November 17, 2024

Vokkuta News

kannada news portal

ವಡೋಧರ: ಕೋವಿಡ್ ಆಸ್ಪತ್ರೆ ಕೇಂದ್ರವಾಗಿ ಜಹಾಂಗೀರ್ ಪುರ ಮಸೀದಿ.

ಗುಜರಾತ್ ನಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ವ್ಯಾಪಕವಾಗಿ ಪ್ರಸರಣ ಗೊಂಡು ನೂರಾರು ಜೀವ ಹಾನಿಯಾಗಿದ್ದು, ಗುಜರಾತ್,ರಾಜಕೋಟ್ ಮತ್ತು ಅಹ್ಮದಾಬಾದ್ ಜಿಲ್ಲೆಗಳಲ್ಲಿನ ಸಿವಿಲ್ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆ ಕೊರತೆ ಕಾರಣಕ್ಕಾಗಿ , ಆಸ್ಪತ್ರೆ ಯ ಹೊರಾಂಗಣದಲ್ಲಿ ರೋಗಿಗಳನ್ನು ಹೊತ್ತ ಆಂಬುಲೆನ್ಸ್ ವಾಹನಗಳ ಸರತಿ ಸಾಲುಗಳು ಕಂಡು ಬಂದು,ರೋಗಿಗಳನ್ನು ಉಪಚರಿಸಲು ಮೂಲಭೂತ ಸೌಕರ್ಯ ಕೊರತೆಯಾ ದ ಕಾರಣದಿಂದ, ವಡೋದರಾದಲ್ಲಿ ಜಹಾಂಗೀರ್ ಪುರ ಮುಸ್ಲಿಮ್ ಮಸ್ಜಿದ್ ಟ್ರಸ್ಟೀ ಯು ತನ್ನ ಅಧೀನದ ಆರಾಧನಾ ಕೇಂದ್ರವನ್ನು ಕೋವಿಡ್ ಆಸ್ಪತ್ರೆ ಕೇಂದ್ರವಾಗಿ ಪರಿವರ್ತಿಸಿತು. ಈ ಬಗ್ಗೆ ಮಸ್ಜಿದ್ ಟ್ರಸ್ಟೀ ಸ್ಪಷ್ಟೀಕರಣ ಬಿಡುಗಡೆ ಗೊಳಿಸಿದೇ.

ಆಸ್ಪತ್ರೆ ಕೇಂದ್ರವು ಸುಮಾರು 50 ಹಾಸಿಗೆಯನ್ನು ಹೊಂದಿದ್ದು,ಏಕ ಕಾಲಕ್ಕೆ 50 ಕೋವಿಡ್ ರೋಗಿಗಳನ್ನು ಶುಶ್ರೂಷೆ ಗೊಳಿಸಲು ಸಾಮರ್ಥ್ಯ ಹೊಂದಿದೆ. ಆಸ್ಪತ್ರೆಯ ರೋಗಿಗಳಿಗೆ ಆಕ್ಷಿ ಜೆನ್ ಪೂರೈಸುವ ವ್ಯವಸ್ಥೆ ಯನ್ನೂ ಏರ್ಪಾಡು ಗೊಳಿಸಲಾಗಿದೆ.

ವಡೋದರ ಪ್ರದೇಶ ಇತ್ತೀಚೆಗೆ ವಿಪರೀತ ಕೋವಿಡ್ ಸೋಂಕು ಆಧಾರಿತ ಸಾವು ನೋವುಗಳಿಗೆ ತುತ್ತಾದ ಪ್ರದೇಶ ವಾಗಿದ್ದು,ಇಲ್ಲಿ ಆರೋಗ್ಯ ಸಮಸ್ಯೆ ಕ್ಲಿಷ್ಟಕರ ಮತ್ತು ಅಪಾಯ ಮಟ್ಟದಲ್ಲಿ ಇದೆ ಎಂದು ವಿವಿಧ ಮಾದ್ಯಮ ಮೂಲಗಳು ಅಭಿಪ್ರಾಯ ಪಟ್ಟಿದೆ.