January 25, 2026

Vokkuta News

kannada news portal

ಅಖಿಲ ಭಾರತ ಬ್ಯಾರಿ ಪರಿಷತ್ ನೂತನ ಪದಾಧಿಕಾರಿಗಳ ಆಯ್ಕೆ, ಯು.ಎಚ್ ಖಾಲಿದ್ ಅಧ್ಯಕ್ಷ.

ಮಂಗಳೂರು: ಅಖಿಲ ಭಾರತ ಬ್ಯಾರಿ ಪರಿಷತ್ ಇದರ ವಾರ್ಷಿಕ ಮಹಾಸಭೆ ನಿನ್ನೆ ಸೋಮವಾರ ಅಪರಾಹ್ನ ನಗರದ ಓಶಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಅಧ್ಯಕ್ಷ ಯು.ಎಚ್.ಖಾಲೀದ್ ಉಜಿರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು

ಮುಂದಿನ ಅವಧಿಯ ಅಧ್ಯಕ್ಷರಾಗಿ ಯು.ಎಚ್.ಖಾಲಿದ್ ಉಜಿರೆ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ನಡುಪದವು, ಕೋಶಾಧಿಕಾರಿ ಯಾಗಿ ನಿಸಾರ್ ಎಫ್. ಮೊಹಮ್ಮದ್, ಉಪಾಧ್ಯಕ್ಷರಾಗಿ ಟಿ.ಎಂ.ಶಹೀದ್, ಎಂ.ಎಚ್.ಮೊಯ್ದಿನ್, ಅಬ್ದುಲ್ ಲತೀಫ್ ಕಂದಕ್, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಕಲ್ಲಗುಂಡಿ, ಮೊಹಮ್ಮದ್ ಇಕ್ಬಾಲ್ ಶೌಕತ್, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಂ ಪಿ., ಮಾಧ್ಯಮ ಕಾರ್ಯದರ್ಶಿಯಾಗಿ ಬಶೀರ್ ಕಲ್ಕಟ್ಟ ಹಾಗೂ 23 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಸಲಹೆಗಾರರ ಬಿ.ಎ.ಮೊಹಮ್ಮದ್ ಹನೀಫ್ ಸಂಘಟನೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಸಲಹೆ ನೀಡಿದರು.ಕೊನೆಯಲ್ಲಿ ನಿಸಾರ್ ಎಫ್. ಮೊಹಮ್ಮದ್ ವಂದಿಸಿದರು.