ್ರೀಮತಿ ಕಾವ್ಯ, ನಯನ, ರೇಷ್ಮಾ, ರಶೀದಾ, ನಿಂಗಪ್ಪ ಜಜ್ಜುರಿ, ಅಕ್ಷತಾ, ಅಕ್ಷಿತಾ, ಸುರೇಶ್ ಜೆ, ಅಮ್ಜದ್ ಖಾನ್, ಎ ಆರ್ ರಾಘವೇಂದ್ರ ಪ್ರದೀಪ್ ಕುಮಾರ್ ಪದಾಧಿಕಾರಿ ಗಳು ಮತ್ತು ಸದಸ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.