September 8, 2024

Vokkuta News

kannada news portal

ಮೇ 31, ಜೂ 1: ಸಿ.ಪಿ.ಐ(ಎಂ) ನಿಂದ ಮಂಗಳೂರಿನಲ್ಲಿ ಮುಸ್ಲಿಮ್ ಸಮಾವೇಶ.

ಜಿಲ್ಲೆಯ ವ್ಯತ್ಯಸ್ತ  ರಾಜಕೀಯ,ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜ್ಯ ಮುಸ್ಲಿಮ್ ಸಮಾವೇಶ ಆಯೋಜನೆ ವಿಶಿಷ್ಟತೆ ಪಡೆಯಲಿದೆ ಎಂದು ಸಂಘಟಕರು ಅಭಿಪ್ರಾಯ ಪಟ್ಟಿರುತ್ತಾರೆ.

ಮಂಗಳೂರು: ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ ( ಮಾರ್ಕ್ ಸಮ್ ) , ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮೇ 31 ಮತ್ತು ಜೂನ್ 1ರಂದು ಮಂಗಳೂರಿನ ಪುರಭವನದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಮುಸ್ಲಿಮ್ ಸಮಾವೇಶ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕರ್ನಾಟಕದ ಮುಸ್ಲಿಮರ ನೋವು ನಲಿವಿನ ಅನಾವರಣದ ಉದ್ದೇಶ ಎಂಬ ಪ್ರಸ್ತಾಪ ದೊಂದಿಗೆ, ಈ ಸಮಾವೇಶದ ಉದ್ದೇಶ ಜಾತ್ಯಾತೀತತೆ, ಸಬಲೀಕರಣ ಮುನ್ನಡೆ ಎಂಬ ಗುರಿಯಾಗಿದೆ ಎಂದು ಸಂಘಟನೆ ಯ ಉದ್ದೇಶ ಎಂದು ತಿಳಿಸಲಾಗಿದೆ.

ಸಮಾವೇಶದ ಪೂರ್ವಾಹ್ನದ ಗೋಷ್ಠಿಯಲ್ಲಿ,ಕೇರಳದ ಮಾಜಿ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ. ಕೆ.ಟಿ.ಜಲೀಲ್ ಉದ್ಘಾಟಕರಾಗಿ, ಮುಖ್ಯ ಅತಿಥಿಗಳಾಗಿ ದಲಿತ ಸಂಘಟನೆಯ ಮಾವಳ್ಳಿ ಶಂಕರ್, ಸಾಹಿತಿ ಶ್ರೀಮತಿ ಶರೀಫ, ಕರ್ನಾಟಕ ಸಿ. ಪಿ. ಐ.ಎಂ ನ ಯು.ಬಸವರಾಜು,ದ.ಕ.ಸಿ. ಪೀ. ಐ.ಎಂ ನ ಕೆ. ಯಾದವ ಶೆಟ್ಟಿ.ಹಾಗೂ ಸಭಾಧ್ಯಕ್ಷ ರಾಗಿ ಕರ್ನಾಟಕ ಸಿ. ಪೀ. ಐ.ಎಂ ನ ಸೈಯದ್ ಮುಜೀಬ್,ಮತ್ತು ಪ್ರಾಸ್ತಾವಿಕ ಭಾಷಣ ಕಾರರಾಗಿ ಕರ್ನಾಟಕ ಸಿ.ಪೀ.ಐ.ಎಂ ನ ಮುನೀರ್ ಕಾಟಿಪಳ್ಳ ಭಾಗವಹಿಸ ಲಿದ್ದಾ ರೆ.

ಮಧ್ಯಾಹ್ನದ ಗೋಷ್ಠಿಯಲ್ಲಿ,ಕೋಮುವಾದದ ಪ್ರಯೋಗ ಶಾಲೆ ಯಾಗಿ ಕರ್ನಾಟಕ ಎಂಬ ವಿಷಯದಲ್ಲಿ ಹಂಪಿ ವಿ.ವಿ.ಯ ನಿವೃತ್ತ ಪ್ರಾಧ್ಯಾಪಕರು ಆದ ಡಾ.ಚಂದ್ರ ಪೂಜಾರಿ,ಬೆಂಗಳೂರು ರಾಜಕೀಯ ವಿಶ್ಲೇಷಕರು ಆದ ಡಾ. ಕೆ. ಸತೀಶ್, ಅಧ್ಯಕ್ಷತೆಯಾಗಿ ಮುನೀರ್ ಕಾಟಿಪಳ್ಳ,ನಿರ್ವಹಣೆ ಆಗಿ ಸುನಿಲ್ ಕುಮಾರ್ ಬಜಾಲ್ ಭಾಗವಹಿಸಲಿದ್ದಾರೆ.

ಸಂಜೆ ಗೋಷ್ಠಿಯಲ್ಲಿ ಕರ್ನಾಟಕದ ಮುಸ್ಲಿಮರ ಸ್ಥಿತಿಗತಿ ಎಂಬ ವಿಷಯದಲ್ಲಿ,ಹಿರಿಯ ಪತ್ರಕರ್ಥರಾದ ಶ್ರೀ. ಬೀ.ಎಂ . ಹನೀಫ್, ಹೊಸಪೇಟೆ ಚಿಂತಕರು ಸಾಹಿತಿ ಬರಹಗಾರರು ಆದ ಬೀ.ಪೀರ್ ಪಾಷಾ,ಅಧ್ಯಕ್ಷತೆ ಯಾಗಿ ಗುಲ್ಬರ್ಗಾ ಹೋರಾಟ ಗಾರರು ಆದ ಶ್ರೀಮತಿ ಕೆ.ನೀಲಾ, ನಿರ್ವಹಣೆ ಯಾಗಿ ಡಾ. ಜೀವನ್ ಕುತ್ತಾರ್ ಬಾಗವಹಿಸಲಿದ್ದಾರೆ.

ಸಂಜೆ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ ದಫ್, ಮಾ ಪಿಳ್ಳೆ ಪಾಟ್, ಕಾವ್ವಾಲಿ ಜರುಗಲಿದೆ. ಮತ್ತು ಜೂನ್ 01 ರಂದು ಆಂತರಿಕ ಕಲಾಪ ಜರುಗಲಿದೆ ಎಂದು ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಮತ್ತು ರಾಜ್ಯ ಸಮಿತಿಯ ಮುನೀರ್ ಕಾಟಿಪಳ್ಳ ಹೇಳಿಕೆ ನೀಡಿದ್ದಾರೆ.

ಜಿಲ್ಲೆಯ ವ್ಯತ್ಯಸ್ತ ರಾಜಕೀಯ,ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜ್ಯ ಮುಸ್ಲಿಮ್ ಸಮಾವೇಶ ಆಯೋಜನೆ ವಿಶಿಷ್ಟತೆ ಪಡೆಯಲಿದೆ ಎಂದು ಸಂಘಟಕರು ಅಭಿಪ್ರಾಯ ಪಟ್ಟಿರುತ್ತಾರೆ.