May 30, 2026

Vokkuta News

kannada news portal

ತೋಟಾಳ್ ಟಿ.ಕೆ.ಇಸ್ಮಾಯಿಲ್ ನಿಧನ: ಸೋ.ಮೀಡಿಯಾ ಯಾಕ್ಟಿವಿಸ್ಟ್ ಅಶ್ಫಾಕ್ ರವರಿಗೆ ಪಿತೃ ವಿಯೋಗ:

ಉಳ್ಳಾಲ: ನರಿಂಗಾನ ಗ್ರಾಮದ ಟಿ.ಕೆ.ಇಸ್ಮಾಯಿಲ್ ರವರು ಇಂದು ಅವರ ಮೊಂಟೆಪದವು ಎಂಬಲ್ಲಿನ ಸ್ವಗೃಹದಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 88 ವರ್ಷ ಪ್ರಾಯವಾಗಿತ್ತು. ಟಿ.ಕೆ.ಇಸ್ಮಾಯಿಲ್ ಅವರು ನರಿಂಗಾನದ ಹಿರಿಯ ಧಾರ್ಮಿಕ ಮುತ್ಸದ್ದಿ ಆಗಿದ್ದು, ಮುಹಿಯುದ್ದೀನ್ ಜುಮ್ಮಾ ಮಸೀದಿಯ ಸೇವೆಯೊಂದಿಗೆ ಗುರುತಿಸಿ ಕೊಂಡಿದ್ದರು.

ಇತ್ತೀಚೆಗೆ ಅವರು ವಯಸ್ಸು ಸಂಬಂಧಿತ ಅನಾರೋಗ್ಯದರಿಂದ ಹಾಸಿಗೆ ಹಿಡಿದಿದ್ದರು ಮತ್ತು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಮೃತ ಟಿ.ಕೆ.ಇಸ್ಮಾಯಿಲ್ ರವರಿಗೆ ನಾಲ್ಕು ಪುತ್ರರನ್ನು ಆಗಲಿದ್ದು, ಹಿರಿಯ ಪುತ್ರ ಅಶ್ಫಾಕ್ ವಿದೇಶದಲ್ಲಿ ಉದ್ಯೋಗ ದಲ್ಲಿ ಇದ್ದು, ಸಾಮಾಜಿಕ ಜಾಲತಾಣದಲ್ಲಿ ಯಾಕ್ತಿವಿಸ್ಟ್ ಆಗಿದ್ದಾರೆ. ಶರೀಫ್ @ ಅಬೂ ಸಫ್ವಾನ್, ಅಶ್ರಫ್ ಮತ್ತು ಫಝಲ್ ರವರನ್ನು ಅಗಲಿದ್ದಾರೆ.

ಮೃತರನ್ನು ಇಂದು ಸಂಜೆ  ಧಾರ್ಮಿಕ ವಿಧಿ ವಿಧಾನದ ನಂತರ ನರಿಂಗಾನದ ಮುಹಿಯುದ್ದೀನ್ ಜುಮ್ಮಾ ಮಸೀದಿ  ಭೂಮಿಯಲ್ಲಿ ಅಂತಿಮ ಧಫನ ಕ್ರಿಯೆ ನೆರವೇರಿಸುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.