ವೆಬ್: ಸಾಮಾಜಿಕ ಜಾಲ ತಾಣ ಮುಸ್ಲಿಮ್ ವಾಯ್ಸ್ ವಾಟ್ಸ್ ಆ್ಯಪ್ ಹ್ಯಾಂಡಲ್ ನಲ್ಲಿ ನಡೆದ ಇತ್ತೀಚೆಗೆ ಮೇ 16 ರಂದು ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ ಆಯೋಜಿಸಿದ ಕರ್ನಾಟಕ ಮುಸ್ಲಿಮ್ ಸಮಾವೇಶ ದಲ್ಲಿ ಬಿಡುಗಡೆ ಗೊಂಡ ಕರ್ನಾಟಕ.ಸರಕಾರದ ಈ ಹಿಂದಿನ ಚುನಾವಣಾ ಪೂರ್ವ ಮುಸ್ಲಿಮ್ ಅಲ್ಪ ಸಂಖ್ಯಾತ ಸಮುದಾಯಕ್ಕೆ ನೀಡಿದ ಭರವಸೆ, ಅನುಷ್ಟಾನ, ನಿರ್ಲಕ್ಯ ವಿಶ್ಲೇಷಣಾ ವರದಿ, ಕಾಂಗ್ರೆಸ್ ಹೇಳಿದ್ದೇನು ಮಾಡಿದ್ದೇನು ಮುಂದೇನು ಎಂಬ ಶೀರ್ಷಿಕೆ ಬಗ್ಗೆ ನಿನ್ನೆ ಭಾ. ಕಾ. ಗಂಟೆ ರಾತ್ರಿ ಗಂಟೆ 09.00 ಕ್ಕೆ ನಡೆದ ಆನ್ ಲೈನ್ ವಿಮರ್ಶಣ ಸಂವಾದದಲ್ಲಿ ಮಾತನಾಡಿದ ರಫೀ ಉದ್ದೀನ್ ಕುದ್ರೋಳಿ ಅವರು ಬೆಂಗಳೂರು ಸಮಾವೇಶದ ಸಂದೇಶ ಸರ್ಕಾರಕ್ಕೆ ತಲುಪಲೇ ಬೇಕು ಎಂದು ವಿಮರ್ಶಿಸಿದ್ದಾರೆ. ಸಂವಾದ ಕಾರ್ಯಕ್ರಮವನ್ನು ಅಡ್ಮಿನ್ ಮೊಹಮ್ಮದ್ ಹನೀಫ್. ಯು ನಿರೂಪಿಸಿದರು.
ಕರ್ನಾಟಕದ ಪ್ರತಿ ಮುಸ್ಲಿಮ್ ನಲ್ಲಿ ಪ್ರಶ್ನಿಸಿದರೆ ಈ ಸಮುದಾಯದ ಬಗ್ಗೆ ಧ್ವನಿ ಎತ್ತುವವರು ಯಾರು ಇಲ್ಲ, ಹೈ ಕೋರ್ಟಿನಲ್ಲಿ ಯಾವುದಾದರೊಂದು ಪ್ರಕರಣ ಸಮುದಾಯದ ವಿರೋಧಿ ಜನರು ದಾಖಲು ಮಾಡಿ ತನಿಖೆ ಆದರೆ ಅದಕ್ಕೆ ಬಲವಂತದ ಕ್ರಮ ಬೇಡ ಎಂಬ ನಿರ್ದೇಶನ ಬರುತ್ತದೆ! ಅದು ಏನೆಂದರೆ ಸರಕಾರ ಮೌನ ಪ್ರೇಕ್ಷಕ ಆಗಿ ಉಂಟು, ಮುಸ್ಲಿಮ್ ಸಮುದಾಯ ಹತಾಶೆ ಆಗಿದೆ. ಮೂರು ವರ್ಷ ಹಿಂದೆ ಇಲ್ಲಿ ಕೋಮು ಆಧಾರಿತ ಸರಕಾರ ಇತ್ತು. ಸಮುದಾಯದ ಒಟ್ಟಿಗೆ ಇದ್ದದ್ದು ಅಲ್ಲ, ಈ ಸಮುದಾಯಕ್ಕೆ ಒಂದು ನೆರವು ನೀಡುವ ಇಚ್ಚೆ ಕೂಡ ಅದಕ್ಕೆ ಇರಲಿಲ್ಲ. ಆಡಳಿತದ ಕೊನೆಯ ವರ್ಷ ಚುನಾವಣೆ ಬರುವ ಸಂಧರ್ಬದಲ್ಲಿ ಅವರು ಯುಪಿ ಮಾದರಿ ರೀತಿಯ ಪ್ರದರ್ಶನ ಮಾಡಲು ಶುರುಮಾಡಿದರು. ಕೋವಿಡ್ ನಲ್ಲಿ ಈ ಸಮುದಾಯ ಪ್ರದರ್ಶಿಸಿದ ಕಾಳಜಿ, ತುಡಿತ, ಇಡೀ ಮಾನವ ಇತಿಹಾಸದಲ್ಲಿ ಈ ರೀತಿಯ ಸೇವೆ ನಡೆಯಲಿಲ್ಲ ಎಂಬ ಹೆಗ್ಗಳಿಕೆ ಪಡೆದ ಸಮುದಾಯ. ಕೊವಿಡ್ ನಂತರ ಈ ಸಮುದಾಯವನ್ನು ಶತ್ರು ರೂಪದಲ್ಲಿ ನೋಡುವ ಒಂದು ವ್ಯವಸ್ತೆ ಉಂಟಾಗಿ ಜಡ್ಕ ಹಲಾಲ್, ವ್ಯಂಗತೆ ನಡೆದು ಒಮ್ಮೆ ಈ ಸರಕಾರ ತೊಲಗಲಿ ಎಂಬ ತೀರ್ಮಾನಕ್ಕೆ ಈ ಸಮುದಾಯ ಬಂದು, ನಮಗೆ ಎರಡು ಆಯ್ಕೆ ಇತ್ತು, ಕರ್ನಾಟಕ ರಾಜ್ಯದಲ್ಲಿ ಪ್ರಭಲ ಎರಡು ಪಕ್ಷ ಜಾತ್ಯಾತೀತ ನಿಲುವು ಹೊಂದಿದ ಪಕ್ಷ, ಜಾತ್ಯಾತೀತ ಜನತಾ ದಳ, ಮತ್ತು ಕಾಂಗ್ರೆಸ್ ಇತ್ತು. ಒಂದು ವೇಳೆ ಮತ ವಿಭಜನೆ ಆದರೆ ಬಿಜೆಪಿ ಬರಬಹುದು , ಅತಂತ್ರ ಸರಕಾರ ಬರಬಹುದು, ಆ ಸಂಧರ್ಭದಲ್ಲಿ ಜನತಾ ದಳ ಬಿಜೆಪಿ ಯೊಂದಿಗೆ ಸೇರಿ ಸರಕಾರ ನಡೆಸಿದರೆ ಮುಸ್ಲಿಮ್ ಸಮುದಾಯಕ್ಕೆ ಬೆಂಬಲ ಸಿಗಲಾರದು ಎಂದು ಈ ಸಮುದಾಯ ಒಕ್ಕೊರಲ ಸೇರಿ ಈ ಸರಕಾರವನ್ನು ಆಯ್ಕೆ ಮಾಡಿದೆವು. ಅಧಿಕಾರಕೆ ಬಂದ ಮೂರುವರ್ಷದಲ್ಲಿ , ನಾವು ನಿರೀಕ್ಷಿಸಿದ ಯಾವುದೇ ಕಾರ್ಯಕ್ರಮವನ್ನು ಜಾರಿಗೆ ತೆರಲಿಲ್ಲ. ಈ ಕಾರಣದಿಂದ ಈ ಸಮುದಾಯ ತೀವ್ರ ನಿರಾಶೆ ಹೊಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಒಕ್ಕೂಟ ಸ್ಥಾಪನೆ ಆಗಬೇಕು ಎಂದು ಪ್ರತಿ ಓರ್ವನು ತಿಳಿದದ್ದು.
ಹಾಗೆ ಇಲ್ಲಿ ಜಿಲ್ಲಾ ಮಟ್ಟದಲ್ಲಿ ವಿವಿಧ ಸಂಘಟನೆ ಅದರಲ್ಲಿ ಯಾವುದೇ ಆಶಯ ಪರಿಗಣಿಸದೆ ಹಲವು ಕಾರ್ಯಕ್ರಮ , ಪ್ರತಿಭಟನೆi ಮಾಡಿದ್ದೇವೆ. ಅದು ಒಂದು ಸೀಮಿತ ಮಟ್ಟಕ್ಕೆ ಮಾತ್ರ ಇರುತ್ತದೆ. ಶಿವ ಮೊಗ, ಆದರೆ ಅಲ್ಲಿ, ದಾವಣ ಗೆರೆ ಆದರೆ ಅಲ್ಲಿ, ಮೊನ್ನೆ ಬಾಗಲ ಕೋಟೆ ಯಲ್ಲಿ ಆಯಿತು, ಹುಬ್ಬಳ್ಳಿ ಯಲ್ಲಿ, ಹೀಗೆ ಚದುರಿ ಇದ್ದ ಒಂದು ಸಮುದಾಯ, ಸಮುದಾಯದ ವಿಷ್ಯದಲ್ಲಿ ಏನು ಬೆಂಗಳೂರಿನಲ್ಲಿ ಕೇಳುತ್ತದೆ, ಅದುವೇ, ಮಂಗಳೂರು ,ಮೈಸೂರು ನಲ್ಲಿ ಕೇಳುವುದು, ಒಂದೇ ಸಮಯದಲ್ಲಿ ದ್ವನಿ ಎತ್ತಬೇಕು, ಸಮುದಾಯದ ಕಾಳಜಿ ಕರ್ನಾಟಕದ ಪ್ರತಿ ಓರ್ವನ ಹತ್ತಿರ ಇದೆ. ಆದರೆ ಈ ಸಂಘಟನೆ ರೂಪಿಕರಣ ಮಾಡುವವರು ಯಾರು? ಯಾರ ಮುಖೇನ ಮಾಡುವುದು ಎಂಬ ಒಂದು ಜಿಜ್ಞಾಸೆ ಇತ್ತು. ಉಡುಪಿ ಯಲ್ಲಿ ಒಂದು ಉಡುಪಿ ಜಿಲ್ಲೆ ಮುಸ್ಲಿಮ್ ಒಕ್ಕೂಟ ಎಂಬ ಸಂಘಟನೆ ಇದೆ. ಅದು ರಾಜ್ಯ ಮಟ್ಟದಲ್ಲಿ ಒಂದು ವ್ಯವಸ್ಥಿತ ರೂಪದ ಒಂದು ಒಕ್ಕೂಟ ಆಗಿದೆ
ಅದರಲ್ಲಿ ಎಲ್ಲ ಮುಸ್ಲಿಮ್ ಪಂಗಡ ಒಳಗೊಂಡಿದೆ. ವ್ಯವಸ್ಥಿತ ಕ್ರಿಯಾ ಶೀಲ ಸಂಘಟನೆ , ಈ ಒಕ್ಕೂಟದವರಿಗೆ ಸಲಹೆ ನೀಡಲಾಯಿತು. ಇದನ್ನು ವಿಸ್ತರಣೆ ಮಾಡಬೇಕು
ಎಂಬ ಕಾರಣಕ್ಕೆ ಈ ಒಂದು ಸಭೆ ಆಗಿದೆ.
ಈ ಒಕ್ಕೂಟದ ಪರಿಚಯಸ್ಥ , ನನ್ನ, ಮಾಜಿ ಮೇಯರ್ ಅಶ್ರಫ್, ಸೆಂಟ್ರಲ್ ಮುಸ್ಲಿಮ್ ಕಮಿಟಿ ಯಂತಃ ಒಕ್ಕೂಟ ದವರನ್ನು ಸೇರಿಸಿ, ದಾವಣಗೆರೆ, ಬಿಜಾಪುರ , ಹುಬ್ಬಳ್ಳಿ,ಚಿಕ್ಕಮಗಳೂರು, ಮೈಸೂರು, ಬೆಂಗಳೂರು,ಚಾಮರಾಜ ನಗರ , ವಿವಿಧ ಜಿಲ್ಲೆಗಳ ಹಲವು ವ್ಯಕ್ತಿ ಸಂಘಟನೆಗಳನ್ನು ಸೇರಿಸಿ, ಹತ್ತೊಂಬತ್ತು ಜಿಲ್ಲೆಯ ವಾರು ಸೇರಿ ಮೊದಲ ಬೈಠಕ್, ಉನ್ಮತ್ತ ಐಎಎಸ್ ಅಧಿಕಾರಿಗಳು ವಕೀಲರು, ಮುಜಾಫರ್ ಅಹಮದ್, ಬೆಂಗಳೂರಿನಲ್ಲಿ ಕೂಡ ಒಂದು ಸಭೆ ನಡೆದು, ಈ ಸಮುದಾಯವನ್ನು ಕೇಳುವ ಒಂದು ದ್ವನಿ ಬೇಕು, ಆ ದ್ವನಿ ತುಂಬಾ ಶಕ್ತ ಇರಬೇಕು, ಸರಕಾರದ ಬುಡಕ್ಕೆ ಆ ದ್ವನಿ ಅನ್ನು ಇಡಬೇಕು, ಸರಕಾರ ನಮ್ಮ ಬಗ್ಗೆ ಗಣನೆಗೆ ಬರಬೇಕು ಎಂಬ ವಿಷ್ಯದಲ್ಲಿ ಒಂದು.ಬೃಹತ್ ಸಂಘಟನೆ ಒಕ್ಕೂಟ ಸ್ಥಾಪಿಸಬೇಕು ಎಂಬ ಕಾರಣ ದಿಂದಾ ಆಗಿದೆ ಒಕ್ಕೂಟ ರಚನೆಗೆ ತೀರ್ಮಾನ ಮಾಡಿರುವುದು ಆಗಿದೆ. ಪ್ರಥಮ ಸಭೆ ಉಡುಪಿಯಲ್ಲಿ, ದ್ವಿತೀಯ ಸಭೆ ಬೆಂಗಳೂರಿನಲ್ಲಿ, ನಾಲ್ಕನೇ ಸಭೆ ಬೆಂಗಳೂರು ನಲ್ಲಿ ಮಾಡಿರುವುದಾಗಿದೆ. ದಾವಣ ಗೆರೆಯ ಸಮಸ್ಯೆ ಮುನ್ನಲೆ ಬಂದ ವಿಷಯವನ್ನು ಸಭೆಯಲ್ಲಿ ಗಂಭೀರ ಚರ್ಚೆ ನಡೆದು, ಹಾಲಿ ಪ್ರಚಲಿತ ಸರಕಾರಕ್ಕೆ ಒಂದು ಬಿಸಿ ಮುಟ್ಟಿಸಬೇಕು ಎಂದು ನಿರ್ಣಯ ಮಾಡಿದ್ದೋ ಅಲ್ಲದೆ ಒಂದು ನಿಯೋಗ ಕೂಡ ದಾವಣಗೆರೆಗೆ ಕಳುಹಿಸಿ ಫೀಲ್ಡ್ ವರ್ಕ್ ನಡೆದಿದೆ ಎನ್ನುವುದು ವಾಸ್ತವ.
ಪ್ರಥಮ ಸಭೆಯಲ್ಲಿ ನಿವೃತ್ತ ಐ ಎ ಎಸ್ , ತಹಶೀಲು ದಾರರು, ವಕೀಲರು, ನಿವೃತ್ತ ಪೊಲೀಸು ಅಧಿಕಾರಿ, ಜಾಗೃತ ಕರ್ನಾಟಕ ಎಂಬ ಸಂಸ್ಥೆ, ಶೋಷಿತ ದಲಿತ ಮುಸ್ಲಿಂ ಸಮುದಾಯದ ಪರ ಹೋರಾಟ ನಡೆಸಲು ಫೀಲ್ಡ್ ಗೆ ಇಳಿದ ಓರ್ವ ಸುಹೈಲ್ ಎಂಬ ವ್ಯಕ್ತಿ, ಫೀಲ್ಡ್ ವರ್ಕ್ ಮಾಡುವ ಪತ್ರಕರ್ತರು, ಲೇಖಕರು, ಇವರೆನ್ನೆಲ ಒಗ್ಗೂಡಿಸಿ ಒಂದು ಚಿಂತನ ವೇದಿಕೆ ರಚನೆ ಆಗಿದೆ.ಸಂಭಾವ್ಯ ಪ್ರತಿರೋಧ ಬಂದರೆ ಹೇಗೆ ನಿಭಾಯಿಸಬಹುದು ಎಂಬುದನ್ನು ತೀರ್ಮಾನಿಸಿ, ಅದರಲ್ಲಿ ನೀವು ಯಾವುದೇ ಪಕ್ಷದಲ್ಲಿ ಇದ್ದರೂ ಕೂಡ ಪಕ್ಷದ ಹೆಸರು ಬರಕೂಡದು ಮತ್ತು ನಾವು ಯಾವ ಸಿದ್ಧಾಂತದಲ್ಲಿ ಹೋರಾಟ ಮಾಡಿದ್ದೇವ ಆ ಸಂಧರ್ಬದಲ್ಲಿ ನಿಮ್ಮ ಇಗೋ ಗೆ ಧಕ್ಕೆ ಬರಬಹುದು, ನಿಮ್ಮ ಅಸ್ತಿತ್ವಕ್ಕೆ ಧಕ್ಕೆ ಆಗಬಹುದು, ಅತಿಥಿಗೆ ದಕ್ಕೆ ಆಗಬಹುದು, ಹಾಗಿದ್ದ ಸಂಧರ್ಬದಲ್ಲಿ ಮಾತ್ರ ಮುಂದುವರಿಯ ಬೇಕು, ಎಂದು ತಾಕೀತು ಮಾಡಿದ್ದು ಅದರಲ್ಲಿ ಬಂದು, ಸಭೆಗಳಲ್ಲಿ ದೃಢ ತೀರ್ಮಾನ ಮಾಡಿದ್ದು, ಅಡಿಯಲ್ಲಿ ಕೆಲವು ವ್ಯಕ್ತಿಗಳು ಕಾಂಗ್ರೆಸ್ ನ ಜಿಲ್ಲಾ ಪದಾಧಿಕಾರಿ ಆಗಿದ್ದರ್ವರು. ರಾಜ್ಯ ಮಟ್ಟದ ಸ್ಥಿತಿಯಲ್ಲಿ ಇದ್ದರು, ಅದರಲ್ಲಿ ಓರ್ವ ಎಮ್ ಎಲ್ ಸಿ ಇದ್ದರು, ಇವರು ಈ ಸಮುದಾಯಕ್ಕೆ ಏನಾದರೂ ಮಾಡಬೇಕು ಎಂದು ನ್ಯಾಯ ಗಳಿಸಿ ಕೊಡಬೇಕು ಎನ್ನುವುದಕ್ಕೆ ತ್ಯಾಗ ಮಾಡಲು ತಯಾರಿದ್ದೇವೆ ಎಂದು ಸೇರಿದ ಹಲವು ಕರಾರು ಆಗಿರುತ್ತಾರೆ. ಮೂರನೇ ಸಭೆಯಲ್ಲಿ ಅಲ್ ಹಂಡುಲಿ ಲ್ಲಾ… ಸುಮಾರು ಇಪ್ಪತ್ತೈದು ಜಿಲ್ಲೆಯ ಸಂಘಟನೆ ಸೇರಿ ಈ ಒಕ್ಕೂಟಕ್ಕೆ ಕರ್ನಾಟಕ ರಾಜ್ಯ ಒಕ್ಕೂಟ ಎಂಬ ತಾತ್ಕಾಲಿಕ ಹೆಸರು ಇಡಲಾಯಿತು.
ಸರಕಾರದಲ್ಲಿ ಪ್ರಶ್ನಿಸುವುದು ಹೇಗೆ ಎಂದು, ಸರಕಾರ ನಮಲ್ಲಿ ವಿರುದ್ಧ ಕೇಳಿದರೆ ಇಲ್ಲಿನ ಮೀಡಿಯ ಕೇಳಿದರೆ ನಮ್ಮಲ್ಲಿ ಸಮರ್ಪಕ ಉತ್ತರ ಏನು ಎಂಬುದು ಎರಡು ತಿಂಗಳು ಈ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಈ ತಂಡ ಬೆಂಗಳೂರು ನಲ್ಲಿ ಇದ್ದು ಸರಕಾರ ನಮಗೆ ನೀಡಿದ ಆಶ್ವಾಸನೆ ಏನು, ಈ ಆಶ್ವಾಸನೆ ಎಷ್ಟು ಈಡೇರಿದೆ, ಈ ಬಗ್ಗೆ ರಾಜಕಾರಣಿಗಳು ಯಾವುದೆಲ್ಲ ಮೀಡಿಯಾದಲ್ಲಿ ಹೇಳಿಕೆ ನೀಡಿದ್ದಾರೆ ಎಂಬಿತ್ಯಾದಿ ಸಮಗ್ರ ಮಾಹಿತಿ, ಪ್ರಿಯಾಂಕ ಖರ್ಗೆ, ಡಿಕೆ ಶಿವಕುಮಾರ್,ಸಿದ್ದರಾಮಯಯ ಸಾಬ್, ಮುಸ್ಲಿಮ್ ಎಂ ಎಲ್ ಏ ರವೆರೆಲ್ಲರ ಆಶ್ವಾಸನೆ, ಈ ಎಲ್ಲ ಆಶ್ವಾಸನೆ ಎಲ್ಲವನ್ನೂ ಬಟ್ಟಿ ಇಳಿಸುವಿಕೆ ಮಾಡಿ, ವೆಲ್ ಪ್ಲಾನ್ ಡ್, ವೆಲ್ ಸೆಟ್ಲ್ ಡ್ ವ್ಯವಸ್ಥಿತ ಅದನ್ನೆಲ್ಲ ಕ್ರೊಡಿಕರಣ ಮಾಡಿ ತೀರ್ಮಾನ ಮಾಡಿ, ಈ ಸರಕಾರದೊಂದಿಗೆ ಕೇಳಲು ತೀರ್ಮಾನ ಮಾಡಿ ಮೂರು ವರ್ಷ ಅಧಿಕಾರಕ್ಕೆ ಬರುವ ಮೊದಲು ನೀವು ನಮಗೆ ಏನು ಆಶ್ವಾಸನೆ ನೀಡಿದ್ದೀರಿ, ಹಲವು ಆಶ್ವಾಸನೆ ನಾವು ನಿಮ್ಮಲ್ಲಿ ಕೇಳಿದ್ದೆವು, ಕೆಲವು ನೀವು ಕೇಳದೆ ನೀಡಿದ್ದೀರಿ, ಉದಾಹರಣೆ ಗೆ ನಾವು ಬಜರಂಗ ದಳವನ್ನು ನಿಷೇಧ ಮಾಡುತ್ತೇವೆ. ದ್ವೇಷ ಭಾಷಣ ವನ್ನು ನಾವು ತಡೆಯುತ್ತೇವೆ. ಉದ್ರೇಕಾರಿ ಚಟುವಟಿಕೆ ಮಾಡುತ್ತಾರೆ ಅದನ್ನು ನಾವು ಹದ್ದು ಬಸ್ತ ಮಾಡುತ್ತೇವೆ. ಅದಕ್ಕೆ ನಾವು ಉಗ್ರ ನಿಗ್ರಹ ದಳ ಮಾಡುತ್ತೇವೆ ಎಂದಿದ್ದರು. ಇದೆಲ್ಲ ಭರವಸೆ ಖುಲ್ಲಂ ಖುಲ್ಲಂ ಹೇಳಿದ್ದು. ಇದು ಚುನಾವಣೆ ನಂತರ ಹೇಳಿದ್ದೆಲ್ಲ. ಹೇಳಬಹುದಿತ್ತು ಅದು ಓಟಿಗಾಗಿ ಹೇಳಿದ್ದು ಅಲ್ಲ ಎಂದು. ಇದು ಚುನಾವಣೆ ಸಂಧರ್ಬದಲ್ಲಿ ಹೇಳಿದ ಕಾರಣ 136 ಸ್ಥಾನ ಈ ಕಾರಣ ದಿಂದ ಲಭಿಸಿದ್ದು ಆದರೆ ಯಾಕೆ ಅನುಷ್ಠಾನದಲ್ಲಿ ಹಿಂಜರಿಕೆ ಬೇಕು. ಇದನ್ನು ಸ್ಪಷ್ಟ ಕೇಳಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ.
ಇಲ್ಲಿ ಹಿಜಾಬ್ ನಿಷೇಧ ಹಿಂತೆಗೆತ ಆದ ಸಂಧರ್ಬದಲ್ಲಿ ಈ ಒಂದು ಸಮುದಾಯದಲ್ಲಿ ಒಂದು ಸಂಚಲನ ಆಯಿತು.ಪ್ರತಿ ಓರ್ವನು ಅದರ ಕ್ರೆಡಿಟ್ ಪಡೆಯಲು ಪ್ರಯತ್ನ ಮಾಡಿದರು. ಕ್ರೆಡಿಟ್ ಯಾರು ಪಡೆದರು ಸಮುದಾಯಕ್ಕೆ ಲಾಭವೇ ಆಗಿದೆ.ಆದರೆ ಪ್ರತಿ ಓರ್ವನ ಪ್ರಯತ್ನ ಅದರ ಹಿಂದೆ ಇತ್ತು.ಪ್ರತಿ ಓರ್ವನು ಅದನ್ನು ಪ್ರತಿರೋಧ ಮಾಡಲು ಪ್ರಯತ್ನಿಸಿದ್ದಾನೆ. ಮಾತ್ರ ದಿಢೀರು ಈ ಹಿಂತೆಗೆತಕ್ಕೆ ಕಾರಣ ದಾವಣ ಗೆರೆ ಚುನಾವಣೆ ಆಗಿದೆ ಎಂಬುದಾದ ಒಂದು ಚಿತ್ರಣ ನಮ್ಮ ತಲೆಯಲ್ಲಿ ಇದೆ ಅದನ್ನು ನೂರು ಶೇಕಡಾ ತಿರಸ್ಕಾರ ಮಾಡದೇ ಹೇಳುವುದಾದರೆ, ನಾವು ಬೆಂಗಳೂರಿನಲ್ಲಿ ಮೀಟಿಂಗ್ ಮಾಡಿದಾಗ ಎರಡು ಮಾಜಿ ಐ ಎ ಎಸ್ ಅಧಿಕಾರಿಗಳು ಇದ್ದರು, ಇದರಲಿ ಓರ್ವ ಅಧಿಕಾರಿ ಸುಮಾರು ಹತ್ತು ವರ್ಷ ಪ್ರಧಾನ ಮಂತ್ರಿಯವರ ಬಳಿ ಕಾರ್ಯದರ್ಶಿ ಕಾರ್ಯ ನಿರ್ವಹಿಸಿದೆ, ಐದು ವರ್ಷ ಮುಖ್ಯಮಂತ್ರಿ ಹತ್ತಿರ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದ ವ್ಯಕ್ತಿ ಆಗಿದ್ದು, ಇವರು ಉಪಸ್ಥಿತಿ ಇದ್ದಾರೆ ಎಂದು ತಿಳಿದು, ಇದರ ಗಾಂಭೀರ್ಯತೆ ತಿಳಿದು, ತಯಾರಿ ಎಷ್ಟು ಮಹತ್ವ ಇತ್ತು ಅಂದರೆ ದಾವಣಗೆರೆ ಚಾಣವನೆಯ ತಕ್ಷಣ musl ರಾಜಕಾರಣ ಗರ ಮೇಲೆ ಏನು ಪ್ರತೀಕಾರ ತೆಗೆಯಲು ತೀರ್ಮಾನ ಮಾಡಿದರೂ ಆ.ಪ್ರತೀಕಾರದ ವಿರುದ್ಧ ಇಡೀ ದೇಶಾದ್ಯಂತ ಒಂದು ಈ ಮೇಲ್ ಲೆಟರ್ ಕ್ಯಾಂಪೇನ್ ಮಾಡಿತ್ತು ಈ ಒಕ್ಕೂಟ. ಅದರಲ್ಲಿ ಡಿಸಿಎಂ, ಸಿಎಂ,ಗೃಹ ಮಂತ್ರಿ, ಹೈ ಕಮಾಂಡ್, ರಾಹುಲ್ ಸೋನಿಯಾ ಗಾಂಧಿ ಗೂ ಕೂಡ ಈ ಮೇಲ್ ಹೋಗಿದೆ.ಅದರಲ್ಲಿ ತೀವ್ರ ಎಚ್ಚರಿಕೆ ಏನು ಅಂದರೆಒಂದು ವೇಳೆ ನೀವು ಮುಸ್ಲಿಮ್ ಸಮುದಾಯದ ಮೇಲೆ ಪ್ರತೀಕಾರ ದ ತೀರ್ಮಾನ ಮಾಡುವುದು ಎಂದಾದರೆ ಈ ಸಮುದಾಯಕ್ಕೆ ಬೇರೆ ಒಂದು ಆಯ್ಕೆ ನೋಡಬೇಕಾದೀತು ಎಂದು. ಮಾತ್ರವಲ್ಲ ದಾವಣಗೆರೆ ಫಲಿತಾಂಶ ಏನೇ ಬರಲಿ , ಆದರೆ 2028 ರ ಫಲಿತಾಂಶ ನಿಮಗೆ ಸಂಚಾಕರ ಆಗಲಿದೆ ಎಂಬ ಸೂಚಕ ರೂಪದಲ್ಲಿ ಒಂದು ಪತ್ರ ಇಡೀ ದೇಶಾದ್ಯಂತ ಸಂಚಲನ ಮೂಡಿಸಿದೆ.. ಅದು ಮಾತ್ರವಲ್ಲ ಅದನ್ನು ಕರ್ನಾಟಕದ ಸರ್ವ ಮೀಡಿಯಾ ಕವರ್ ಮಾಡುವ ಸ್ಟ್ರಾಟಜಿ ಮಾಡಿದ್ದೇವೆ. ಅದರ ಪ್ರತಿಫಲಾನ ಏನಾಗಿದೆ ಅಂದರೆ ಇಲ್ಲಿಯ ಟಿವಿ ನೈನ್, ಸುವರ್ಣ ನ್ಯೂಸ್ ನಲ್ಲಿ, ಪಬ್ಲಿಕ್ ನ್ಯೂಸ್ ನಲ್ಲಿ ಬಂದು ಈ ಬಂದಾಗ ಹತಾಶೆ ಗೊಂಡು ಪರಮೇಶ್ವರ ಹೇಳಿದ್ದು ರಾಹುಲ್ ಗಾಂಧಿ ಉತ್ತರ ನೀಡುತ್ತಾರೆ ಎಂದು ಪ್ರಥಮ ಬಾರಿಗೆ ರಾಜ್ಯದಲ್ಲಿ ರಾಜ್ದ ಒಳಗಿನ ಸಮಸ್ಯೆಗೆ ಹೈ ಕಮಾಂಡ್ ಉತ್ತರ ನೀಡುತ್ತದೆ ಎಂದು ಹೇಳುವುದು. ಮಾತ್ರವಲ್ಲ ಡಿಸಿಎಂ ಮತ್ತು ಸಿಎಂ ಕೈಯಲ್ಲಿ ಪ್ರಶ್ನೆ ಕೇಳಿದಾಗ ಅವರು ಅದಕ್ಕೆ ಉತ್ತರ ನೀಡಬೇಕಾ ಬೇಡವಾ ಎಂಬ ದ್ವಂದಕ್ಕೆ ಬಂದು ಉಳಿದದ್ದು ಹತಾಶೆ ಭಾವನೆಯನ್ನು ಸೂಚಿಸಿತು. ಈ ಒಕ್ಕೂಟ ಇಲ್ಲಿ ಏನಾದರೂ ಮಾಡುತ್ತದೆ ಎಂದು ಮುನ್ಸೂಚನೆ ಹೋಗಿದೆ.ಕಾರಣ ಅದಕ್ಕೆ ಅಷ್ಟು ಸ್ಟ್ರಾಟಜಿ ತಯಾರು ಮಾಡಲಾಗಿದೆ.ಮತ್ತು ಅದಕ್ಕೆ ಒಂದು ವರ್ಕಿಂಗ್ ಕಮಿಟಿ ಮಾಡಲಾಗಿತ್ತು. ಈ ಕಮಿಟಿಯಲ್ಲಿ ಉನ್ನತ ಚಿಂತಕರು ಇದು ಈ ಸಂದೇಶ ಹೋಗುವಲ್ಲಿ ಹೋಗಿದ್ದು ಮಾತ್ರವಲ್ಲ , ರಾಹುಲ್ ಗಾಂಧಿಗೆ ಹೋದ ಈ ಮೇಲ್, ರಾಹುಲ್ ಗಾಂಧಿ ಸ್ಟೇಟ್ ಕಮಿಟಿಗೆ ಸೂಚನೆ ನೀಡಿದೆ ಎಂಬ ಮಾಹಿತಿ ನಮಗೆ ಸಿಕ್ಕಿದಾಗ ಅವರಿಗೆ ಅರಿಯಿತು ಇನ್ನು ಹದಿನಾರನೇ ತಾರೀಕಿನ ಸಮಾವೇಶ ಬೃಹತ್ ಜನ ಸೇರುತ್ತಾರೆ ಎಂಬ ಭಯದಿಂದ ತೇಪೆ ಹಚ್ಚುವ ಕಾರಣ ದಿಂದ ಹಿಜಾಬ್ ನಿಷೇಧ ಆದೇಶ ಹಿಂಪಡೆದದ್ದು. ಆಗಿದೆ, ಎಂದು ಹೇಳಿದರು.
ಇನ್ನಷ್ಟು ವರದಿಗಳು
ಬೆಂಗಳೂರು, ಮೇ 16. ರಾಜ್ಯ ಮುಸ್ಲಿಮ್ ಸಮ್ಮೇಳನ, ಸರಕಾರದ ಭರವಸೆ, ಈಡೇರಿಕೆ, ನಿರ್ಲಕ್ಷ್ಯಗಳ ವರದಿ ಬಿಡುಗಡೆ.
ಬೆಂಗಳೂರು: ಏ.23, ಇಂದು ಫ್ರೀಡಮ್ ಪಾರ್ಕ್ ನಲ್ಲಿ ಎಸ್ ಐ ಆರ್ ವಿರೋಧಿ ಬೃಹತ್ ಪ್ರತಿರೋಧ
ಮುಸ್ಲಿಮ್ ಸಂಘಟನೆಗಳಿಂದ ಕಾಂಗ್ರೆಸ್ ವರಿಷ್ಠರಿಗೆ ಅವಹಾಲು ಪತ್ರ, ಬೇಡಿಕೆ ಈಡೇರದಿದ್ದರೆ ಕವಲು ದಾರಿ?.