ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಎಪಿಸಿಆರ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನದೀಮ್ ಖಾನ್ ವಿರುದ್ಧ ದೆಹಲಿ ಪೊಲೀಸರಿಂದ ಕಿರುಕುಳ, ಬೆದರಿಕೆ ಮತ್ತು ದುರುದ್ದೇಶದಪೂರಿತ ಎಫ್‌ಐಆರ್ ಖಂಡನೀಯ ಎಂದು ಕರ್ನಾಟಕ ಪಿಯುಸಿಎಲ್ ಸೇರಿದಂತೆ ರಾಷ್ಟ್ರೀಯ ಪಿಯುಸಿಎಲ್ ಅಧ್ಯಕ್ಷೆ ಕವಿತಾ ಶ್ರೀ ವಾಸ್ತವ ಮತ್ತು ಕಾರ್ಯದರ್ಶಿ ವಿ.ಸುರೇಶ್ ಮತ್ತು ಇತರ ಸಮಾನ ಮನಸ್ಕ ಸಂಘಟನೆಗಳು ಹೇಳಿದೆ.
* ಕರ್ನಾಟಕ ಸರ್ಕಾರವು ಕಾನೂನು ಬಾಹಿರ ಕಿರುಕುಳ ಹಾಗು ಬೆದರಿಕೆ ಹಾಕುತ್ತಿರುವ ದೆಹಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು
• ಒಕ್ಕೂಟ ಸರ್ಕಾರವು, ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಕೆಲಸ ಮಾಡುತ್ತಿರುವ ಏ ಪೀ ಸಿ ಆರ್ ಮತ್ತು ಇತರ ಸಂಘಟನೆಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು
ಟ್ವಿಟ್ಟರ್(ಎಕ್ಸ್)ನಲ್ಲಿ ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳ ಹೊಂದಿದ್ದರು ಎಂಬ ಪ್ರೇರಣೆಯಿಂದ ಮಾನವ ಹಕ್ಕುಗಳ ಕಾರ್ಯಕರ್ತ ನದೀಮ್ ಖಾನ್ ಅವರನ್ನು ದೆಹಲಿ ಪೊಲೀಸರು ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿರುವ ಮತ್ತು ದಾಳಿ ನಡೆಸಲಾಗುತ್ತಿರುವ ರೀತಿಯನ್ನು ನೋಡಿ ನಾವು ಆಘಾತಕ್ಕೊಳಗಾಗಿದ್ದೇವೆ. ನೆನ್ನೆ (30 ನವೆಂಬರ್ 2024), ಸಂಜೆ 5 ಗಂಟೆಗೆ, ದೆಹಲಿಯ ಶಾಹೀನ್ ಬಾಗ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿ, ನದೀಮ್ ಖಾನ್ ತಂಗಿದ್ದ ಬೆಂಗಳೂರಿನ ಖಾಸಗಿ ನಿವಾಸಕ್ಕೆ ಬಂದರು ಮತ್ತು ಯಾವುದೇ ವಾರಂಟ್ ಅಥವಾ ನೋಟಿಸ್ ಇಲ್ಲದೆ ಅವರನ್ನು ಬಂಧಿಸಲು ಪ್ರಯತ್ನಿಸಿದರು.
ಕಾನೂನು ಉಲ್ಲಂಘಿಸಿ ದಿಲ್ಲಿ ಪೊಲೀಸರಿಂದ ನದೀಮ್ ಖಾನ್ ಮತ್ತು ಅವರ ಕುಟುಂಬಕ್ಕೆ ಕಿರುಕುಳ
ದಿಲ್ಲಿ ಪೊಲೀಸರು ಬೆಂಗಳೂರಿನಲ್ಲಿರುವ ನದೀಮ್ ಅವರ ಸಹೋದರನ ನಿವಾಸಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಪ್ರವೇಶಿಸಿ, ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ, ಅವರು ಮನೆಯ ಮೊದಲ ಮಹಡಿಯ ಹಾಲ್‌ನಲ್ಲಿ ಕುಳಿತು, ನದೀಮ್ ಅವರನ್ನು ಅನೌಪಚಾರಿಕ ಬಂಧನದಲ್ಲಿ ತಮ್ಮೊಂದಿಗೆ ಸ್ವಯಂಪ್ರೇರಣೆಯಿಂದ ದೆಹಲಿಗೆ ಬರುವಂತೆ ಒತ್ತಾಯಿಸಿದರು. ದೆಹಲಿಯ ಶಾಹೀನ್ ಬಾಗ್ ಪೊಲೀಸ್ ಠಾಣೆಯಲ್ಲಿ ಇಂದು ಮಧ್ಯಾಹ್ನ 12:48 ಕ್ಕೆ ದಾಖಲಾದ ಎಫ್‌ಐಆರ್ ಸಂಖ್ಯೆ 0280/2024 ಸಂಬಂಧ ತನಿಖೆಗಾಗಿ ಇದು ಎಂದು ಹೇಳಲಾಗಿದೆ. ಆದರೆ, ನೋಟಿಸ್ (BNSS ಸೆಕ್ಷನ್ 35(3) ಅಡಿಯಲ್ಲಿ) ನೀಡದೆ ಅಥವಾ ಬಂಧನ ವಾರೆಂಟ್ ಇಲ್ಲದೆ, ತಕ್ಷಣವೇ ದೆಹಲಿಯಿಂದ ಬೆಂಗಳೂರಿಗೆ ಬಂದು, ನದೀಮ್ ಅವರ ಸಹೋದರನ ಮನೆಗೆ ಪ್ರವೇಶಿಸಿದ ಅಧಿಕಾರಿಗಳು, ಅವರಿಗೋಸ್ಕರ ‘ತಕ್ಷಣ” ದೆಹಲಿಗೆ ಹಿಂದಿರುಗುವಂತೆ ಒತ್ತಾಯಿಸಿದರು. ಸುಮಾರು 10:45ರ ವೇಳೆಗೆ, 5.45 ಗಂಟೆಗಳ ಕಿರುಕುಳದ ನಂತರ, ಅಧಿಕಾರಿಗಳು ನದೀಮ್ ಅವರ ಮನೆ ಗೋಡೆ ಮೇಲೆ ಶಾಹೀನ್ ಬಾಗ್ ಪೊಲೀಸ್ ಠಾಣೆಗೆ ಹಾಜರಾಗುವಂತೆ, ಸೆಕ್ಷನ್ 35(3) ಅಡಿಯಲ್ಲಿ ನೋಟಿಸ್ ಅನ್ನು ಅಂಟಿಸಿದ್ದಾರೆ. ಆರು ಗಂಟೆಗಳ ಕಾಲ ಅವರು ನದೀಮ್ ಹಾಗೂ ಅವರ ಕುಟುಂಬದ ಸದಸ್ಯರಿಗೆ ಕಿರುಕುಳ ಮತ್ತು ಬೆದರಿಕೆ ಹಾಕಿ ನಂತರ ಈ ನೋಟಿಸ್ ನೀಡಿದರು
ಎಫ್‌ಐಆರ್ ಅಡಿಯಲ್ಲಿರುವ ಅಪರಾಧಗಳೆಂದರೆ BNS ಸೆಕ್ಷನ್ 196, 353(2) ಮತ್ತು 61. ಈ ಎಲ್ಲಾ ಅಪರಾಧಗಳಿಗೆ 3 ವರ್ಷಗಳಿಗಿಂತ ಕಡಿಮೆಯಿರುವ ಶಿಕ್ಷೆಗಳು. ಯಾವುದೇ ಅಪರಾಧಕ್ಕೆ ಶಿಕ್ಷೆ ೭ ವರ್ಷಕ್ಕಿಂತ ಕೆಡಿಮೆ ಇದ್ದರೆ, ಸರ್ವೋಚ್ಚ ನ್ಯಾಯಾಲಯ ಅರ್ನೇಶ್ ಕುಮಾರ್ ವಿರುದ್ಧ ಬಿಹಾರ ರಾಜ್ಯ ದಲ್ಲಿ ನೀಡಿದ ತೀರ್ಪಿನ ಪ್ರಕಾರ ಹಾಗೆಯೇ ಬಿಎನ್‌ಎಸ್‌ಎನ್‌ನ ಸೆಕ್ಷನ್ 35 ಪ್ರಕಾರ ಆರೋಪಿಯನ್ನು ಬಂಧಿಸುವಂತಿಲ್ಲ. ಹಾಗಾಗಿ ನದೀಮ್ ಅವರನ್ನು ಈ FIR ಕೆಳಗೆ ಬಂಧಿಸುವದ ಕಾನೂನು ಬಾಹಿರ, ಇದರ ಹೊರತಾಗಿಯೂ SHO ಮತ್ತು ಇತರ ಪೊಲೀಸ್ ಅಧಿಕಾರಿಗಳು ಅವರನ್ನು ಮತ್ತು ಅವರ ಕುಟುಂಬದ ಸದಸ್ಯರನ್ನು ಕ್ರಿಮಿನಲ್ ಆಗಿ ಬೆದರಿಸುವುದನ್ನು ಮುಂದುವರೆಸಿದರು, ಯಾವುದೇ ಕಾನೂನಿನ ಆಧಾರವಿಲ್ಲದಿದ್ದರು ಅವರನ್ನು ದೆಹಲಿಗೆ ಬರುವಂತೆ ಒತ್ತಾಯಿಸಿದರು.
ಎಪಿಸಿಆರ್ ಸಂಘಟನೆಯ ಮೇಲೆ ದಿಲ್ಲಿ ಪೊಲೀಸ್ ಬೆದರಿಕೆಯು ಖಂಡನೀಯ
ನದೀಮ್ ಖಾನ್ ರಾಷ್ಟ್ರೀಯ ಮಟ್ಟದ ಮಾನವ ಹಕ್ಕುಗಳ ಸಂಘಟನೆಯಾದ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR)ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಇದು ಮಾನವ ಹಕ್ಕುಗಳನ್ನು ಎತ್ತಿಹಿಡಿಯಲು ಕೆಲಸ ಮಾಡುವ ರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದೆ. ಈ ಎಫ್‌ಐಆರ್ ಗೆ ಮುನ್ನ ಮೊನ್ನೆ 2024 ನವೆಂಬರ್ 29ರ ರಾತ್ರಿ ಸುಮಾರು 9 ಗಂಟೆಗೆ, 20-25 ಅಧಿಕಾರಿಗಳು ದೆಹಲಿಯ ಎಪಿಸಿಆರ್ ಕಚೇರಿಗೆ ನೋಟಿಸ್ ಇಲ್ಲದೇ, ಎಫ್‌ಐಆರ್ ಪ್ರತಿಯನ್ನು ನೀಡದೇ,ಭೇಟಿ ನೀಡಿದ್ದರು.
ತದ ನಂತರ ಸಂಘಟನೆಗಳು ಹಕ್ಕೊತ್ತಾಯ ಮಂಡಿಸಿದೆ
1) ನದೀಮ್ ಅವರ ವಿರುದ್ಧ FIR ನಂಬ್ರ 0280/2024 ಅನ್ನು ಹಿಂಪಡೆಯಬೇಕು
2) ದಿಲ್ಲಿ ಪೊಲೀಸ್ ನದೀಮ್ ಖಾನ್ ಮತ್ತು ಅವರ ಕುಟುಂಬದ ಮೇಲೆ ಆಗುತ್ತಿರುವ ಕಿರುಕುಳ, ಡಬ್ಬಾಳಿಕೆ ನಿಲ್ಲಬೇಕು. ಅವರಿಗೆ ಆಗಿರುವ ಹಿಂಸೆಗೆ ಅವರಿಗೆ ಪರಿಹಾರ ನೀಡಬೇಕು
3)ನದೀಮ್ ಖಾನ್ ಖಾನ್ ಅವರ, ಹಾಗು ಅವರ ಕುಟುಂಬದ ಮೇಲೆ ಮಾಡಿದ ದಬ್ಬಾಳಿಕೆ, ಅವರಗೆ ಹಾಕಿದ ಬೆದರಿಕೆ ಹಾಗು ಅವರ ಮನೆಯೊಳಗೇ ಅಕ್ರಮವಾಗಿ ನುಗಿದ್ದಕ್ಕೆ ದಿಲ್ಲಿ ಪೊಲೀಸ್ ನ ಶಾಹಿನ್ ಭಾಗ್ ಪೊಲೀಸ್ ಠಾಣೆ ಪೊಲೀಸ್ ಸಿಬ್ಬಂದಿ ವಿರುದ್ಧ FIR ದಾಖಲಿಸಬೇಕು
4) ಕರ್ನಾಟಕ ಸರ್ಕಾರ ನದೀಮ್ ಖಾನ್ ಅವರ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಹುತ್ವ ಕರ್ನಾಟಕ, ತಮಟೆ, ಪಿ.ಯು.ಸಿ.ಎಲ್ ಕರ್ನಾಟಕ, ದ್ವೇಷದ ಮಾತಿನ ವಿರುದ್ಧ ಜನಾಂದೋಲನ, ಎದ್ದೇಳು ಕರ್ನಾಟಕ, ಕರ್ನಾಟಕ ಜನಶಕ್ತಿ, ಜಾಗೃತ ಕರ್ನಾಟಕ ಇತ್ಯಾದಿ ಸಂಘಟನೆಗಳು ಒತ್ತಾಯಿಸಿವೆ ಎಂದು ಪಿಯುಸಿಎಲ್ ಕರ್ನಾಟಕ ಹೇಳಿಕೆ ಬಿಡುಗಡೆ ಮಾಡಿದೆ.
ಇನ್ನಷ್ಟು ವರದಿಗಳು
ಸಂಭಾಲ್ ಸರ್ವೇ, ಗೋಲಿಬಾರ್ ಹತ್ಯೆ, ನ್ಯಾಯಾಂಗ ತನಿಖೆಗೆ ಯು.ಪಿ. ಪಿಯುಸಿಎಲ್ ಆಗ್ರಹ.
ಹಕ್ಕು ಕಾರ್ಯಕರ್ತ ಡಾ. ಸಾಯಿಬಾಬಾ ನಿಧನ: ಮಾನವ ಹಕ್ಕು ರಂಗಕ್ಕೆ ಅಪಾರ ನಷ್ಟ:ಪಿಯುಸಿಎಲ್.
ಮಹಾರಾಷ್ಟ್ರ, ಅಕ್ಷಯ ಶಿಂಧೆ ಜುಡಿಷಿಯಲ್ ಕಸ್ಟಡಿ ಹತ್ಯೆ: ಸಮಗ್ರ ತನಿಖೆಗೆ ಆಗ್ರಹಿಸಿದ ಪಿಯುಸಿಎಲ್.