ಮಂಗಳೂರು. ದ.ಕ. ಜಿಲ್ಲೆಯ ಪ್ರಸಕ್ತ ದುಸ್ಥಿತಿಯ ಮತ್ತು ಈ ಸ್ಥಿತಿಗೆ ಕಾರಣವಾದ ಮತೀಯವಾದ ಪರಿಣಾಮದ ಬಗ್ಗೆ ದ.ಕ.ಜಿಲ್ಲೆಯ ಅಭಿವೃದ್ಧಿ ಪರರು ಕರ್ನಾಟಕ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದು ಜಿಲ್ಲೆಯ ಹಾಲಿ ಸುಸ್ಥಿತಿ, ಕಾನೂನು ಸುವ್ಯವಸ್ಥೆ ಆತಂಕತೆ, ಇತ್ತೀಚೆಗೆ ನಡೆದ ಗುಂಪು ಹತ್ಯೆ, ಕೊಲೆ ಮತ್ತು ಪೊಲೀಸು, ಜಿಲ್ಲಾಡಳಿತ ಸರಕಾರ ದ ನಿಲುವುಗಳ ಬಗ್ಗೆ ವಿಮರ್ಷಿತ ಪತ್ರವೊಂದನ್ನು ಸಾಮಾಜಿಕ ಜಾಲ ತಾಣ ಹ್ಯಾಂಡಲ್ ಮೂಲಕ ಸಾರ್ವಜನಿಕ ಗೊಳಿಸಲಾಗುತ್ತಿದ್ದು ಮುಖ್ಯ ಮಂತ್ರಿಯವರ ಗಮನವನ್ನು ಸೆಳೆಯಲಾಗಿದೆ. ಜಿಲ್ಲೆಯ ಮತೀಯವಾದದ ಸಂತ್ರಸ್ತರಾಗಿ ಹಾಲಿ ಒಂದು ನಿರ್ಧಿಷ್ಟ ಅಲ್ಪ ಸಂಖ್ಯಾತ ಜನನಾಂಗವನ್ನು ಗುರುತಿಸಾಲಾಗಿದ್ದು, ಆದರೆ ಇತ್ತೀಚೆಗೆ ಇಂತಹ ಮತೀಯ ಸಂತ್ರಸ್ತ ಸ್ಥಿತಿ ಇಡೀ ಜಿಲ್ಲೆಗೆ ಭಾದಿಸಿದ ರೀತಿಯಲ್ಲಿದೆ. ಅಭಿವೃದ್ಧಿ ಪರರು ಈ ಬಗ್ಗೆ ಎಚ್ಚೆತ್ತು ಸಾಮೂಹಿಕ ಪರಿಹಾರ ಕಂಡು ಕೊಳ್ಳುವ ಭಾಗವಾಗಿ ಸರಕಾರವನ್ನು ಗಮನ ಸೆಳೆಯಲಿದೆ.
ಕರಾವಳಿ ಎನ್ನುವುದು ಕೋಮುವಾದದ ಪ್ರಯೋಗಶಾಲೆ ಎಂದು ಕರೆಯಲ್ಪಡುವುದನ್ನು ರಾಜ್ಯ ಸರ್ಕಾರಕ್ಕೆ ಕೋಮುವಾದಿಗಳು ಹಾಕಿರುವ ಸವಾಲು ಮತ್ತು ಅಂತಹ ಸವಾಲು ರಾಜ್ಯ ಸರ್ಕಾರಕ್ಕೆ ನಾಚಿಗೆಗೇಡು ಎಂದು ಘನ ಸರ್ಕಾರ ಪರಿಗಣಿಸಬೇಕು ಎಂಬಿತ್ಯಾದಿ ವಿವಿಧ ಸಂಸ್ತೆಯ ವಿವರಗಳೊಂದಿಗೆ ಪತ್ರದ ಒಕ್ಕನೆಗಳು ಕಂಡುಬಂದಿದೆ.
ಪ್ರೊ. ನರೇಂದ್ರ ನಾಯಕ್,ಡಾ. ಗಣನಾಥ ಶೆಟ್ಟಿ ಎಕ್ಕಾರು
ಡಾ. ಶ್ರೀನಿವಾಸ ಕಕ್ಕಿಲ್ಲಾಯ,ಪ್ರೊ. ಫಣಿರಾಜ್,ಡಾ. ಪೂವಪ್ಪ ಕಣಿಯೂರು,ಡಾ. ಎನ್. ಇಸ್ಮಾಯಿಲ್,ಡಾ. ಕೃಷ್ಣಪ್ಪ ಕೊಂಚಾಡಿ,ವಾಸುದೇವ ಉಚ್ಚಿಲ, ಚಂದ್ರಕಲಾ ನಂದಾವರ,ಮುನೀರ್ ಕಾಟಿಪಳ್ಳ, ಅತ್ರಾಡಿ ಅಮೃತಾ ಶೆಟ್ಟಿ, ಐ ಕೆ ಬೊಳವಾರು, ನವೀನ್ ಸೂರಿಂಜೆ, ಸ್ವರ್ಣಾ ಭಟ್
ಗುಲಾಬಿ ಬಿಳಿಮಲೆ, ಉದ್ಯಾವರ ನಾಗೇಶ ಕುಮಾರ್ ಸಂತೋಷ್ ಶೆಟ್ಟಿ ಹಿರಿಯಡ್ಕ,ಯಶವಂತ ಮರೋಳಿ
ಶ್ರೀನಿವಾಸ ಕಾರ್ಕಳ,ಪ್ರಕಾಶ್ ನೊರೋನ್ಹ, ಪಾಂಬೂರು, ಮುಂತಾದವರು ಪತ್ರಕ್ಕೆ ಸಮ್ಮತಿಸಿದ್ದಾರೆ.
ಇನ್ನಷ್ಟು ವರದಿಗಳು
ಪುತ್ತೂರು ‘ ಅಶ್ರಫ್ ‘ ನಾಮಾಂಕಿತರ ಕರ್ನಾಟಕ ಒಕ್ಕೂಟ ಸಭೆ: ಜಿಲ್ಲಾವಾರು ಅಶ್ರಫರ ಹುಡುಕಾಟಕ್ಕೆ ಮಾಜಿ ಮೇಯರ್ ಕೆ.ಅಶ್ರಫ್ ಕರೆ.
ಪ್ರವಾದಿ ಮುಹಮ್ಮದ್ ಶಾಲಾ ಪಠ್ಯಕ್ರಮದಲ್ಲಿ ಸೇರ್ಪಡೆ: ಚುನಾವಣೆಗೂ ಮುನ್ನ ಸ್ಟಾಲಿನ್ ಮುಸ್ಲಿಂ ಪ್ರಚಾರ.
ಕೋಟೆಪುರ – ಬೋಳಾರ ಸೇತುವೆ, ₹200 ಕೋ.ಯೋಜನೆಗೆ ರಾಜ್ಯ ಅನುಮೋದನೆ,ಜಿಲ್ಲಾ 79 ನೇ ಸ್ವಾತಂತ್ರ್ಯೋತ್ಸವದಲ್ಲಿ ದಿನೇಶ್ ಗುಂಡೂರಾವ್.