January 26, 2026

Vokkuta News

kannada news portal

ಫ್ಯಾಸಿವಾದದ ವಿರುದ್ಧದ ಸಿದ್ಧಾಂತದ ಕಲ್ಪನೆಯೇ ಈ ಪ್ರತಿನಿಧಿ ಮಂಡಳಿ ಸಮ್ಮೇಳನದ ಪ್ರತೀ ಭಾಗಿದಾರರ ಜವಾಬ್ದಾರಿ: ಮೊಹಮ್ಮದ್ ಶಫಿ, ಎಸ್ಡಿಪಿಐ.

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ ) ಇದರ 6ನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ (ಎನ್‌ಆರ್‌ಸಿ ) ಸಭೆ ಪಕ್ಷದ ಪ್ರಮುಖ ದಿಗ್ಗಜ ನಾಯಕರ ಸಮಕ್ಷಮದಲ್ಲಿ ಇಂದು ಮಂಗಳೂರಿನ ನಗರದ ಪ್ರತಿಷ್ಠಿತ ಸಭಾಂಗಣದಲ್ಲಿ ನಡೆಯುತ್ತಿದೆ.

ಎಸ್ಡಿಪಿಐ ದ್ವಜಾರೋಹಣದೊಂದಿಗೆ ಉದ್ಘಾಟನೆಗೊಂಡ ಸಭೆಯಲ್ಲಿ ರಾಷ್ಟ್ರೀಯ ಮಟ್ಟದ ನಾಯಕರು ಭಾಗವಹಿಸಿದ್ದಾರೆ.

ಇಂದು ಮತ್ತು ನಾಳೆ ನಡೆಯಲಿರುವ ಈ ಸಮಾವೇಶದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಪ್ರತಿನಿಧಿಗಳು ಭಾಗವಹಿಸಲಿ ದ್ದಾರೆ.

ಈ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಮತ್ತು ಪದಾಧಿಕಾರಿಗಳ ಆಯ್ಕೆಗೆ ಚುನಾವಣೆಯೂ ನಡೆಯಲಿದೆ.

ಹಾಲಿ ಪ್ರತಿನಿಧಿ ಮಂಡಳಿ ಸಭಾಂಗಣವು ಕರಾವಳಿ ಜಿಲ್ಲೆಯ ಬಹು ಸಂಸ್ಕೃತಿ, ಚರಿತ್ರಾ ನೇತಾರರು, ಔದ್ಯೋಗಿಕ ಚಿತ್ರಣ, ರೈತಾಪಿ ವರ್ಗ ಚಿತ್ರಣ ಮತ್ತು ಮಾಹಿತಿಯನ್ನು ಸಾರುವ ಬಿತ್ತಿ ಪತ್ರ ಗೋಡೆಗಳನ್ನು ಪ್ರದರ್ಶನ ಗೈಡಿದೆ.

ಪ್ರಮುಖರಾದ ಮೊಹಮ್ಮದ್ ಶಫಿ ಮಾತನಾಡಿ, ಎಸ್ಡಿಪಿಐ ಪಕ್ಷದ ಪ್ರತಿನಿಧಿಗಳಿಗೆ ಭಾರತ ದೇಶದ ಪ್ರತಿ ಆಗು ಹೋಗುಗಳ ಜವಾಬ್ದಾರಿ ಇದೆ, ಈ ದೇಶದ ರೈತರು, ಕಾರ್ಮಿಕರು, ಅಲ್ಪ ಸಂಖ್ಯಾತರ, ಮುಸ್ಲಿಮ್,ಕ್ರೈಸ್ತ, ಬುದ್ಧರ ಬಗ್ಗೆ ಕಾಳಜಿ ಇರಬೇಕು. ಯಾವತ್ತಿನವರೆಗೆ, ಈ ವರ್ಗಕ್ಕೆ ನ್ಯಾಯ ವನ್ನು ನಾವು ಕೊಡುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಜವಾಬ್ದಾರಿ ಪೂರ್ಣ ಗೊಳ್ಳುವುದಿಲ್ಲ. ಈ ದೇಶದ ವಿವಿಧತೆ, ಪ್ರಜಾಪ್ರಭುತ್ವ, ಚರಿತ್ರೆ,ಹೋರಾಟ, ವಿಶ್ವ ಮಾನ್ಯತೆ, ಸಂವಿಧಾನ, ನೇತಾರತೆ, ಭಗತ್ ಸಿಂಗ್ ನಿಂದ ಹಿಡಿದು,ಬಾಬಾ ಸಾಹೇಬ್ ಅಂಬೇಡ್ಕರ್, ಅಬುಲ್ ಕಲಾಂ ಆಝಾದ್, ಸಾವಿತ್ರಿ ಬಾಪುಲೆ, ಫರೀದ ಶೇಕ್,ಬ್ರಿಗೇಡಿಯರ್ ಉಸ್ಮಾನ್ ಇವರ ಪರಿಚಯದೊಂದಿಗೆ ಸಾಗಬೇಕಿದೆ.ನಾವು ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಸಂರಕ್ಷಿಸಲು ನಡೆಸಬೇಕಾಗಿದೆ.ಭಾರತದಲ್ಲಿ ಎಪ್ಪತ್ತು ಶೇಕಡಾ ಮಾಲಿನ್ಯ ಜಲ ಹೊಂದಿದೆ, ರಾಜಸ್ಥಾನ ಮಧ್ಯಪ್ರದೇಶದಲ್ಲಿ ಜನರು ಮಾಲಿನ್ಯಾ ನೀರಿಂದಾಗಿ ಮೃತಪಟ್ಟಿದ್ದಾರೆ.ಪ್ರತಿ ವರ್ಷ ಎರಡು ಲಕ್ಷ ಜನ ಮಾಲಿನ್ಯ ಜಲ ಸೇವಿಸಿ ಮೃತ ಹೊಂದುತ್ತಿದ್ದಾರೆ ಈ ದೇಶದ ಜಲ,ಜಮೀನು, ಕಾಡುಗಳನ್ನು ಉದ್ದೇಶಪೂರ್ಕವಾಗಿ ನಾಶ ಪಡಿಸಲಾಗುತ್ತಿದೆ..ಅಸ್ಸಾಂ ನಲ್ಲಿ ಬುಡಕಟ್ಟು ಮತ್ತು ಮುಸ್ಲಿಮರನ್ನು ತೆರವು ಗೊಳಿಸಿ ಹೆಕ್ಟರ್ ಗಟ್ಟಲೆ ಕಾಡು ನಾಶ ಗೊಳಿಸಿದ್ದಾರೆ ಮತ್ತು ಜಮೀನನ್ನು ಅದಾನಿ ಕಂಪೆನಿಗೆ ನೀಡಲಾಗಿದೆ. ಸರಕಾರ ಈಸ್ಟ್ ಇಂಡಿಯಾ ಕಂಪೆನಿಗೆ ನೀಡಿದೆ.ಬ್ರಿಟಿಷ್ ಮಾಡುತ್ತಿದ್ದ ಕೆಲಸವನ್ನು ಇಂದು ಫ್ಯಾಸಿಸ್ಟ್ ಸರ್ಕಾರ ನಡೆಸುತ್ತಿದೆ.ಅದಾನಿ ಯೊಂದಿಗಿನ ಷಡ್ಯಂತ್ರದ ಭಾಗವಾಗಿ ನಡೆಯುತ್ತಿದೆ, ಅಂಬಾನಿ ಯೊಂದಿಗೆ ಮೊದಾನಿ ಸೇರಿಕೊಂಡಿದ್ದಾರೆ. ಈ ದೇಶವನ್ನು ಗುಲಾಮಗಿರಿಗೆ ತಳ್ಳ ಲಾಗುತಿದೇ. ಈ ಸರಕಾರದ ಪ್ರತಿ ಯೋಜನೆಯೂ ವಿಫಲ ಹೊಂದಿದೆ. ಈ ದೇಶವನ್ನು ನಾವು ರಕ್ಷಿಸಬೇಕಿದೆ, ಫ್ಯಾಸಿವಾದ ಧರ್ಮಾಧಾರಿತನದ ಭಾರತವನ್ನು ವಿಭಿನ್ನತೆಯ ಭಾರತ ಮಾಡಬೇಕಿದೆ, ಅದಕ್ಕಾಗಿ ಈ ದೇಶದ ಸರ್ವ ಸಮುದಾಯದ ನೇತಾರರು ಬಲಿ ಹೊಂದಿದ್ದಾರೆ. ನಮಗೆ ಸರ್ವರಿಗೂ ಜವಾಬ್ದಾರಿ ಇದೆ, ಈ ಪ್ರತಿನಿಧಿ ಸಭೆಯಲ್ಲಿ ಪಾಲ್ಗೊಂಡವರು ಒಂದೇ ಸಿದ್ಧಾಂತದ ಚಿಂತನೆ ಹೊಂದಿದ್ದಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ನೂತನ ರಾಷ್ಟ್ರೀಯ ನಾಯಕರಿಗೆ ಜ.21ರಂದು 6:30ಕ್ಕೆ ನಗರದ ಪುರಭವನದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮೊದಲು ಅಪರಾಹ್ನ 4:30ಕ್ಕೆ ಮಂಗಳೂರಿನ ಅಂಬೇಡ್ಕರ್ ವೃತ್ತ (ಜ್ಯೋತಿ )ದಿಂದ ಸಮಾವೇಶ ನಡೆಯಲಿರುವ ಪುರಭವನ ವರೆಗೆ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಎಸ್ ಡಿಪಿಐ ಮೂಲಗಳು ತಿಳಿಸಿದೆ.