July 27, 2024

Vokkuta News

kannada news portal

ದಾನಿಗಳಿಂದ ಸಂಗ್ರಹಿಸಿದ ರಂಝಾನ್ ಕಿಟ್ ವಿತರಣೆ

ಮಂಗಳೂರು 19: ದ.ಕ ಜಿಲ್ಲೆಯಲ್ಲಿ ಕಳೆದ ಲಾಕ್ ಡೌನ್ ಕಾರಣದಿಂದ, ಮಂಗಳೂರಿನ ಪ್ರಮುಖ ಆರ್ಥಿಕ ಅವಲಂಬನೆ ಗಳಾದ ಮತ್ಸೋಧ್ಯಮ,ಅನಿವಾಸಿ ನೌಕರಿ ಆದಾಯ , ಕೃಷಿ ಮತ್ತು ವೈದ್ಯಕೀಯ ಶಿಕ್ಷಣ ದಿಂದ ಸೃಷ್ಟಿಯಾಗುವ ಪ್ರಮುಖ ಆದಾಯದಲ್ಲಿ ಗಣನೀಯ ಇಳಿಕೆ ಆದ ಕಾರಣದಿಂದ, ಈ ವರ್ಷ ಜನರ ದೈನಂದಿನ ಜೀವನ ಮಟ್ಟ ಕುಸಿದ ಕಾರಣದಿಂದ ಪ್ರಸ್ತುತ ಕಾರುಣ್ಯ ಸೇವೆಯು ಪ್ರಶ್ನಿತ ಮಟ್ಟಕ್ಕೆ ತಲುಪಿದ್ದು, ಪ್ರಸ್ತುತ ರಂಝಾನ್ ರೇಶನ್ ಕಿಟ್ ವಿತರಣೆಯು ಅದರ ಫಲಾನುಭವಿಗಳಿಗೆ ತೀವ್ರ ಅನಿವಾರ್ಯತೆ ವಸ್ತುವಾಗಿದೆ.

ಈ ಹಂತದಲ್ಲಿ ತಲಪಾಡಿ ಮೂಲದ ಹವ್ಯಾಸಿ ಸೋಶಿಯಲ್ ವ್ಯಕ್ತಿಯೋರ್ವರು, ತಮ್ಮ ಈ ಹಿಂದಿನ ಪರಿಚಯಸ್ಥ ಉದಾರ ದಾನಿಗಳಿಂದ ಸೀಮಿತ ಮಟ್ಟದಲ್ಲಿ ರೇಶನ್ ಕಿಟ್ ಸಂಗ್ರಹಿಸಿ ಅರ್ಹ ಫಲಾನುಭವಿಗಳಿಗೆ ಸೀಮಿತ ಮಟ್ಟದಲ್ಲಿ ರಂಝಾನ್ ರೇಶನ್ ಕಿಟ್ ವಿತರಣೆಯನ್ನು ಮಾಡಲಾಗಿದೆ.

ಪ್ರಥಮ ಹಂತದಲ್ಲಿ ಉದಾರ ದಾನಿಗಳ ಸಹಾಯದಿಂದ ಸುಮಾರು 100 ಅರ್ಹ ಫಲಾನುಭವಿಗಳಿಗೆ ಕಿಟ್ ವಿತರಿಸಲಾಯಿತು.