ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಬಾವೈಕ್ಯ ಪರಿಷತ್ತಿನ ವತಿಯಿಂದ ಅಕ್ಟೋಬರ್ 31ರಂದು, ಶನಿವಾರ, ಮಂಗಳೂರಿನ ಬಲ್ಮಠ ಮೈದಾನದಲ್ಲಿ ಒಂದು ದಿನದ ಐತಿಹಾಸಿಕ “ಯುವತರಂಗ” ರಾಜ್ಯ ಮಟ್ಟದ ಯುವಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದೆ.
ಇಂದಿನ ಕಾಲಘಟ್ಟದ ಅತ್ಯಂತ ಗಂಭೀರ ಸಾಮಾಜಿಕ ಸವಾಲುಗಳಲ್ಲಿ ಒಂದಾಗಿರುವ ಮಾದಕ ದ್ರವ್ಯ ವ್ಯಸನದ ವಿರುದ್ಧ ಜಾಗೃತಿ ಮೂಡಿಸಿ, ಯುವಜನತೆಯನ್ನು ಮಾದಕಮುಕ್ತ ಸಮಾಜ ನಿರ್ಮಾಣದ ಭಾಗವಾಗಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಪೊಲೀಸ್ ಅಧಿಕಾರಿಗಳು, ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಮುಖಂಡರ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವಜನರು ಹಾಗೂ ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿವೆ.
ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಅವಕಾಶ
ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನಿಮ್ಮ ಶಿಕ್ಷಣ ಸಂಸ್ಥೆಯು ಇದುವರೆಗೆ ಮಾದಕಮುಕ್ತ ಸಮಾಜದ ಕುರಿತು ಜಾಗೃತಿ ಮೂಡಿಸುವ ಯಾವುದೇ ಕಾರ್ಯಕ್ರಮ, ಅಭಿಯಾನ, ಯೋಜನೆ, ತರಬೇತಿ ಅಥವಾ ಚಟುವಟಿಕೆ ನಡೆಸಿದ್ದರೆ, ಅದರ ವರದಿಯನ್ನು ನಮ್ಮ ಸಮಾವೇಶದಂದು ಸಲ್ಲಿಸಬಹುದು.
ಶಿಕ್ಷಣ ಸಂಸ್ಥೆಗಳಿಂದ ಸಲ್ಲಿಕೆಯಾಗುವ ಇಂತಹ ವರದಿಗಳು ಹಾಗೂ ಚಟುವಟಿಕೆಗಳ ಮಾಹಿತಿಯನ್ನು ಶಿಕ್ಷಣ ಸಚಿವರು, ಗೃಹ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ಅಧಿಕೃತವಾಗಿ ಕಳುಹಿಸುವ ಕಾರ್ಯವನ್ನು ನಮ್ಮ ಸಂಸ್ಥೆಯ ವತಿಯಿಂದ ಕೈಗೊಳ್ಳಲಾಗುತ್ತದೆ.
ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಪ್ರಶಸ್ತಿ ಮತ್ತು ಗೌರವ
ಮಾದಕಮುಕ್ತ ಸಮಾಜದ ಕುರಿತು ಅತ್ಯಧಿಕ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸಿ, ಸಮಾಜದಲ್ಲಿ ಗಮನಾರ್ಹ ಕೊಡುಗೆ ನೀಡಿದ ಶಿಕ್ಷಣ ಸಂಸ್ಥೆಯನ್ನು ವಿಶೇಷವಾಗಿ ಪರಿಗಣಿಸಿ ಪ್ರಥಮ ಸ್ಥಾನ ನೀಡಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅದೇ ರೀತಿ, ಈ ಅಭಿಯಾನದಲ್ಲಿ ಭಾಗವಹಿಸಿ ಸಹಕರಿಸುವ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ವಿಶೇಷ ಗೌರವ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು.
ನಮ್ಮ ಸಂಸ್ಥೆಯೂ ಈಗಾಗಲೇ ಮಾದಕಮುಕ್ತ ಸಮಾಜದ ನಿರ್ಮಾಣಕ್ಕಾಗಿ ಅಧ್ಯಯನಾಧಾರಿತ ವಿವಿಧ ಕಾರ್ಯಕ್ರಮಗಳು, ಜಾಗೃತಿ ಅಭಿಯಾನಗಳು, ತರಬೇತಿಗಳು ಹಾಗೂ ಕಾರ್ಯಯೋಜನೆಗಳನ್ನು ನಡೆಸುತ್ತಿದ್ದು, ಅವುಗಳನ್ನೂ ಈ ಸಮಾವೇಶದ ಭಾಗವಾಗಿ ಮುಂದುವರಿಸಲಾಗುತ್ತದೆ.
ವಿದ್ಯಾರ್ಥಿಗಳಿಗಾಗಿ ವಿಶೇಷ ಸ್ಪರ್ಧೆಗಳು
🎨 ಚಿತ್ರಕಲಾ ಸ್ಪರ್ಧೆ
8ನೇ ತರಗತಿಯಿಂದ ಪದವಿ ಹಂತದವರೆಗಿನ ವಿದ್ಯಾರ್ಥಿಗಳಿಗೆ ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗುತ್ತದೆ.
ವಿಷಯ: “ಮಾದಕ ದ್ರವ್ಯ – ದುಷ್ಪರಿಣಾಮಗಳು ಮತ್ತು ಪರಿಹಾರ ಮಾರ್ಗಗಳು”
ವಿದ್ಯಾರ್ಥಿಗಳು ಸಮಾವೇಶದ ಸ್ಥಳದಲ್ಲಿಯೇ ಚಿತ್ರ ಬಿಡಿಸಬೇಕು. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಬಹುಮಾನಗಳು ನೀಡಲಾಗುತ್ತದೆ.
🗣️ ಸಂವಾದ ಕಾರ್ಯಕ್ರಮ
ಮಾದಕ ದ್ರವ್ಯಗಳ ದುಷ್ಪರಿಣಾಮಗಳು, ಯುವಜನರ ಮೇಲಿನ ಪರಿಣಾಮ ಹಾಗೂ ಪರಿಹಾರ ಮಾರ್ಗಗಳ ಕುರಿತು ವಿದ್ಯಾರ್ಥಿಗಳಿಂದ ವಿಶೇಷ ಸಂವಾದ–ಚರ್ಚಾ ಕಾರ್ಯಕ್ರಮ ನಡೆಯಲಿದೆ.
🎤 ವಿದ್ಯಾರ್ಥಿ ಸಂಭಾಷಣೆ
ನಾಲ್ಕು ವಿದ್ಯಾರ್ಥಿಗಳ ತಂಡವು ಮಾದಕಮುಕ್ತ ಸಮಾಜದ ಕುರಿತು ಗರಿಷ್ಠ 10 ನಿಮಿಷಗಳ ಸಂಭಾಷಣಾ ಕಾರ್ಯಕ್ರಮವನ್ನು ಪ್ರಸ್ತುತಪಡಿಸಬಹುದು. ಇದರಲ್ಲಿಯೂ ಅತ್ಯುತ್ತಮ ಪ್ರದರ್ಶನಗಳಿಗೆ ಬಹುಮಾನಗಳನ್ನು ನೀಡಲಾಗುತ್ತದೆ.
🎭 ಅಭಿನಯ
ಮಾದಕ ದ್ರವ್ಯದ ದುಷ್ಪರಿಣಾಮ ಹಾಗೂ ಮಾದಕಮುಕ್ತ ಸಮಾಜದ ಸಂದೇಶವನ್ನು ಒಳಗೊಂಡ ಅಭಿನಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಪ್ರದರ್ಶಿಸಬಹುದು.
ಪ್ರತಿಯೊಬ್ಬ ವಿದ್ಯಾರ್ಥಿಗೂ ಗೌರವ
ಈ ಸಮಾವೇಶದಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಅಭಿನಂದನಾ ಪತ್ರ ನೀಡಲಾಗುತ್ತದೆ.
ನಿಮ್ಮ ಶಾಲೆ, ಕಾಲೇಜು ಅಥವಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರ ಜೊತೆಗೆ, ಮಾದಕಮುಕ್ತ ಸಮಾಜ ನಿರ್ಮಾಣದ ಜಾಗೃತಿ ಕಾರ್ಯದಲ್ಲಿ ತಮ್ಮ ಕೊಡುಗೆಯನ್ನು ನೀಡಬಹುದು.
ಇದು ಕೇವಲ ಒಂದು ಕಾರ್ಯಕ್ರಮವಲ್ಲ; ಇಂದಿನ ಕಾಲಘಟ್ಟದ ತುರ್ತು ಅಗತ್ಯವಾಗಿರುವ ಮಾದಕಮುಕ್ತ ಸಮಾಜದ ನಿರ್ಮಾಣಕ್ಕಾಗಿ ಯುವಜನತೆಯನ್ನು ಒಂದಾಗಿಸುವ ಒಂದು ಸಾಮಾಜಿಕ ಚಳವಳಿ.
ನಿಮ್ಮ ಶಿಕ್ಷಣ ಸಂಸ್ಥೆಯು ಭಾಗವಹಿಸಲು ಆಸಕ್ತಿ ಹೊಂದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ಅಗತ್ಯವಿದ್ದಲ್ಲಿ ನಮ್ಮ ತಂಡವೇ ನಿಮ್ಮ ಶಾಲೆ/ಕಾಲೇಜಿಗೆ ಭೇಟಿ ನೀಡಿ ಕಾರ್ಯಕ್ರಮದ ಕುರಿತು ಸಂಪೂರ್ಣ ಮಾಹಿತಿ ನೀಡಲಿದೆ.
ಬನ್ನಿ… ಯುವಶಕ್ತಿಯನ್ನು ಒಂದಾಗಿಸೋಣ.
ಮಾದಕಮುಕ್ತ ಸಮಾಜದ ಕನಸನ್ನು ನನಸಾಗಿಸೋಣ.
“ಯುವತರಂಗ”ದೊಂದಿಗೆ ಹೊಸ ಬದಲಾವಣೆಗೆ ನಾಂದಿ ಹಾಡೋಣ, ಎಂಬ ಘೋಷವಾಕ್ಯ ದ ಬಿಡುಗಡೆಯೊಂದಿಗೆ ಇಕ್ಬಾಲ್ ಬಾಳಿಲ ಸಮಾವೇಶ ಸಂಚಾಲಕರವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
+91 94493 89112
+91 98453 09239
+91 94486 25980
ಇನ್ನಷ್ಟು ವರದಿಗಳು
ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ವೆಸ್ಟ್ ಜಿಲ್ಲಾಧ್ಯಧ್ಯಕ್ಷರಾಗಿ ಅಲಿಕುಂಞಿ ಹಾಜಿ ಪಾರೆ ಆಯ್ಕೆ.
ಅಖಿಲ ಭಾರತ ಬ್ಯಾರಿ ಪರಿಷತ್ ನೂತನ ಪದಾಧಿಕಾರಿಗಳ ಆಯ್ಕೆ, ಯು.ಎಚ್ ಖಾಲಿದ್ ಅಧ್ಯಕ್ಷ.
ಕಲ್ಲಡ್ಕ… ಭಟ್ ಬಂಧಿಸಿ, ಮನುಕುಲವನ್ನು ಗೌರವಿಸಿ, ಸುನ್ನತ್ ಜಮಾಅತ್ ಸಂಘಟನೆ ಕಮಿಷನರೇಟ್ ಮಾರ್ಚ್.