ಮಂಗಳೂರು: ಪಿಯುಸಿಎಲ್ ಸಂಘಟನೆಯ ವತಿಯಿಂದ ಅಂತರರಾಷ್ಟ್ರೀಯ ಮಾನವ ಹಕ್ಕು ದಿನಾಚರಣೆ ಸ್ಮರಣಾರ್ಥ ತಾರೀಕು 20 ನೇ ಡಿಸೆಂಬರ್ 2024 ರಂದು, ಮಂಗಳೂರಿನ ವೇಲೆನ್ಸಿಯಾ ರೋಶನಿ ನಿಲಯ ಕಾಲೇಜು ಸಭಾಂಗಣದಲ್ಲಿ ಬೆಳಿಗ್ಗೆ 10.00 ಗಂಟೆಗೆ , ಪ್ರಸಕ್ತ ಭಾರತದಲ್ಲಿ ಮಾನವ ಹಕ್ಕು ಎಂಬ ಶೀರ್ಷಿಕೆ ಅಡಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವೇಲೇರಿಯಲ್ ರೊಡ್ರಿಗಸ್ ಅವರು ಡಾ.ಬಾಬ ಸಾಹೇಬ್ ಅಂಬೇಡ್ಕರ್ ರವರ ಅರ್ಥದಲ್ಲಿ ಮಾನವಹಕ್ಕು ಮತ್ತು ಮಣಿಪುರದಲ್ಲಿ ಮಾನವ ಹಕ್ಕು ಸಂರಕ್ಷಣೆಯ ಸವಾಲುಗಳು ವಿಷಯದಲ್ಲಿ ಡಾ.ದು. ಸರಸ್ವತಿ ಯವರು ವಿಷಯ ಮಂಡನೆ ಮಾಡಲಿದ್ದು, ರೋಶನಿ ನಿಲಯ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ಕಾಲೇಜಿನ ಪ್ರಾಂಶುಪಾಲರಾದ ಡಾ ಸೂಪಿಯ ರವರು ಪ್ರಸ್ತಾವನೆ ಮಾಡಲಿದ್ದಾರೆ. ಕರ್ನಾಟಕ ಪಿಯುಸಿಎಲ್ ಅಧ್ಯಕ್ಷರಾದ ಅರವಿಂದ್ ನರೈನ್ ರವರು ಸಭೆಯ ಅಧ್ಯಕ್ಷತೆ ವಹಿಸಲಿದ್ದು , ಕಾರ್ಯದರ್ಶಿ ಶುಜಯತುಲ್ಲಾ ಸ್ವಾಗತಿಸಲಿದ್ದಾರೆ ಎಂದು ಪಿಯುಸಿಎಲ್ ಪ್ರಕಟಣೆ ತಿಳಿಸಿದೆ.
kannada news portal
ಇನ್ನಷ್ಟು ವರದಿಗಳು
ಇಸ್ರೇಲ್ ಬಂಧನದಲ್ಲಿರುವ ಪ್ಯಾಲೆಸ್ಟೀನಿಯನ್ನರನ್ನು ವ್ಯವಸ್ಥಿತವಾಗಿ ಹಿಂಸಿಸುತ್ತಿದೆ: ವಿಶ್ವಸಂಸ್ಥೆ ತಜ್ಞೆ ಪ್ರಾನ್ಸೆಸಾ ಅಲ್ಬೇನೀಸ್
ಮಾತೃ ದಿನಾಚರಣೆ: 39 ಪ್ಯಾಲೆಸ್ಟೀನಿಯನ್ ತಾಯಂದಿರು ಇಸ್ರೇಲಿ ಜೈಲುಗಳಲ್ಲಿ ಉಳಿಕೆ: ಖೈದಿ ಗಳ ಸೊಸೈಟಿ ತೀವ್ರ ಕಳವಳ.
ಅಮೆರಿಕ: ಬಂಧನದಲ್ಲಿದ್ದ ಪ್ಯಾಲೆಸ್ಟೀನಿಯನ್ ಪರ ಕಾರ್ಯಕರ್ತೆ ಲೀಖಾ ಬಿಡುಗಡೆ. ಇ – ಮೇಲ್ ಕ್ಯಾಂಪೇನ್ ನಡೆಸಿದ್ದ ಅಮ್ನೆಸ್ಟಿ ಇಂಟರ್ನ್ಯಾಷನಲ್.