April 11, 2026

Vokkuta News

kannada news portal

ಉಳ್ಳಾಲ, ಪಿಯು: ಅಲ್ ಬಯಾನ್ ಅರಬಿಕ್ ಕಾಲೇಜು:  ಶೇ 100 ಫಲಿತಾಂಶ.

ಉಳ್ಳಾಲ : 2025-26ನೇ ಸಾಲಿನ ಪದವಿ ಪೂರ್ವ ಫಲಿತಾಂಶ ಈಗಾಗಲೇ ಪ್ರಕಟ ಗೊಂಡಿದೆ. ಪದವಿ ಪೂರ್ವ ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ,ಉಳ್ಳಾಲ ತಾಲೂಕಿನ, ಕಲ್ಲಾಪುವಿನಲ್ಲಿರುವ ಅಲ್ ಬಯಾನ್ ಅರಬಿಕ್ ಕಾಲೇಜು ಶೇಖಡ ನೂರು ಫಲಿತಾಂಶ ದಾಖಲಿಸಿದೆ ಇದು ಸತತವಾಗಿ ಕಳೆದ 8 ವರ್ಷಗಳಲ್ಲಿಯೂ ಕೂಡ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು  ಸಾಧನೆ ಮಾಡಿರುತ್ತಾರೆ.

ಕಳೆದ ವರ್ಷದಂತೆ ಈ ಸಾಲಿನಲ್ಲೂ ಕೂಡ ಕಾಲೇಜಿನ 3 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವುದು ಶ್ಲಾಘನೀಯ. ಈ ಸಾಲಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಅಬ್ದುಲ್ ಖಾದರ್ ಸಅದ್ ಶೇಖಡ 89, ಮುಆದ್ ಶೇಖಡ 88 ಹಾಗೂ ಇಶ್’ರಾಕ್ ಅಹ್ಮದ್ ಶೇಖಡ 87 ಅಂಕಗಳನ್ನು ಪಡೆದಿರುತ್ತಾರೆ. ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಅಂಕಗಳನ್ನು ಪಡೆದಿರತ್ತಾರೆ ಎಂದು ಅಲ್ ಬಯಾನ್ ಅರಬಿಕ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮುಹಮ್ಮದ್ ಹಫೀಝ್ ಸ್ವಲಾಹಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ 2026-27ನೇ ಸಾಲಿನ ದಾಖಲಾತಿ ಆರಂಭ ಗೊಂಡಿರುವುದರ ಬಗ್ಗೆ ಅವರು ಮಾಹಿತಿ ನೀಡಿದರು. ಸಂಸ್ಥೆಯ ಅಧ್ಯಕ್ಷರಾದ ಮುಹಮ್ಮದ್ ಅಶ್ಫಾಕ್ ಉಳ್ಳಾಲ್ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ.