ಮಂಗಳೂರು: ಕರ್ನಾಟಕ ರಾಜ್ಯಾದ್ಯಂತ ಅಹಿಂದ ಚಳುವಳಿಯ ಭಾಗವಾಗಿ, ಪ್ರತಿ ಜಿಲ್ಲೆಯಲ್ಲಿಯೂ ಸಾಮಾಜಿಕ ನ್ಯಾಯ ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಟವನ್ನು ಬಲಪಡಿಸಲಾಗುತ್ತಿದೆ. ಇದರ ಭಾಗವಾಗಿ ಇಂದು ಪತ್ರಿಕಾಗೋಷ್ಠಿ ನಡೆಸಿ, ಕಾಂತರಾಜ್ ವರದಿ, ಜಯಪ್ರಕಾಶ್ ಹೆಗ್ಡೆ ವರದಿ ಹಾಗೂ ಮಧುಸೂದನ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಕೂಡಲೇ ಬಹಿರಂಗಪಡಿಸಿ, ಜಾರಿಗೊಳಿಸಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಯಿತು.
ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರಕಿಸಲು ಈ ವರದಿಗಳು ಅತ್ಯಂತ ಮಹತ್ವದ್ದಾಗಿದ್ದು, ಸರ್ಕಾರಗಳು ಯಾವುದೇ ವಿಳಂಬ ಮಾಡದೆ ವರದಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಲಾಯಿತು. ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನಿಯೋಗವು ವಿಸ್ತೃತ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಅಹಿಂದ ನಾಯಕರಾದ ದೀಪಕ್ ಪೆರ್ಮುದೆ ಮನೀಶ್ ಬೋಲಾರ್, ಮೀನಾ ಟೆಲಿಸ್, ವಸಂತ್, ನಿಸಾರ್ ಕರಾವಳಿ, ಅವಿತಾ ನೊರೋಣ, ಲಿಡಿಯಾ ಲೋಬೋ, ಮೇರಿ ಪಿಂಟೋ, ಸ್ಟಾನಿ ಪಿಂಟೋ, ಅನ್ವರ್ ರಜಾಕ್ ಎಸ್.ಎಂ, ವಿಲೈಡ್, ಹಫೀಸ್ ಕೊಲಂಬೆ, ಫಯಾಜ್ ಹಾಮದ್ ಬಜ್ಜೆ ಹಾಗೂ ಅಡ್ವಕೇಟ್ ಮೊಹಮ್ಮದ್ ಹನೀಫ್. ಯು, ರಾಕೇಶ್ ಕುಂದರ್, ಸುಜೀರ್, ವಿನಾಯಕ, ನಿಶಿತ್, ಅವಿನಾಶ್ ಸೇರಿದಂತೆ ಅಹಿಂದ ಚಳುವಳಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಇನ್ನಷ್ಟು ವರದಿಗಳು
ಕರ್ನಾಟಕ ರಾಜ್ಯಸಭಾ ಸದಸ್ಯತ್ವಕ್ಕೆ ನಾಮನಿರ್ದೇಶನ: ನಿವೃತ್ತ ಐ.ಎ.ಎಸ್ ಅಧಿಕಾರಿ ಎಲ್.ಕೆ. ಅತೀಕ್ ಹೆಸರು ಮುಂಚೂಣಿಯಲ್ಲಿ.
ಬೆಂ.ಮುಸ್ಲಿಮ್ ಸಮಾವೇಶದ ಸಂದೇಶ ಸರ್ಕಾರಕ್ಕೆ ರವಾನೆ ಆಗಲಿದೆ : ಮುಸ್ಲಿಮ್ ವಾಯ್ಸ್ ಆನ್ಲೈನ್ ಸಂವಾದದಲ್ಲಿ ರಫಿಉದ್ದೀನ್ ಕುದ್ರೋಳಿ.
ಬೆಂಗಳೂರು, ಮೇ 16. ರಾಜ್ಯ ಮುಸ್ಲಿಮ್ ಸಮ್ಮೇಳನ, ಸರಕಾರದ ಭರವಸೆ, ಈಡೇರಿಕೆ, ನಿರ್ಲಕ್ಷ್ಯಗಳ ವರದಿ ಬಿಡುಗಡೆ.