July 27, 2024

Vokkuta News

kannada news portal

ದ.ಕ.ಜಿಲ್ಲೆಯ ಅಲ್ಪ ಸಂಖ್ಯಾತ ಪ್ರಮುಖ ಉದ್ಯಮಿಗೆ ಕಾಂಗ್ರೆಸ್ ಪಕ್ಷದಿಂದ ವಿ.ಪರಿಷತ್ ಸದಸ್ಯತ್ವ ನೀಡುವಿಕೆಗೆ ಚಿಂತನೆ?

ಮಂಗಳೂರು: ಸಂಪ್ರದಾಯಿಕ ಮತ ಸಮುದಾಯದ ಜನಾದೇಶಕ್ಕನುಗುಣವಾಗಿ ಪ್ರಾತಿನಿಧ್ಯವನ್ನು ಸಮತೋಲನ ಗೊಳಿಸುವ ಉದ್ದೇಶದಿಂದ ಕರ್ಣಾಟಕ ಪ್ರದೇಶ ಕಾಂಗ್ರೆಸ್ ಪಕ್ಷ, ದ.ಕ.ಜಿಲ್ಲೆಯ ಅಲ್ಪ ಸಂಖ್ಯಾತ ಸಮುದಾಯದ ಪ್ರಮುಖ ಉದ್ಯಮಿ,ಉನ್ನತ ವೃತ್ತಿಪರ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಮತ್ತು ಪಕ್ಷದ ಹಿತೈಷಿ ಯೋರ್ವರಿಗೆ ವಿಧಾನ ಪರಿಷತ್ ಸದಸ್ಯತ್ವವನ್ನು ನೀಡುವುದಾಗಿ ಪಕ್ಷದ ಉನ್ನತ ಮಟ್ಟದ ನಾಯಕರಲ್ಲಿ ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಈ ಹಿಂದೆ ಭಾರತೀಯ ಕಾಂಗ್ರೆಸ್ ಪಕ್ಷ ಪೂರ್ಣ ಪ್ರಮಾಣದ ಆಡಳಿತ ನಡೆಸಿದ ನಂತರದಿಂದ ಜಿಲ್ಲೆಯ ಅಲ್ಪ ಸಂಖ್ಯಾತ ಮತ್ತು ಬಿಲ್ಲವ ಸಮುದಾಯ ವರ್ಗದವರಿಗೆ ರಾಜಕೀಯ ಪ್ರಾತಿನಿಧ್ಯ ವ್ಯತ್ಯಯ ವಾದ ಕಾರಣದಿಂದ ಈ ಹಿಂದೆ, ಕೆ.ಪೀ. ಸಿ.ಸಿ ಸದಸ್ಯರಾದ ಕ್ರೈಸ್ತ ಸಮುದಾಯದ ಐವನ್ ಡಿಸೋಜಾ ರವರಿಗೆ ಪಕ್ಷ ವಿಧಾನ ಪರಿಷತ್ ಸದಸ್ಯತ್ವ ನೀಡಿತ್ತು. ಆ ನಂತರ ಕಳೆದ ಚುನಾವಣೆಯಲ್ಲಿ ದ.ಕ.ಜಿಲ್ಲೆಯಲ್ಲಿ ಕಾಂಗ್ರಸ್ ಪಕ್ಷಕ್ಕೆ ಮಂಗಳೂರು ವಿಧಾನ ಸಭಾ ಕ್ಷೇತ್ರ ಹೊರತು ಪಡಿಸಿದರೆ ಇತರ ಏಳು ಕ್ಷೇತ್ರಗಳು ಕೈ ತಪ್ಪಿದ್ದವು. ಆ ಸಂದರ್ಭದಲ್ಲಿ ಬಿಲ್ಲವ ಸಮುದಾಯದ ನಾಯಕರಾದ ಹರೀಶ್ ಕುಮಾರ್ ರವರಿಗೆ ವಿಧಾನ ಪರಿಷತ್ ಸದಸ್ಯತ್ವ ಮತ್ತು ದ.ಕ .ಜಿಲ್ಲಾ ಕಾಂಗ್ರೆಸ್ ಪಕ್ಷದ ನೇತೃತ್ವ ನೀಡಲಾಗಿತ್ತು.

ಪ್ರಸ್ತುತ ಮಂಗಳೂರು ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾದ ಶ್ರೀ ಯು. ಟಿ.ಖಾದರ್ ರವರು ರಾಜ್ಯ ರಾಜಕೀಯದಲ್ಲಿ ದ್ವಿತೀಯ ಪೀಳಿಗೆ ಮುಂಚೂಣಿ ನಾಯಕರಾಗಿ ರುವುದರಿಂದ, ದ.ಕ.ಜಿಲ್ಲೆಯ ಮಟ್ಟದಲ್ಲಿ ಸುಮಾರು ನಾಲ್ಕು ವರೆ ಲಕ್ಷ ಸಂಪ್ರದಾಯಿಕ ಮತದಾರರಾದ ಅಲ್ಪ ಸಂಖ್ಯಾತ ಜನ ವರ್ಗದ ಪ್ರತಿನಿಧಿ ಯಾಗಿ ನೇಮಿಸಲು ಪ್ರಮುಖ ವ್ಯಕ್ತಿಗೆ ವಿಧಾನ ಪರಿಷತ್ ಸದಸ್ಯತ್ವ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗಿದೆ.

ದ.ಕ.ಜಿಲ್ಲೆಯಲ್ಲಿ ಈ ಹಿಂದೆ ಭಂಟ ಸಮುದಾಯದ ನಾಯಕರೆಂದು ಪರಿಗಣಿಸಲ್ಪಟ್ಟ ಶ್ರೀ ರಮಾನಾಥ ರೈಯವ ರಿಗೇ ಅವರ ಕ್ಷೇತ್ರ ಬಂಟ್ವಾಳ ಕೈ ತಪ್ಪಿ ಹೋದ ಕಾರಣದಿಂದ . ಬಂಟ ಸಮುದಾಯದ ಎನ್.ಎಸ್.ಯು. ಐ ಯುವ ನಾಯಕರಾದ ಶ್ರೀ ಮಿಥುನ್ ರೈ ರವರಿಗೆ ಲೋಕ ಸಭಾ ಅಭ್ಯರ್ಥಿ ಸ್ಥಾನ ನೀಡಲಾಗಿ ಪಕ್ಷದಿಂದ ಭಂಟ ಸಮುದಾಯಕ್ಕೆ ಪಕ್ಷದ ವತಿಯಿಂದ ಪ್ರಾತಿನಿಧ್ಯ ವನ್ನು ನೀಡಿ ಸರಿ ದೂಗಿ ಸಲಾಗಿತು.

ಪ್ರಸ್ತುತ ದ.ಕ.ಜಿಲ್ಲೆಯಲ್ಲಿ ಸಾಂಪ್ರಾದಾಯಿಕ ಮುಸ್ಲಿಮ್ ಅಲ್ಪ ಸಂಖ್ಯಾತ ಮತ ವರ್ಗದ ವಿಭಾಗದ ಇರುವಿಕೆಯು ವ್ಯತ್ಯಯ ವಾಗದಂತೆ ಸರಿದೂಗಿಸಲು ಅಲ್ಪ ಸಂಖ್ಯಾತ ವಿಭಾಗ ದ ಪ್ರಮುಖ ಉದ್ಯಮಿ, ಈ ಹಿಂದೆ ವಕ್ಫ್ ಸಲಹಾ ಸಮಿತಿ ಮುಖ್ಯಸ್ಥ ರಾಗಿದ್ದ ಮತ್ತು ಹಾಲಿ ಉನ್ನತ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಪಕ್ಷದ ಹಿತೈಷಿ ನಾಯಕರೋರ್ವರಿಗೆ ವಿಧಾನ ಪರಿಷತ್ ಸದಸ್ಯತ್ವ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ದ.ಕ.ಜಿಲ್ಲೆಯಲ್ಲಿ ಪ್ರಸ್ತುತ ಜನತಾ ದಳದಿಂದ ವಿಧಾನ ಪರಿಷತ್ ಗೆ ಆಯ್ಕೆಯಾದ ಪ್ರಮುಖ ಉದ್ಯಮಿ ಶ್ರೀ ಬಿ. ಎಂ.ಫಾರೂಕ್ ರವರಿಗೆ ಜನತಾ ದಳ ಎಸ್. ಪಕ್ಷದ ಕಾರ್ಯಾಧ್ಯಕ್ಷ ಸ್ಥಾನ ನೀಡಿದೆ. ಶ್ರೀ. ಬೀ.ಎಂ.ಫಾರೂಕ್ ರವರ ವಿಧಾನ ಪರಿಷತ್ ಸದಸ್ಯತ್ವ ಜಿಲ್ಲೆಯ ಅಲ್ಪ ಸಂಖ್ಯಾತ ವಿಭಾಗಕೆ ಅನಿರೀಕ್ಷಿತ ಬೆಳವಣಿಗೆ ಎಂದೇ ಹೇಳಬಹುದು. ಆದರೆ,ಕಳೆದ ಹಲವಾರು ದಶಕಗಳಿಂದ ಕಾಂಗ್ರೆಸ್ ಪಕ್ಷ ದ.ಕ.ಜಿಲ್ಲೆ ಮೂಲದ ಉದ್ಯಮಿ ವರ್ಗಕ್ಕೆ ವಿಧಾನ ಪರಿಷತ್ ಸ್ಥಾನ ನೀಡುವಿಕೆಗೆ ಆದ್ಯತೆ ನೀಡಿರಲಿಲ್ಲ.

.ಪ್ರಸ್ತುತ ಈ ಸರ್ವ ವ್ಯತ್ಯಯಗಳನ್ನು ಸರಿದೂಗಿಸಲು ಮುಸ್ಲಿಮ್ ಪ್ರಮುಖ ವ್ಯಕ್ತಿಯೋರ್ವರಿಗೆ ವಿಧಾನ ಪರಿಷತ್ ಸದಸ್ಯತ್ವ ನೀಡಲು ರಾಜ್ಯ ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.