ಹಜ್ ಮಂಡಳಿಯು ಈಗಾಗಲೇ ವಿವಿಧ ಕಾರಣಗಳನ್ನು ಮುಂದಿಟ್ಟು,ಮಂಗಳೂರು ನಿರ್ಗಮಿತ ಹಜ್ ವಿಮಾನಗಳನ್ನು ರದ್ದುಗೊಳಿಸಿದ್ದು, ಇದರಿಂದಾಗಿ ದ.ಕ,ಉಡುಪಿ,ಕಾರವಾರ,ಕೊಡಗು,ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಹಜ್ ಯಾತ್ರಾರ್ಥಿ ಗಳಿಗೆ,ತೀವ್ರ ಅನಾನುಕೂಲವಾಗಿದೆ.
ಕರಾವಳಿ ಜಿಲ್ಲೆಗಳಲ್ಲಿನ ಹಜ್ ಸಂಬಂಧಿತ ವಿಷಯಗಳು ಅತ್ಯಂತ ಮಹತ್ವವಾಗಿದ್ದು, ಕೇಂದ್ರ ಸರಕಾರದ ಮಂಗಳೂರು ನಿರ್ಗಮಿತ ಹಜ್ ವಿಮಾನಗಳನ್ನು ರದ್ದು ಗೊಳಿಸಿ ಬೆಂಗಳೂರು ಮುಖಾಂತರ ಯಾತ್ರಾ ರ್ಥಿಗಳನ್ನು ಕಳುಹಿಸುವುದು,ಹಜ್ ಆಕಾಂಕ್ಷಿ ಗಳ ಸಂಖ್ಯೆಯನ್ನು ಆಧರಿಸಿ ನೋಡುವುದಾದರೆ, ಕೇಂದ್ರ ಸರ್ಕಾರದ ಈ ನಿಲುವು ಅನ್ಯಾಯ ಆಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಪರಿಗಣನಾತ್ಮಕ ಮತ್ತು ವ್ಯವಸ್ಥಿತ ಮುಸ್ಲಿಮ್ ವಾಸ್ತವ್ಯ,ಧಾರ್ಮಿಕ ಕೇಂದ್ರಗಳು, ಘಾಡ ಆರಾಧನ ರೂಡಿತ್ವ ಮತ್ತು ಯಾತ್ರಾ ಇತಿಹಾಸ ವನ್ನು ಅವಲೋಕಿಸುವು ದಾದರೆ,ಹಾಗೂ ಮಂಗಳೂರು ಸ್ಮಾರ್ಟ್ ಸಿಟಿ ನಗರದ ಉನ್ನತೀಕರಣ,ಮೂಲಭೂತ ಸೌಕರ್ಯ, ಸಂಪರ್ಕ ಲಭ್ಯತೆಯನ್ನು ಪರಿಗಣಿಸಿ ಮಂಗಳೂರು ಕೇಂದ್ರಿತ ಹಜ್ ಯಾತ್ರಾರ್ಥಿಗಳ ನಿರ್ಗಮಿತ ವ್ಯವಸ್ತೆಯನ್ನು ಕೇಂದ್ರ ಹಜ್ ಮಂಡಳಿ ರದ್ದುಗೊಳಿಸಬಾರದಿತ್ತು.
ಆದರೆ ಇಷ್ಟೆಲ್ಲಾ ಸಂಪರ್ಕ ಸೌಕರ್ಯ ಗಳಿದ್ದು ಕೂಡಾ ವಿಮಾನ ರದ್ದು ಗೊಳಿಸಿದ್ದು ಖೇದಕರ,ಅನ್ಯಾಯ ಮತ್ತು ಖಂಡನೀಯ.
ಮಂಗಳೂರು ಕೇಂದ್ರಿತ ಹಜ್ ನಿರ್ಗಮನ ಕೇಂದ್ರದ ಭಾಗವಾಗಿ ಈ ಹಿಂದಿನ ಅವಧಿಯಲ್ಲಿ ಕರ್ನಾಟಕ ರಾಜ್ಯ ಸರಕಾರ ಮಂಗಳೂರಿಗೆ ಹಜ್ ಭವನ ನಿರ್ಮಾಣಕ್ಕೆ ಬಡ್ಜೆಟ್ ನಲ್ಲಿ ಪರಿಗಣನಾತ್ಮಕ ನಿಧಿಯನ್ನು ಕೂಡಾ ಬಿಡುಗಡೆ ಗೊಳಿಸಿದೆ.
ಹಾಗಿದ್ದೂ ಕೂಡಾ ವಿಮಾನ ರದ್ದು ಪಡಿಸಿರುವುದು ಅತೀವ ಸಂಶಯಕ್ಕೆ ಕಾರಣವಾಗಿದೆ.
ಮುಂದುವರಿದು,ಕರ್ನಾಟಕ ರಾಜ್ಯದ ಸರ್ವ ಸಂಸದರ ನಿಯೋಗ ಆದಷ್ಟೂ ತುರ್ತಾಗಿ ಕೇಂದ್ರ ಹಜ್ ಸಚಿವರಲ್ಲಿ ಈ ಬಗ್ಗೆ ಚರ್ಚಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಮಂಗಳೂರು ನಿರ್ಗಮಿತ ಹಜ್ ವಿಮಾನದ ಏರ್ಪಾಡು ಮಾಡಲು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ದ ಅಧ್ಯಕ್ಷರು ಹಾಗೂ ಮಾಜಿ ಮೇಯರ್ ಆದ ಕೆ.ಅಶ್ರಫ್ ರವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಇನ್ನಷ್ಟು ವರದಿಗಳು
ನ್ಯೂಜಿಲೆಂಡ್: ಕ್ರೈಸ್ತ ಚರ್ಚ್, ಅಲ್ನೂರ್ ಮಸೀದಿ ದಾಳಿ ಸ್ಥಳಕ್ಕೆ ಭೇಟಿ ನೀಡಿದ ಮುಸ್ಲಿಂ ವರ್ಲ್ಡ್ ಲೀಗ್ ಮುಖ್ಯಸ್ಥ ಶೇಖ್ ಮೊಹಮ್ಮದ್ ಅಲ್ – ಇಸ್ಸಾ.
ಅಮೆರಿಕ ಜೊತೆಗಿನ ದ್ವಿತೀಯ ಮಾತುಕತೆಗೆ ಸಿದ್ಧವಾಗದ ಇರಾನ್, ಪಾಕಿಸ್ತಾನದ ಶಾಂತಿ ಮಾತುಕತೆ ಬಗ್ಗೆ ಅನುಮಾನ ವ್ಯಕ್ತ.
ವಿಶ್ವಸಂಸ್ಥೆ: ಇಸ್ರೇಲ್ – ಅಮೆರಿಕಾಕ್ಕೆ ಯುದ್ಧ ಅಂತ್ಯಗೊಳಿಸಲು, ಇರಾನ್ ಧಾಳಿ ನಿಲ್ಲಿಸಲು ಸೆಕ್ರೆಟರಿ ಜನರಲ್ ಆ್ಯಂಟನಿ ಗುಟಾರಸ್ ಕರೆ.