February 11, 2025

Vokkuta News

kannada news portal

ಎಸ್ಡೀಪಿಐ ಯಿಂದ ಮೇ 27 ರಂದು ಮಂಗಳೂರು ಕಣ್ಣೂರಿನಲ್ಲಿ ಬೃಹತ್ ಜನಾಧಿಕಾರ ಸಮಾವೇಶ

ಮಂಗಳೂರು: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಮಂಗಳಉರಿನ ಕಣ್ಣೂರಿನಲ್ಲಿ ಮೇ ತಿಂಗಳ 27 ರಂದು ಬೃಹತ್ ರಾಜಕೀಯ ಸಮಾವೇಶ ನಡೆಯಲಿದೆ ಎಂದು ಪಕ್ಷದ ಅಧಿಕೃತರು ಇಂದು ಪ್ರಕಟಣೆ ನೀಡಿದ್ದಾರೆ.

ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರಕಾರದ ಪ್ರಜೆಗಳ ವಿರುದ್ಧದ ದ್ವೇಷ ರಾಜಕೀಯ ಮತ್ತು ಆಡಳಿತ ನಡೆ ಯನ್ನು ವಿರೋಧಿಸಿ ಜನಾಧೀಕಾರ ಸಮಾವೇಶ ಎಂಬ ಘೋಷಣೆಯ ಮೂಲಕ ಬೃಹತ್ ರ್ಯಾಲಿ ನಡೆಸಲಿದೆ.

ರಾಜ್ಯ ಮಟ್ಟದ ಈ ಕಾರ್ಯಕ್ರಮ ರಾಜ್ಯದ ಐದು ಕೇಂದ್ರಗಳಲ್ಲಿ ಜರುಗಲಿದ್ದು,ಮಂಗಳೂರು,ಬೆಂಗಳೂರು, ದಾವಣಗೆರೆ, ಮೈಸೂರು ಗುಲ್ಬರ್ಗದಲ್ಲಿ ನಡೆಯಲಿದೆ. ಸಮಾವೇಶದಲ್ಲಿ ಪಕ್ಷದ ರಾಜ್ಯ ರಾಷ್ಟ್ರೀಯ ಮಟ್ಟದ ಪ್ರತಿನಿಧಿಗಳು ಭಾಗವಹಿಸಲಿದ್ದು,ಸರಕಾರದ ವಿರುದ್ಧ ಜನರನ್ನು ಜಾಗೃತ ಗೊಳಿಸುವ ಸಾರ್ವಜನಿಕ ಕಾರ್ಯಕ್ರಮ ವಾಗಿದೆ.

ಮಂಗಳೂರಿನಲ್ಲಿ ಜರುಗುವ ಕಾರ್ಯಕ್ರಮವು ಈ ಬಾರಿ ವಿಶಿಷ್ಟವಾಗಿ ನಡೆಯಲಿದೆ ಎಂದು ಪಕ್ಷದ ಅಧಿಕೃತರು ತಿಳಿಸಿದ್ದಾರೆ.