July 27, 2024

Vokkuta News

kannada news portal

ಯುನಿವೆಫ್:ಅರಿಯಿರಿ ಮನುಕುಲದ ಪ್ರವಾದಿಯನ್ನು ಅಭಿಯಾನ,ಮತ್ತು ಸರ್ ಹಿಂದಿ ಪ್ರಶಸ್ತಿ ಪ್ರಧಾನ ಸಮಾರಂಭ

ಜಿಲ್ಲೆಯ ಪ್ರಮುಖ ಸಮಾಜೋ ಧಾರ್ಮಿಕ ಸಂಘಟನೆಯಿಂದ ಪ್ರವಾದಿ ಸಂದೇಶ ಅಭಿಯಾನ ಮತ್ತು ತಪ್ಪು ಗ್ರಹಿಕೆ ಹೋಗಳಾಡಿ ಸುವ ಕಾರ್ಯಕ್ರಮ - ವರದಿ ಸೋಷಿಯಲ್ ಫಾರೂಕ್

ಮಂಗಳೂರು: ಜಿಲ್ಲೆಯ ಪ್ರಮುಖ ಸಂಘಟನೆಯಾದ ಯುನಿವೆಫ್ ಕರ್ನಾಟಕದ ವತಿಯಿಂದ 2021-22 ನೇ ಸಾಲಿನ ಸಾಮೂಹಿಕ ಕಾರ್ಯಕ್ರಮ ವಾದ ಸೀರತ್ ಅಭಿಯಾನ ‘ ಅರಿಯಿರಿ ಮನುಕುಲದ ಪ್ರವಾದಿಯನ್ನು ‘ ಎಂಬ ಘೋಷ ವಾಕ್ಯ ಆಧಾರಿತ ಪ್ರಚಾರ ಅಭಿಯಾನ ಮತ್ತು ಇಸ್ಲಾಮಿನ ಪ್ರವಾದಿ ಮುಹಮ್ಮದ್ ಸ. ಅ. ರವರ ಮೇಲಿನ ತಪ್ಪು ಗ್ರಹಿಕೆಯನ್ನು ಇಲ್ಲದಾಗಿಸುವ ಸಮಗ್ರ ಸಾರ್ವಜನಿಕ ಕಾರ್ಯಕ್ರಮವನ್ನು ಇಂದು ಮಂಗಳೂರಿನ ಕಂಕನಾಡಿ ಯ ಜಮ್ಮಿಯತುಲ್ ಫಲಾಹ್ ಸಭಾಂಗಣದಲ್ಲಿ ಉದ್ಘಾಟಿಸುವ ಮೂಲಕ ಮುಂದಿನ ಅವಧಿಯ 60 ದಿವಸಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಉದ್ಘಾಟನಾ ಸಭಾ ಕಾರ್ಯಕ್ರಮದಲ್ಲಿ ಉಮರ್ ಕುಂಞ
ಮುಸ್ಲಿಯಾರ್ ಬೆಳ್ತಂಗಡಿ ರವರ ಅತಿಥಿ ಭಾಷಣ

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿಯ ಸಮಾಜ ಸೇವಕರು ಮತ್ತು ಮುದರಿಸ್ ಸಂಸ್ಥೆಯ ಜ. ಉಮರ್ ಕುಂಞ ಮುಸ್ಲಿಯಾರ್ ಬೆಳ್ತಂಗಡಿ ಇವರು ಭಾಗವಹಿಸಿ ಧಾರ್ಮಿಕ ಮಹತ್ವ ಮತ್ತು ಪ್ರವಾದಿ ಸಂದೇಶದ ಅನಿವಾರ್ಯತೆ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಸಂಸ್ಥೆಯ ಸಹ ಸಂಚಾಲಕರಾದ ಮೊಹಮ್ಮದ್ ನಬೀಲ್ ಶಾಬಾನ್ ರವರು ನೆರವೇರಿಸಿದರು. ಸಂಸ್ಥೆಯು ಸ್ಥಾಪಿಸಿದ ವಾರ್ಷಿಕ ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ ಯನ್ನು ಮೂಡಬಿದ್ರೆ ಯ ಜ. ಅಹಮದ್ ಷರೀಫ್ (ಮಿಲನ್) ಪುತ್ತಿಗೆ ರವರಿಗೆ ಪ್ರಧಾನ ಮಾಡಲಾಯಿತು.

ಜ.ಮೊಹಮ್ಮದ್ ಷರೀಫ್ ಮಿಲನ್ ಪುತ್ತಿಗೆ ಅವರಿಗೆ ಸೇವಾ ಪ್ರಶಸ್ತಿಯಾದ ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ ಪ್ರಧಾನ

ಉಳ್ಳಾಲ ಹಜ್ರತ್ ಮದನಿ ಶಿಕ್ಷಣ ಸಂಸ್ಥೆಯ ವಿಧ್ಯಾರ್ಥಿ ಶಾನ್ ಫರ್ಹಾನ್ ರವರು ತನ್ನ ಕಿರು ವಯಸ್ಸಿನಲ್ಲಿಯೇ ವಿಡಿಯೋ ಚಾನೆಲ್ ಮಾಧ್ಯಮ ರಚನೆ ಮಾಡಿ,ಸ್ಥಾಪಿಸಿ ವರದಿ ಬಿತ್ತರಿಸುವಿಕೆ ಯ ಪ್ರತಿಭೆಯನ್ನು ಗುರುತಿಸಿ ಸನ್ಮಾನ ಮಾಡಲಾಯಿತು.

ಶಾನ್ ಫರ್ಹಾನ್ ಗೆ ಬಾಲ ಪ್ರತಿಭಾ ಸನ್ಮಾನ

ಕಾರ್ಯಕ್ರಮದ ಪ್ರಮುಖ ಭಾಷಣ ವಿಷಯವಾದ ಮಾನವೀಯ ಮೌಲ್ಯಗಳು ಮತ್ತು ಪರಧರ್ಮ ಸಹಿಷ್ಣುತೆ ಮತ್ತು ಪ್ರವಾದಿ(ಸ) ಬಗ್ಗೆ ಸಂಸ್ಥೆಯ ಮುಖ್ಯಸ್ಥರಾದ ಜ. ರಫೀಯುದ್ದೀನ್ ಕುದ್ರೋಳಿ ಮಾತನಾಡಿ ಯುನಿವೆಫ್ ಕಳೆದ 16 ವರ್ಷದಿಂದ ನಿರಂತರವಾಗಿ ಸೇವಾ ಕಾರ್ಯಕ್ರಮ ಮಾಡುತ್ತಾ ಬಂದಿದ್ದು, ಇದರ ಧ್ಯೇಯ ವನ್ನು ದಡ ಮುಟ್ಟಿಸುವ ಉದ್ದೇಶ ಹೊಂದಿದ್ದು, ಈ ಸಂಘಟನೆ ಎಂದಿಗೂ ಸನ್ಮಾನ ಪಡೆಯುವ ಸಂಸ್ಥೆಯಲ್ಲ. ಬದಲಿಗೆ ಜನರ ಮಧ್ಯೆ ಸೇವಾ ಸಂಪನ್ಮೂಲ ವ್ಯಕ್ತಿ ಗಳನ್ನು ಗುರುತಿಸಿ ಸನ್ಮಾನ ಅಥವಾ ಪ್ರಶಸ್ತಿ ನೀಡುವ ಸಂಸ್ಥೆಯಾಗಿದೆ. ಆದುದರಿಂದಲೇ ಇಸ್ಲಾಮಿನ ಸಂದೇಶ ಪ್ರಚಾರ ಮಾಡಿದ ಏಷಿಯಾ ಉಪಖಂಡದ ಮಹತ್ವದ ವ್ಯಕ್ತಿ ಶೇಖ್ ಅಹಮದ್ ಸರ್ ಹಿಂದಿ ಪ್ರಶಸ್ತಿ ಸ್ಥಾಪಿಸಿ ಸಮಾಜ ಸೇವಕರಿಗೆ ಮೀಸಲಿಡಲಾಗಿದೆ.

ಒಂದು ಪ್ರದೇಶದಲ್ಲಿ ಮುಸ್ಲಿಮರಿಗೆ ತಮ್ಮ ಧರ್ಮವನ್ನು ಪಾಲಿಸಿ ಜೀವಿಸಲು ಕಷ್ಟವಾದರೆ ಪ್ರವಾದಿ ವರ್ಯರ ಚರ್ಯೆ ಪಾಲಿಸಿ ಮತ್ತು ಅವರ ಸಂದೇಶ ಪ್ರಚಾರ ಪಡಿಸಿ ಮತ್ತು ಅವರ ಮೇಲಿನ ತಪ್ಪು ಗ್ರಹಿಕೆಯ ನ್ನು ಇಲ್ಲದಾಗಿಸಲು ಪ್ರಯತ್ನಿಸಿ,ಅಂತಹ ಪ್ರಯತ್ನ ಮುಸ್ಲಿಮೇತರ ಸಹೋದರರಲ್ಲಿ ಮಾನವೀಯ ಮೌಲ್ಯಗಳ ಪಾಲನೆಯ ಮಹತ್ವವನ್ನು ಅರಿಯಲು ಅನುಕೂಲವಾಗುತ್ತದೆ.ಅಂದು ಶೇಖ್ ಅಹ್ಮದ್ ಸರ್ ಹಿಂದಿ ರವರು, ಯೂನಿವೆಫ್ ಕರ್ನಾಟಕ ಹಮ್ಮಿದ ಇಂದಿನ ಕಾರ್ಯವನ್ನು ಅಂದು ಮಾಡಿದ ಕಾರಣದಿಂದ ಇಂದು ಏಷಿಯಾ ಉಪಖಂಡದ ಲ್ಲಿ ಮುಸ್ಲಿಮರು ಅಸ್ತಿತ್ವವನ್ನು ಹೊಂದಿದ್ದಾರೆ. ರಫೀಯು ದ್ದೀನ್ ರವರು ಮುಂದುವರಿದು ಇತ್ತೀಚೆಗಿನ ಉಪ ಚುನಾವಣೆ ಯಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಿದ ವಿಷಯ ಪ್ರಸ್ತಾಪಿಸಿ,ಮುಸ್ಲಿಮ್ ಸಮುದಾಯ ಇಂದು ವೈಚಾರಿಕ ದೀವಾಲಿತನ ಕೆ ಕುಸಿದು ಚುನಾವಣೆಯಲ್ಲಿ ಸೋಲುವ ಪಕ್ಷ ತನ್ನ ಪಕ್ಷದ ಅಭ್ಯರ್ಥಿ ತನವವನ್ನು ಸೋಲುವ ಮುಸ್ಲಿಮ್ ಅಭ್ಯರ್ಥಿಗೆ ನೀಡಿ, ಇತರ ಯಾವ ಪಕ್ಷ ಮುಸ್ಲಿಮರಿಗೆ ನಾಯಕತ್ವ ನೀಡಿದೆ ಎಂದು ಪ್ರಶ್ನಿಸಿ, ಮುಸ್ಲಿಮರ ಸಾಮುದಾಯಿಕ ನಿರ್ನಾಮಕೆ ನಾಂದಿ ಹಾಡಿಸಲಾಯಿತು ಎಂದರು. ಇಂದು ಗತ ಕಾಲದ ಮುಸ್ಲಿಮ್ ಸೇವಾ ವ್ಯಕ್ತಿತ್ವಗಳ ಇತಿಹಾಸ ವನ್ನೂ ನಾವು ಮರೆತಿದ್ದೇವೆ ಮತ್ತು ಆ ಚರಿತ್ರೆಯನ್ನು ನಾವು ಕಲಿಯ ಬೇಕಿದೆ. ನಮ್ಮ ಧ್ಯೇಯ ವಾದ ಅಭಿಯಾನ ದ ಭಾಗವಾಗಿ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಂದೇಶ ಪ್ರಚಾರ ಕಾರ್ಯಕ್ರಮವನ್ನು ಯೋಜಿಸಲಾಗಿದೆ. ಜಿಲ್ಲೆಯ ಸರ್ವ ವಿಧಾನ ಸಭಾ ಕ್ಷೇತ್ರದ ಲ್ಲಿ ವಾಹನ ಅಭಿಯಾನ ಮಾಡಲಿದೆ.ಭಾರತದಲ್ಲಿ ಮುಸ್ಲಿಮರನ್ನು ಗುರಿ ಪಡಿಸಿ ಮರ್ದಿಸ ಲಾಗುತ್ತಿದೆ ಇದು ಮುಸ್ಲಿಮರ ಮೇಲಿನ ಅಪ ಪ್ರಚಾರ ಮಾಡಲಾಗುತ್ತಿದೆ.ಅಭಿಯಾನ ದಿಂದ ಈ ಅಂತರವನ್ನು ನೀಗಿಸಲು ಪ್ರಯತ್ನಿಸಲಾಗುತ್ತಿದೆ.

ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ಸದಸ್ಯರಾದ ಉ ಬೈದುಲ್ಲಾ ಬಂಟ್ವಾಳ್ ಧನ್ಯವಾದ ಸಮರ್ಪಿಸಿದರು.