January 24, 2025

Vokkuta News

kannada news portal

ಕಲ್ಲಡ್ಕ… ಭಟ್ ಬಂಧಿಸಿ, ಮನುಕುಲವನ್ನು ಗೌರವಿಸಿ, ಸುನ್ನತ್ ಜಮಾಅತ್ ಸಂಘಟನೆ ಕಮಿಷನರೇಟ್ ಮಾರ್ಚ್.

ಮಂಗಳೂರು: ಮುಸ್ಲಿಂ ಮಹಿಳೆಯರ ವಿರುದ್ಧ ನಿಂದನಾತ್ಮಕವಾಗಿ ಭಾಷಣ ಮಾಡಿ ಸ್ತ್ರೀ ಕುಲವನ್ನು ಅವಮಾನಿಸಿ ನಿರಂತರವಾಗಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿರುವ ಕೋಮುವಾದಿ ಮನಸ್ಥಿತಿಯ ಕಲ್ಲಡ್ಕ ಪ್ರಭಾಕರ್ ಭಟ್ ಅನ್ನು ಬಂಧಿಸುವಂತೆ ಒತ್ತಾಯಿಸಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್ ಎಸ್ ಎಸ್ ಎಫ್ ದ.ಕ ಜಿಲ್ಲಾ ವೆಸ್ಟ್ ಸಮಿತಿ ಮುಖಂಡರಿಂದ ಕಮಿಷನರೇಟ್ ಮಾರ್ಚ್‌ ನಡೆಸಲಾಯಿತು.

ಶುಕ್ರವಾರ ಸಂಜೆ ಮಿನಿ ವಿಧಾನಸೌಧದಿಂದ ಆರಂಭಗೊಂಡ ಮಾರ್ಚ್ ಕಮಿಷನರ್ ಕಚೇರಿ ತನಕ ನಡೆಯಿತು. ಬಳಿಕ ಪೋಲಿಸ್ ಆಯುಕ್ತರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನ್ಯಾಯಕ್ಕಾಗಿ ಆಗ್ರಹಿಸಲಾಯಿತು. ವಿವಿಧ ಸುನ್ನಿ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳಾದ ಅಶ್ರಫ್ ಕಿನಾರ ಮತ್ತಿತರರು ಭಾಗವಹಿಸಿದ್ದರು.