ಜಿಲ್ಲೆಯ ಯುವ ಉತ್ಸಾಹಿ, ಉದಯೋನ್ಮುಖ ರಾಜಕೀಯ ಪ್ರತಿನಿಧಿ,ಕರ್ನಾಟಕ ರಾಜ್ಯ ಕಾಂಗ್ರೆಸ್ ಕಾರ್ಮಿಕ ಘಟಕದ ಉಪಾಧ್ಯಕ್ಷ, ಮುಸ್ಲಿಮ್ ಜಸ್ಟೀಸ್ ಫಾರಂ ನ ಮುಖ್ಯಸ್ಥ, ಸಮಾಜ ಸೇವಕ,ಜಾತ್ಯತೀತ ತತ್ವ ಸಿದ್ಧಾಂತ ಗಳ ಪ್ರತಿಪಾದಕ, ಕಟು ಕಾಂಗ್ರೆಸ್ ವಾದಿ ಡಾl ಕೆ.ಎಸ್.ಅಮೀರ್ ಅಹಮದ್ ತುಂಬೆ ರವರು ಇಂದು ಮಂಗಳೂರಿನಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದು, ಅವರ ನಿಧನಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರ ಸಂತಾಪ ವ್ಯಕ್ತಪಡಿ ಸುತ್ತದೆ. ಕರ್ನಾಟಕದಲ್ಲಿ,ಕಾಂಗ್ರೆಸ್ ಕಾರ್ಮಿಕ ಘಟಕದ ಉಪಾಧ್ಯಕ್ಷ ರಾಗಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ ಓರ್ವ ಅಲ್ಪ ಸಂಖ್ಯಾತ ಸಮುದಾಯದ ಪ್ರತಿನಿಧಿ ಯಾಗಿ ಅಮೀರ್ ತುಂಬೆ ಹೆಸರು ವಾಸಿಯಾಗಿದ್ದರು. ಜಿಲ್ಲೆಯಲ್ಲಿ ವಿವಿಧ ಸಮಾಜ ಸೇವಾ ಕಾರ್ಯ, ರಾಜಕೀಯ ವಕ್ತಾರಿಕೆ,ಪರಿಹಾರ ಕಾರ್ಯ,ಕಾಂಗ್ರೆಸ್ ಪಕ್ಷದ ಸಂಘಟನೆ ಕಾರ್ಯದಲ್ಲಿ ಅಹನಿರ್ಶಿ ಸೇವೆಗೈದಿ ದ್ದಾರೆ. ಅಮೀರ್ ತುಂಬೆ ಯ ಅಗಲಿಕೆ,ಸಮಾಜೋ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ.ಅವರ ಕುಟುಂಬಕ್ಕೆ ಅವರ ವಿಯೋಗವನ್ನು ತಾಳುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಮುಸ್ಲಿಮ್ ಒಕ್ಕೂಟ ಅಧ್ಯಕ್ಷರು ಮಾಜಿ ಮೇಯರ್ ಆದ ಕೆ.ಅಶ್ರಫ್ ಹೇಳಿಕೆ ನೀಡಿದ್ದಾರೆ.
kannada news portal
ಇನ್ನಷ್ಟು ವರದಿಗಳು
ಈದ್ ಮಿಲಾದ್: ಮುಂಬೈ, ಉಪನಗರಗಳಲ್ಲಿ ರಜೆ ಸೆ.8 ಕ್ಕೆ ಮರುಘೋಷಣೆ, ಮಹಾರಾಷ್ಟ್ರದ ಉಳಿದಡೆ ಸೆ. 5 ರಂದು ರಜೆ.
ದ.ಕ.ಕಾಂಗ್ರೆಸ್ ರಾಜಿನಾಮೆ ಪ್ರಕ್ರಿಯೆಯಿಂದ ಘಾಡ ಪರಿಣಾಮ ಆಗಿದೆ: ಆನ್ ಲೈನ್ ಸಂವಾದದಲ್ಲಿ ಸಿರಾಜ್ ಬಜ್ಪೆ.
ವಕ್ಫ್ ತಿದ್ದುಪಡಿ ಖಾಯಿದೆ: ವಿರೋಧಿಸಿ ಮಂಗಳೂರಿನಲ್ಲಿ ಯುನಿವೆಫ್, ಸಂಘಟನೆಗಳಿಂದ ಪ್ರತಿಭಟನೆ: ಪ್ರಮುಖರು ಭಾಗಿ.