ಮಂಗಳೂರು: ಪಿಯುಸಿಎಲ್ ಸಂಘಟನೆಯ ವತಿಯಿಂದ ಅಂತರರಾಷ್ಟ್ರೀಯ ಮಾನವ ಹಕ್ಕು ದಿನಾಚರಣೆ ಸ್ಮರಣಾರ್ಥ ತಾರೀಕು 20 ನೇ ಡಿಸೆಂಬರ್ 2024 ರಂದು, ಮಂಗಳೂರಿನ ವೇಲೆನ್ಸಿಯಾ ರೋಶನಿ ನಿಲಯ ಕಾಲೇಜು ಸಭಾಂಗಣದಲ್ಲಿ ಬೆಳಿಗ್ಗೆ 10.00 ಗಂಟೆಗೆ , ಪ್ರಸಕ್ತ ಭಾರತದಲ್ಲಿ ಮಾನವ ಹಕ್ಕು ಎಂಬ ಶೀರ್ಷಿಕೆ ಅಡಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವೇಲೇರಿಯಲ್ ರೊಡ್ರಿಗಸ್ ಅವರು ಡಾ.ಬಾಬ ಸಾಹೇಬ್ ಅಂಬೇಡ್ಕರ್ ರವರ ಅರ್ಥದಲ್ಲಿ ಮಾನವಹಕ್ಕು ಮತ್ತು ಮಣಿಪುರದಲ್ಲಿ ಮಾನವ ಹಕ್ಕು ಸಂರಕ್ಷಣೆಯ ಸವಾಲುಗಳು ವಿಷಯದಲ್ಲಿ ಡಾ.ದು. ಸರಸ್ವತಿ ಯವರು ವಿಷಯ ಮಂಡನೆ ಮಾಡಲಿದ್ದು, ರೋಶನಿ ನಿಲಯ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ಕಾಲೇಜಿನ ಪ್ರಾಂಶುಪಾಲರಾದ ಡಾ ಸೂಪಿಯ ರವರು ಪ್ರಸ್ತಾವನೆ ಮಾಡಲಿದ್ದಾರೆ. ಕರ್ನಾಟಕ ಪಿಯುಸಿಎಲ್ ಅಧ್ಯಕ್ಷರಾದ ಅರವಿಂದ್ ನರೈನ್ ರವರು ಸಭೆಯ ಅಧ್ಯಕ್ಷತೆ ವಹಿಸಲಿದ್ದು , ಕಾರ್ಯದರ್ಶಿ ಶುಜಯತುಲ್ಲಾ ಸ್ವಾಗತಿಸಲಿದ್ದಾರೆ ಎಂದು ಪಿಯುಸಿಎಲ್ ಪ್ರಕಟಣೆ ತಿಳಿಸಿದೆ.
kannada news portal
ಇನ್ನಷ್ಟು ವರದಿಗಳು
ಪತ್ರಕರ್ತ ಸಿದ್ಧಾರ್ಥ್ ವರದರಾಜನ್ ಮತ್ತು ಕರಣ್ ಥಾಪರ್ ವಿರುದ್ಧದ ಮೊಕದ್ದಮೆಯನ್ನು ಅಸ್ಸಾಮ್ ಪೊಲೀಸರು ಹಿಂಪಡೆಯಬೇಕು: ಪಿಯುಸಿಎಲ್ ಒತ್ತಾಯ
ಮುರಿದು ಬಿದ್ದ ರಾಜ್ಯ, ವಿಭಜಿತ ಜನತೆ: ಮಣಿಪುರದ ಸ್ವತಂತ್ರ ಜನತಾ ನ್ಯಾಯಮಂಡಳಿಯ ವರದಿ ಬಿಡುಗಡೆ ಗೊಳಿಸಿದ ಪಿಯುಸಿಎಲ್.
ಮಾನವ ಅಕ್ರಮಸಾಗಣಿಕೆ-ಮತಾಂತರ, ಕೇರಳದ ಇಬ್ಬರು ಸನ್ಯಾಸಿನಿಯರಿಗೆ ಛತ್ತೀಸ್ಗಢ ನ್ಯಾಯಾಲಯ ಜಾಮೀನು.