June 14, 2024

Vokkuta News

kannada news portal

ಸಿ.ಪಿ.ಐ.ಎಂ ಮುಸ್ಲಿಮ್ ಸಮಾವೇಶ: ಪ್ರವಾದಿ ತಮ್ಮ ಹಿತೈಷಿ ಅಭೂತಾಲಿಬ್ ರವರನ್ನು ಧರ್ಮಕ್ಕಾಗಿ ಒತ್ತಾಯ ಪಡಿಸುವಂತಿರಲಿಲ್ಲ, ಕುರ್ ಆನ್ : ಕೆ.ಟಿ.ಜಲೀಲ್.

ಫ್ಯಾಸಿಸ್ಟ್ ಷಡ್ಯಂತ್ರದ ವ್ಯಾಪಾರ ನಿರ್ಭಂದದ ಕಲ್ಲಂಗಡಿ ಹಣ್ಣು ದ್ವಂಸ ಸಂತ್ರಸ್ತ ಧಾರವಾಡದ ನಬೀ ಸಾಬ್ ಗೋಷ್ಠಿಯಲ್ಲಿ ಅತಿಥಿಗಳಾಗಿ ಉಪಸ್ತಿತರಿದ್ದರು.

ಮಂಗಳೂರಿನಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್ ವಾದ) ಆಶ್ರಯದಲ್ಲಿ ಏರ್ಪಡಿಸಿದ್ದ ಕರ್ನಾಟಕದ ರಾಜ್ಯ ಮಟ್ಟದ ಸಿ.ಪಿ. ಐ.ಎಂ ಮುಸ್ಲಿಮ್ ಸಮಾವೇಶ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತಾ ಕೇರಳ ಶಾಸಕ ಮತ್ತು ಮಾಜಿ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ. ಕೆ.ಟಿ.ಜಲೀಲ್ ರವರು ಸಿ. ಪೀ.ಐ.ಎಂ ಆಯೋಜಿಸುತ್ತಿರುವ ಈ ಮುಸ್ಲಿಮ್ ಸಮಾವೇಶವು ಯಾಕೆ ಈ ಸಂದರ್ಭ ಪ್ರಸಕ್ತ ವಿಷಯವಾಗಿದೆ ಅಂದರೆ, ನಮ್ಮ ರಾಜ್ಯ ಒಂದು ಧರ್ಮ ನಿರಪೇಕ್ಷತೆಯ ರಾಷ್ಟ್ರವಾಗಿದೆ. ಸರ್ವ ಧರ್ಮಗಳು, ಅನ್ಯ ಸಿದ್ದಾಂತಗಳು ಭಾರತದಲ್ಲಿ ಅಸ್ತಿತ್ವದಲ್ಲಿದೆ. ಯಾವುದನ್ನೂ ನಿರಾಕರಿಸದಂತಹ ಒಂದು ವೈಷ್ಟತೆಯೇ,ಜಾಗತಿಕವಾಗಿ ಭಾರತಕ್ಕೆ ಇರುವ ಮಹತ್ವ, ಸರ್ವವನ್ನೂ ಅರಗಿಸಿ ಕೊಳ್ಳಲು ನಮ್ಮ ಸಂಸ್ಕೃತಿ ನಮಗೆ ಬೋಧಿಸಿದ್ದು. ಆ ಕಾರಣಕ್ಕಾಗಿಯೇ,ಭಾರತದಲ್ಲಿ ಎಷ್ಟು ಧರ್ಮಗಳಿವೆಯೊ, ಸಿದ್ದಾಂತಗಳು ಇವೆಯೋ ಆ ಸರ್ವವೂಗಳಿಗೆ ಭಾರತದಲ್ಲಿ ಅನುಯಾಯಿ ವೃಂದ ಸೃಷ್ಟಿಯಾಗಿದೆ. ಆ ಮತ ನಿರಪೇಕ್ಷತೆ ಎಲ್ಲಾ ಕಾಲಗಳಲ್ಲಿಯೂ ಸಂರಕ್ಷಿಸಲ್ಪಟ್ಟಿರು ವುದು. ಓರ್ವನ ವಿಶ್ವಾಸವು ಯಾವುದೇ ಘಟ್ಟದಲ್ಲಿಯೂ ಒಂದು ಚರ್ಚೆಗೆ ವಿಷಯವಾಗಿರಲಿಲ್ಲ.ನಿಮಗೆ ತಿಳಿದಿದೆ ಅಶೋಕ ಚಕ್ರವರ್ತಿ ಭಾರತವನ್ನು ಆಳಿದ ಸಾಮ್ರಾಟನ ಸ್ಥಾನದಲ್ಲಿ ಓರ್ವ ಪ್ರಮುಖ ಸಾಮ್ರಾಟನಾಗಿದ್ದಾನೆ. ಆತ ಹಿಂದೂ ಧರ್ಮ ವಿಶ್ವಾಸಿಯಾಗಿದ್ದ,ಕಾಳಿಂಗ ಯುದ್ದ ಅವನಲ್ಲಿ ಬದಲಾವಣೆ ತಂದಿತು. ಹಿಂದೂ ಧರ್ಮವನ್ನು ಆತ ಪರಿತ್ಯಜಿಸಿ ಭುದ್ದ ಧರ್ಮವನ್ನು ರಕ್ಷಿಸು ವಂತೆ ಮಾಡಿತು. ಕಾಳಿಂಗ ಯುದ್ದ ನಂತರ ಕೂಡಾ ಅಶೋಕ ಚಕ್ರವರ್ತಿ ತನ್ನ ಸ್ಥಾನದಲ್ಲಿ ಮುಂದುವರಿದರು. ಆಗಲೂ ಭಾರತದಲ್ಲಿ ಬಹು ಸಂಖ್ಯಾತ ಜನರು ಹಿಂದೂ ಧರ್ಮ ಅನುಯಾಯಿಗಳಾ ಗಿದ್ದರು. ಯಾರೂ ಕೂಡ ಅಶೋಕ ಚಕ್ರವರ್ತಿ, ಧರ್ಮ ಪರಿವರ್ತನೆ ಆದ ಕಾರಣಕ್ಕೆ ಭಾರತದ ಜನರು, ಅಶೋಕ ಚಕ್ರವರ್ತಿಯ ಅರ್ಹತೆ ಯನ್ನು ಪ್ರಶ್ನಿಸುವ ಯಾವುದೇ ಸಂದರ್ಭವನ್ನು ನಮಗೆ ಕಾಣಲು ಸಿಗಲಾರದು. ಕಳೆದ ಎಂಟು ನೂರು ವರ್ಷ ಮುಸ್ಲಿಮ್ ರಾಜರು ಭಾರತವನ್ನು ಆಳಿದ ಬಗ್ಗೆ ನಾವು ಮುಕ್ತವಾಗಿ ನೋಡಿದ್ದೇವೆ. ಒಂದು ವೇಳೆ ಈ ಧೀರ್ಘ ಎಂಟು ನೂರು ವರ್ಷ ಭಾರತದ ಧರ್ಮ ವ್ಯವಸ್ಥೆ ಯನ್ನು ವ್ಯತ್ಯಯಗೊಳಿಸಲು ಸಾಧ್ಯವಾಗಿದ್ದರೆ, ಇಷ್ಟೂ ಧೀರ್ಘ ಕಾಲ ಭಾರತವನ್ನು ಆಳ್ವಿಕೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಹಿಂದೂ ಬಹುಸಂಖ್ಯಾತರ ವಿರುದ್ದ ನಡೆಸಿದ ಯಾವುದೇ ಪ್ರಕ್ಷೋಪ ಗಳನ್ನು ಆಧರಿಸಿ ಅಲ್ಲ ಮೊಗಲ್ ಆಳ್ವಿಕೆ ಅವಸಾನ ವಾದದ್ದು, 1957 ರ ದೇಶದ ಮಹತ್ವವಾದ ಸ್ವಾತಂತ್ರ್ಯ ಸಂಗ್ರಾಮವು ಹಿಂದೂಗಳು,ಕ್ರೈಸ್ತರು,ಮುಸ್ಲಿಮರು,ಸಿಖ್ಖರು,ಪಾರ್ಸಿಗಳು, ಒಗ್ಗಟ್ಟಾಗಿ ನಿಂತು ಬ್ರಿಟಿಷರ ವಿರುದ್ಧ ಯುದ್ದ ನಡೆಸಿರುತ್ತಾರೆ. ಆ ಯುದ್ಧವನ್ನು ಸುದೃದವಾಗಿಯೆ ಬ್ರಿಟಿಷರಿಂದ ಎದುಸಲಾಯಿತು. ಭಾರತದ ಒಂದನೇ ಸ್ವಾತಂತ್ರ್ಯದ ನಾಯಕನಾಗಿ ಬಹುಸಂಖ್ಯಾತ ಹಿಂದೂ ಧರ್ಮದ ಅನುಯಾಯಿಗಳು ಆಯ್ಕೆ ಮಾಡಿದ್ದು ಮೊಗಲ್ ರಾಜರಾದ ಬಹುದ್ದುರ್ ಶಾ ಜಫರ್ ಅವರನ್ನಾಗಿತ್ತು. ಬಹದ್ದೂರ್ ಷಾ ಸಫರ್ ಓರ್ವ ಮುಸ್ಲಿಮ್ ಆಗಿದ್ದರು.ಆದರೆ ಈ ದೇಶದ ಜನರು ಆತ ಮುಸ್ಲಿಮರು ಆದ ಕಾರಣಕ್ಕೆ ನಾವು ಈ ಸಂಗ್ರಾಮದ ನಾಯಕನಾಗಿ ಆತನನ್ನು ಆಯ್ಕೆ ಮಾಡುವುದಿಲ್ಲವೆಂದು ಎಂದಿಗೂ ಹೇಳಿಲ್ಲ. ಆದರೆ ಈ ಸಂಗ್ರಾಮ ಪಾರಜಯ ಹೊಂದಿದ ಕಾರಣಕ್ಕೆ ಬಹದ್ದೂರ್ ಶಾ ಸಫರ್ ಅನ್ನು ರಂಗೂನ್ ಗೆ ರವಾನಿಸಲಾಯಿತು. ಬ್ರಿಟಿಷರು ಈ ರಾಜನನ್ನು ಗಡೀಪಾರು ಗೊಳಿಸಿದ ಕಾರಣಕ್ಕಾಗಿ ಭಾರತದಲ್ಲಿ ಮೊಗಲ್ ಸಾಮ್ರಾಜ್ಯದ ಆಳ್ವಿಕೆ ಕೊನೆಗೊಂಡಿತು. ಸ್ವಾತಂತ್ರ್ಯಾ ನಂತರವೂ ನಮ್ಮ ದೇಶ ಈ ಮತ ನಿರಪೇಕ್ಷತೆಯ ಸಿದ್ದಾಂತವನ್ನು ಎತ್ತಿ ಹಿಡಿದಿದೆ. ಮೊಗಲ್ ಸಾಮ್ರಾಜ್ಯದ ಪತನದಿಂದು ಹಿಡಿದು ಬ್ರಿಟಿಷರು ಭಾರತದ ಆಡಳಿತ ನಡೆಸಿದರು. ಧಾರ್ಮಿಕವಾಗಿ ಬ್ರಿಟಿಷರು ಕ್ರೈಸ್ತರಾಗಿದ್ದರು. ಭಾರತದ ಸ್ವಾತಂತ್ರ್ಯ ಸಂಗ್ರಾಂವು ಎಂದಿಗೂ ಕ್ರೈಸ್ತ ವಿರೋಧಿ ಸಂಗ್ರಾಮವಾಗಿ ಮಾರ್ಪಾಡುಗೊಂಡದ್ದು ನಾವು ಎಲ್ಲಿಯೂ ನೋಡಿಲ್ಲ. ಕ್ರೈಸ್ತರಾಗಿರುವ ಬ್ರಿಟಿಷರು ಎಂದಿಗೂ ಭಾರತ ಬಿಟ್ಟು ತೊಲಗಿ ಎಂದು ಭಾರತದಲ್ಲಿ ಒಂದೇ ಒಂದು ಘೋಷಣೆ ಕೂಗಲಾಗಿಲ್ಲ. ಸ್ವಾತಂತ್ರ್ಯ ನಂತರ ಭಾರತದ ಪ್ರಧಾನ ಮಂತ್ರಿಯ ಖುರ್ಚಿಯಲ್ಲಿ 17 ವರ್ಷ ಆಸೀನರಾದವರು ಒಂದು ಧರ್ಮದಲ್ಲಿಯೂ ವಿಶ್ವಾಸ ಹೊಂದದ ಪಂಡಿತ್ ಜವಾಹರ್ ಲಾಲ್ ನೆಹರು ಆಗಿದ್ದರು. ಒಂದು ಧಾರ್ಮಿಕ ಸಭೆಯಲ್ಲಿಯೂ ಕೂಡಾ ಅವರ ಆಳ್ವಿಕೆ ಅವಧಿಯ 17 ವರ್ಷ ಕೂಡಾ ಭಾಗವಹಿಸಲಿಲ್ಲ. ಭಾರತದ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ರವರು ಒಂದು ನಿರ್ಧಿಷ್ಟ ಸಭೆಯಲ್ಲಿ ಭಾಗವಹಿಸುತ್ತಾರೆ ಎಂಬ ಮಾಹಿತಿ ಲಭ್ಯವಾದ ತಕ್ಷಣ ಅದಕ್ಕೆ ವಿರುದ್ಧವಾಗಿ ಪಂಡಿತ್ ನೆಹರು ರವರು ವಿರೋಧಿಸಿ ದ್ದರು.ಯಾವುದೇ ಧರ್ಮದೊಂದಿಗೆ ಅವರು ಬೆಂಬಲ ಸ್ಥಾನದಲ್ಲಿ ನಿಲ್ಲಲಿಲ್ಲ.ಬಾಕ್ರಾ ನಂಗಲ್ ಎಂಬ ಎರಡು ಜಲಾಶಯ ಗಳನ್ನ ಉದ್ಘಾಟಿಸಿ ಅವರು ಮಾಡಿದ ಭಾಷಣ ಒಂದು ಇದೆ. ಯಾರಾದರೂ ದೇವರನ್ನು ಕಾಣಲು ಬೇಕಿದ್ದರೆ ಇಲ್ಲಿಗೆ ಬನ್ನಿ ಇದುವೇ ಈ ದೇಶದ ಗರ್ಭಗುಡಿ ಎಂದು, ಕೋಟಿಗಟ್ಟಲೆ ಜನರಿಗೆ ಜೀವಜಲ ನೀಡುವ ಈ ಜಲಾಶಯವು ಇಲ್ಲಿನ ದೇವನು ವಾಸಿಸುವ ಸ್ಥಳವಾಗಿದೆ.ಲಕ್ಷಗಟ್ಟಲೆ ಭೂಮಿಯನ್ನು ಜಲ ಸಮೃದ್ದಿ ಗೊಳಿಸಲು ಇರುವ ಈ ಜಲಾಶಯವು ದೇವ ವಾಸದ ಸ್ಥಳವಾಗಿದೆ. ಪ್ರಸಕ್ತ ಸಂಧರ್ಬದಲ್ಲಿ ಯಾವುದೇ ಪ್ರಧಾನ ಮಂತ್ರಿ ಉದ್ಘಾಟಿ ಸುವುದಾದರೆ ಏನಾಗಬಹುದು ಇತ್ತು ಸ್ಥಿತಿ. ಯಾವುದೇ ಧರ್ಮದಲ್ಲಿ ವಿಶ್ವಾಸ ಇರದ ಪಂಡಿತ್ ನೆಹರು ,ಭಾರತವನ್ನು ಆಳ್ವಿಕೆ ನಡೆಸಬಾರದು ಎಂದು ಧರ್ಮ ಭಾವನೆಯನ್ನು ನಂಬುವ ಬಹುಸಂಖ್ಯಾತ ಭಾರತೀಯರು ತಡೆದರೆ? ಇಲ್ಲ. ಆಳ್ವಿಕೆ ನಡೆಸುವ ವ್ಯಕ್ತಿಯ ಧರ್ಮ ವೋ,ಭಾಷೆಯೂ,ವರ್ಣವೋ,ಜಾತಿಯೂ,ಯಾವುದೇ ಸಂಧರ್ಬದಲ್ಲಿ ಕೂಡಾ ಪ್ರಶ್ನಿಸಲಾಗಿಲ್ಲ. ಭಾರತದ ಈ ಬಹತ್ವವನ್ನು ಎಂದೆಂದಿಗೂ ಪಾಲಿಸುತ್ತಾ ಬಂದಿದೆ. ಇಸ್ಲಾಮಿನ ಪ್ರವಾದಿ ಮೊಹಮ್ಮದ್ ರವರಿಗೆ ಕುರಾನ್ ಆಧಾರಿತ ದೇವ ಸಂದೇಶ ಬಂದಿತ್ತು ತನ್ನ ದೊಡ್ಡಪ್ಪ ಅಬುತಾಲಿಬ್ ರವರನ್ನು ಧರ್ಮಕ್ಕಾಗಿ ಆಹ್ವಾನಿಸಲಾದಾಗ,ನೀವು ಭೋಧನೆ ಮಾತ್ರ ಮಾಡಿ,ನಿಮಗೆ ನಿಮ್ಮವರನ್ನೆ ಬಲವಂತ ಪಡಿಸುವ ಹಕ್ಕುಗಳನ್ನು ನಾವು ನಿಮಗೆ ಪ್ರಧಾನಿಸಲಿಲ್ಲ ಎಂ ದಾಗಿದೆ , ಇಸ್ಲಾಂ ಎಂದೂ ಕೂಡಾ ಬಲವಂತದ ಧರ್ಮವನ್ನು ಉತ್ತೇಜಿಸುವುದು ಇಲ್ಲ. ಅವರವರಿಗೆ ಅವರವರ ಧರ್ಮ ಎಂದು ಇಸ್ಲಾಮ್ ಪ್ರತಿಪಾದಿಸುತ್ತದೆ. ಎಂದು ಹೇಳಿದರು.ಪ್ರಾಸ್ತಾವಿಕ ಭಾಷಣ ಮಾಡಿದ ಸಿ. ಪಿ.ಐ.ಎಂ ಕರ್ನಾಟಕ,ರಾಜ್ಯ ಸಮಿತಿ ಸದಸ್ಯರಾದ ಮುನೀರ್ ಕಾಟಿಪಳ್ಳ ಭಾರತದಲ್ಲಿ ಮುಸ್ಲಿಮರು ಪ್ರಸಕ್ತ ಸನ್ನಿವೇಶದಲ್ಲಿ ಎದುರಿಸುತ್ತಿರುವ ಜ್ವಲಂತ ಸಮಸ್ಯೆ,ಮತ್ತು ಮುಸ್ಲಿಮ್ ಸಮುದಾಯ ಕೋಮು ದ್ವೇಷದ ಗುರಿಯಾಗಿರುವ ಕಾರಣ ಅವರ ಏಕಾಂಗಿತನ, ಭಯ ಸೃಷ್ಟಿ,ದೌರ್ಜನ್ಯ,ಪ್ರಜಾ ವ್ಯವಸ್ಥೆಯ ಸಂಸ್ಥೆಗಳು ವಿಫಲವಾಗುತ್ತಿವೆ. ಈ ಸಂಧರ್ಬದಲ್ಲಿ ಜಾತ್ಯಾತೀತ ಸಿದ್ದಾಂತ ಇರುವ ರಾಜಕೀಯ ಪಕ್ಷಗಳು ಮುಸ್ಲಿಮ್ ಸಮುದಾಯದ ಸಮಸ್ಯೆಗಳ ನಿವಾರಣೆಗೆ ಒಟ್ಟಿಗೆ ನಿಲ್ಲಬೇಕು ಎಂಬ ಕಾರಣಕ್ಕಾಗಿ ಈ ಸಮಾವೇಶ ನಡೆಸಲಾಗಿದೆ,ಎಂದರು.ಮುಖ್ಯ ಅತಿಥಿಗಳಾಗಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕರ್ನಾಟಕ ರಾಜ್ಯಾಧ್ಯಕ್ಷರಾದ ಮಾವಳ್ಳಿ ಶಂಕರ್, ಖ್ಯಾತ ಸಾಹಿತಿಗಳಾದ, ಸಿ. ಪೀ. ಐ.ಎಂ ಕಾರ್ಯದರ್ಶಿ ಆದ ಯು.ಬಸವರಾಜು, ಕೆ.ಯಾದವ ಶೆಟ್ಟಿ, ಸಮಾವೇಶದ ಅಧ್ಯಕ್ಷರಾಗಿ ,ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸೈಯದ್ ಮುಜೀಬ್,ಬೆಂಗಳೂರು ರಾಜಕೀಯ ವಿಶ್ಲೇಷಕರು ಆದ, ಡಾ.ಕೆ. ಪ್ರಕಾಶ್,ಶ್ರೀಮತಿ ವರಲಕ್ಷ್ಮಿ, ಗುಲ್ಬರ್ಗಾ ಬರಹಗಾರರು ಮತ್ತು ಹೋರಾಟಗಾರರಾದ ಕೆ. ನೀಲಾ, ಎಂ. ಪಿ.ಮುನಿ ವೆಂಕಟಪ್ಪ, ಅಕ್ರಮ್ ಪಾಷಾ ಬಾಗೇಪಲ್ಲಿ, ಶೇಖ್ ಶಾ ಕಾದ್ರಿ ಸಿಂಧನೂರು, ಜೈನುಳ್ ಆಯ್ಯುಬ್ ಖಾನ್, ಕಾಸಿಮ್ ಸರ್ದಾರ್ ರಾಮದುರ್ಗ ಮುಂತಾದವರ ಭಾಗವಹಿ ಸುವಿಕೆಯೊಂದಿಂಗೆ ಸಮಾವೇಶಕ್ಕೆ ಚಾಲನೆ ನೀಡಲಾಯಿತು.ಅಪರಾಹ್ನದ ಗೋಷ್ಠಿಯಲ್ಲಿ ಹಂಪಿ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ರಾದ ಚಂದ್ರಪ್ಪ ಪೂಜಾರಿ ಮತ್ತು ಡಾ. ಕೆ. ಪ್ರಕಾಶ್ ರವರು ಕರ್ಣಾಟಕ ಕೋಮುವಾದದ ಪ್ರಯೋಗ ಶಾಲೆ ಎಂಬ ವಿಷಯ ಬಗ್ಗೆ ಮತ್ತು ಎರಡನೇ ಗೋಷ್ಠಿಯಲ್ಲಿ ಬೀ.ಎಂ.ಹನೀಫ್ ರವರು ಭಾರತದಲ್ಲಿ ಮುಸ್ಲೀಮರ ಸ್ಥಿತಿ ಬಗ್ಗೆ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಹೋರಾಟಗಾರ್ತಿ ಕೆ. ನೀಲಾ ರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫ್ಯಾಸಿಸ್ಟ್ ಷಡ್ಯಂತ್ರದ ವ್ಯಾಪಾರ ನಿರ್ಭಂದದ ಕಲ್ಲಂಗಡಿ ಹಣ್ಣು ದ್ವಂಸ ಸಂತ್ರಸ್ತ ಧಾರವಾಡದ ನಬೀ ಸಾಬ್ ಗೋಷ್ಠಿಯಲ್ಲಿ ಅತಿಥಿಗಳಾಗಿ ಉಪಸ್ತಿತರಿದ್ದರು.