November 19, 2024

Vokkuta News

kannada news portal

ಕೋರೋಣ ಸೋಂಕು ನಿಯಂತ್ರಣ ಮತ್ತು ಮುಂಜಾಗ್ರತೆ ವಹಿಸಲು ಮುಸ್ಲಿಮ್ ಒಕ್ಕೂಟ ಕೆ.ಅಶ್ರಫ್  ಕರೆ.

ಕೋವಿಡ್ 2 ನೇ ಅಲೆ ಸೂಪರ್ ಸ್ಪ್ರೆಡರ್, ಪ್ರಸ್ತುತ ವ್ಯಾಪಕವಾಗಿ ಹರಡುತ್ತಿದ್ದು,ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು. ಸರ್ಕಾರ ವಿವಿಧ ರೀತಿಯಲ್ಲಿ ಸೋಂಕು ಹರಡುವುದನ್ನು ತಡೆಯಲು ನಿಯಮಾವಳಿ ಅನುಷ್ಟಾನಿಸುವುದರ ಹೊರತಾಗಿಯೂ ಕೂಡ ಸಾರ್ವಜನಿಕರು ಆರೋಗ್ಯ ಮತ್ತು ಸೋಂಕು ಪ್ರಸರಣ ತಡೆ ಭಾಗವಾಗಿ,ಸಾರ್ವಜನಿಕ ಬೇರೆಯುವಿಕೆಗೆ ಕಡಿವಾಣ ಹಾಕುವ ದೃಢ ಪ್ರಯತ್ನ ಪಡಬೇಕಾಗಿದೆ.

ಪ್ರತ್ಯೇಕವಾಗಿ ಮುಸ್ಲಿಮ್ ಸಮುದಾಯದ ರಂಝಾನ್ ತಿಂಗಳು ಪ್ರಾರಂಭ ಆಗಿರುವುದರಿಂದ, ಸರ್ವರೂ ಸಾದ್ಯ ವಾದಷ್ಟು,ಬಹಿರಂಗ ಸುತ್ತುವಿಕೆ ಮತ್ತು ಬೇರೆಯುವಿಕೆ ಯಿಂದ ದೂರ ಉಳಿಯುವುದು ಸೂಕ್ತ. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು. ಮತ್ತು ಲಸಿಕೆ ಹಾಕಿಸಲು ಉತ್ತೇಜಿಸುವುದು ಉತ್ತಮ.

ಪ್ರತೀ ಜಮಾಅತ್ ಗಳಲ್ಲಿ
ಮಸ್ಜಿದ್ ಆಡಳಿತ ಕಮಿಟಿಯು, ಮಸ್ಜಿದ್ ಗೆ ಬರುವವರಿಗೆ ಖಡ್ಡಾಯ ವಾಗಿ ಮಾಸ್ಕ್ (ಮುಖ ಕವಚ) ಹಾಕಲು ತಿಳಿಸಬೇಕು. ಮತ್ತು ದೈಹಿಕ ಅಂತರ ಕಾಪಾಡಲು ಮಸೀದಿಗಳಲ್ಲಿ ಕಾರ್ಪೆಟ್ ಗಳ ಮೇಲೆ ಅಂತರ ಗುರುತನ್ನು ಹಾಕಿಸಬೇಕು. ಈ ಮೂಲಕ ಸರಕಾರ, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಪೊಲೀಸು ಇಲಾಖೆಗಳ ನಿಯಮಗಳನ್ನು ಪಾಲಿಸಲು ಸಹಕರಿಸಬೇಕು. ರಂಝಾನ್ ವೃತಾಚರಣೆಯ ಇಫ್ತಾರ್ ಕೂಡ ಸಾಧ್ಯವಾದಷ್ಟು ಮನೆಯಲ್ಲಿಯೇ ಆಚರಿಸುವುದು ಉತ್ತಮ.

ಈ ರೀತಿ ಸೋಂಕು ಹರಡದಂತೆ ಅಗತ್ಯವಿರುವ ಸರ್ವ ಮಾಹಿತಿ, ಜಾಗೃತಿ ಸಂದೇಶಗಳನ್ನು ಪ್ರತೀ ಜಮಾತ್ ಮಟ್ಟದಲ್ಲಿ ಘೋಷಿಸಿ, ಸಾಮೂಹಿಕ ಆರೋಗ್ಯ ಪಾಲನೆಗೆ ಸರ್ವರೂ ಸಹಕರಿಸ ಬೇಕೆಂದು,ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ ದ ಅಧ್ಯಕ್ಷರು (ಮಾಜಿ ಮೇಯರ್) ಕೆ.ಅಶ್ರಫ್ ಕರೆ ನೀಡಿದ್ದಾರೆ.