July 23, 2026

Vokkuta News

kannada news portal

ಜು.24 , ನಗರದಲ್ಲಿ ‘ ವೀ ಪೀಪಲ್ ಆಫ್ ಇಂಡಿಯಾ ‘ ವತಿಯಿಂದ ದೆಹಲಿ ವಿದ್ಯಾರ್ಥಿ – ದೌರ್ಜನ್ಯ ವಿರೋಧಿಸಿ ರ್ಯಾಲಿ: ಸಮಾನ ಮನಸ್ಕ ಒಕ್ಕೂಟದ ಬೆಂಬಲ.

ಮಂಗಳೂರು: 24-07-2026 ಶುಕ್ರವಾರ ಸಂಜೆ ಮಂಗಳೂರಿನಲ್ಲಿ WE THE PEOPLE OF INDIA ಸಂಘಟನೆಯು ಹಮ್ಮಿಕೊಂಡಂತಹ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳಿಗೆ ಲಾಠಿಚಾರ್ಜ್ ಹಾಗೂ ವಿದ್ಯಾರ್ಥಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆ ವಿರುದ್ಧ ನಡೆಯುವ ಪ್ರತಿಭಟನೆಗೆ ದಕ್ಷಿಣ ಕನ್ನಡ ಜಿಲ್ಲಾ ಸಮಾನ ಮನಸ್ಕರ ಒಕ್ಕೂಟ, ಮಂಗಳೂರು ಸಂಪೂರ್ಣವಾಗಿ ಬೆಂಬಲವನ್ನು ಘೋಷಿಸಿದೆ ಎಂದು ಒಕ್ಕೂಟದಂ ಸಂಚಾಲಕ ಇಮ್ತಿಯಾಜ್ ಕೆದಂಬಾಡಿ ಹೇಳಿದ್ದಾರೆ.

ಈ ಪ್ರತಿಭಟನೆಯ ಮುಖ್ಯ ಉದ್ದೇಶಗಳು:

  1. ಕೇಂದ್ರ ಸರ್ಕಾರವು ಕೂಡಲೇ ಈ ಕುರಿತು ಮಧ್ಯಪ್ರವೇಶಿಸಿ ಕೇಂದ್ರ ಸರ್ಕಾರದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ರವರಿಗೆ ರಾಜೀನಾಮೆಯನ್ನು ನೀಡಲು ಸೂಚಿಸಬೇಕು.
  2. ಪ್ರತಿಭಟನೆಯಲ್ಲಿ ಲಾಠಿಚಾರ್ಜ್ ಹಾಗೂ ಪೊಲೀಸರ ಕ್ರೌರ್ಯಕ್ಕೆ ಒಳಗಾದ ಎಲ್ಲಾ ಸಂತ್ರಸ್ತರಿಗೆ ಸರಕಾರಿ ವೆಚ್ಚದಲ್ಲಿ ಚಿಕಿತ್ಸೆಯನ್ನು ನೀಡಬೇಕು, ಸಂತ್ರಸ್ತರಿಗೆ ನ್ಯಾಯ ಮತ್ತು ಸೂಕ್ತ ಪರಿಹಾರ ಒದಗಿಸಬೇಕು.
  3. ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ದೇಶದ ಹಲವು ಪರೀಕ್ಷಾ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ ಇನ್ನು ಮುಂದಕ್ಕೆ ಇಂತಹ ಆರೋಪಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡು ಮುಂದೆ ಇಂತಹ ಯಾವುದೇ ಎಡವಟ್ಟುಗಳು ಆಗದ ಹಾಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು‌.

ಈ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಸಾಮಾಜಿಕ ಹೋರಾಟಗಾರರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಇಮ್ತಿಯಾಝ್ ಕೆದಂಬಾಡಿ,
ಸಂಚಾಲಕರು,
ದಕ್ಷಿಣ ಕನ್ನಡ ಜಿಲ್ಲಾ ಸಮಾನ ಮನಸ್ಕರ ಒಕ್ಕೂಟ, ಮಂಗಳೂರು.
+91 97251 38348