ಮಂಗಳೂರಿನ ಸಾಮುದಾಯಿಕ ಸಂಘಟನೆಯಾದ ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ ವತಿಯಿಂದ ಇಂದು ಮಂಗಳೂರಿನ ಬೋಲಾರದ ಶಾದಿ ಮಹಲ್ ಹಾಲ್ ನಲ್ಲಿ ಕರ್ನಾಟಕ ಸರಕಾರದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್ ರವರನ್ನು ಅಭಿನಂದಿಸಿ ಗೌರವಿಸಲಾಯಿತು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು,ಮುತ್ಸದ್ದಿ ರಾಜಕಾರಣಿ,ಭಾರತದಲ್ಲಿ ಜಾತ್ಯತೀತ ನಿಲುವು, ಸಾಂವಿಧಾನಿಕ ಮೌಲ್ಯಗಳ ರಕ್ಷಣೆ,ಬಡವರ,ಶೋಷಿತರ ಮತ್ತು ಅಲ್ಪ ಸಂಖ್ಯಾತ ವರ್ಗದ ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆಯ ಬಗ್ಗೆ ನಿರಂತರ ಪ್ರಸ್ತಾಪನೆ, ಹಕ್ಕು ಉಲ್ಲಂಘನೆ ಬಗ್ಗೆ ಮುಕ್ತವಾಗಿ ದ್ವನಿ ಎತ್ತುವ ಓರ್ವ ಪಕ್ಷ ನಿಷ್ಠೆ ಕಾಂಗ್ರೆಸ್ಸಿಗರು ಆದ ಹರಿಪ್ರಸಾದ್ ರವರಿಗೆ ಇಂದು ಮಂಗಳೂರಿನಲ್ಲಿ , ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ. ಎಸ್. ಮೊಹಮ್ಮದ್ ಮಸೂದ್ ನೇತೃತ್ವದಲ್ಲಿ,ಸಂಸ್ಥೆಯ ಇತರ ಪದಾಧಿಕಾರಿಗಳು,ಸದಸ್ಯರು ಮತ್ತು ಸಾರ್ವಜನಿಕರ ಸಮಕ್ಷಮ ಶಾಲು ಸಮರ್ಪಿಸಿ,ಫಲಕ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಕರ್ನಾಟಕ ಸರಕಾರ ವಿರೋಧ ಪಕ್ಷ ಉಪ ನಾಯಕರಾದ ಶ್ರೀ ಯು.ಟಿ. ಖಾದರ್ ರವರು ಮತ್ತು ಮಾಜಿ ಶಾಸಕರಾದ ಶ್ರೀ ಮೊಯಿದಿನ್ ಭಾವ ರವರು ಅತಿಥಿಗಳಾಗಿ ಭಾಗವಹಿಸಿದ್ದರು.
ಮೂಲತ ದ.ಕ.ಜಿಲ್ಲೆಯವರಾದ ಹರಿಪ್ರಸಾದ್ ರವರು ಮಾತನಾಡುತ್ತಾ ಜಿಲ್ಲೆಯ ಅಲ್ಪ ಸಂಖ್ಯಾತರು ಸೇರಿದಂತೆ ಇತರ ಸಮುದಾಯದ ಜನರು ತನ್ನಲ್ಲಿ ಇಟ್ಟ ಸ್ನೇಹ ಪ್ರೀತಿ ಗಳನ್ನು ಮೆರೆಯಲು ಸಾಧ್ಯವಿಲ್ಲ, ಉಳ್ಳಾಲ ಮೂಲದ ಮಾತ್ರ್ ಸಂಭಂದ ವಿರುವ ತನಗೆ ಒಂದು ವೇಳೆ ಹೋರಾಟ ಮನೋ ಸ್ಥೈರ್ಯ ಸೃಷ್ಟಿಯಾಗಿದ್ದು ಆದರೆ ಅದು ರಾಣಿ ಅಬ್ಬಕ್ಕನ ಹುಟ್ಟಿದ ಮಣ್ಣಿನ ಗುಣ ಮತ್ತು ಈ ನಾಡಿನ ಜನರೊಂದಿಗೆ ಇರುವ ಅನೋನ್ಯತೆಯ ಗುಣ ಎಂದು ಹೇಳಿದರು. ಇಂದು ಸಂಘ ಪರಿವಾರ ಕನಸು ಕಾಣುತ್ತಾ ಇದೆ, ಈ ದೇಶದಲ್ಲೇ ದ್ವೇಷ ಮತ್ತು ಭಯದ ಮೂಲಕ ಇಲ್ಲಿನ ಅಲ್ಪ ಸಂಖ್ಯಾತರನ್ನು ಹಿಂದುಳಿದ , ದಲಿತ ,ಬುಡಕಟ್ಟು ಜನರನ್ನು ಗುಲಾಮರನ್ನಾಗಿ ಮಾಡಬಹುದು ಎಂದು, ಆದರೆ ಈ ದೇಶದಲ್ಲಿ ಜಾತ್ಯಾತೀತ ರಕ್ತ ಹೊಂದಿದ ಅದೆಷ್ಟೋ ನಾಯಕರು ಮತ್ತು ಅವರ ಸಂತತಿ ಅಸ್ತಿತ್ವದಲ್ಲಿ ಇರುವವರೆಗೆ ಆರ್.ಏಸ್.ಏಸ್
ಅಜೆಂಡಾ ಜಾರಿಯಾಗಲು ಬಿಡುವುದಿಲ್ಲ ಎಂದು ಹೇಳಿದರು. ಈ ದೇಶದಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷ ತನ್ನ ಪಕ್ಷವನ್ನು ನಂಬಿದ ಜನರಿಗೆ, ಅದರ ವ್ಯತಸ್ತ ಹಲವು ನಾಯಕರ ಅವಧಿಯಲ್ಲಿ ಅನ್ಯಾಯವನ್ನು ಸಹಿಸಬೇಕಾಗಿ ಬಂದದ್ದನ್ನು ಒಪ್ಪಿ ಕೊಳ್ಳ ಬೇಕಾಗುತ್ತದೆ. ಆದರೂ ಪಕ್ಷದ ನಿಯಮ ಅಲ್ಪ ಸಂಖ್ಯಾತ ಜನರ ಪರವಾಗಿ ದುಡಿಯುವ ನಿಟ್ಟಿನಲ್ಲಿ ಸಾಗಬೇಕಾಗುತ್ತದೆ. ರಾಜಕೀಯದಲ್ಲಿ ಮತಗಳ, ಗಳಿಕೆ ,ಅಧಿಕಾರ ಏರು ಪೇರು ಆದರೂ ಕೂಡ ತನ್ನ ಪಕ್ಷವನ್ನು ನಂಬಿದವರ ಪರ ನಿಲ್ಲುವ ಪ್ರತಿಜ್ಞೆ ಯನ್ನು ನಾನು ಖಂಡಿತ ತಳೆದಿದ್ದೇನೆ ಎಂದು ಹೇಳಿದರು.
ಇಂದು ಹಿಜಾಬ್, ಅಜಾನ್,ಜಿಹಾದ್ ವಿಷಯದಲ್ಲಿ ಬೀದಿ ಪುಂಡರು ಗಲಭೆ ಸೃಷ್ಟಿಸುತ್ತಿದ್ದಾರೆ. ಇಂತವರ ಕೈಯಿಂದ ಪ್ರಜಾ ಪ್ರಭುತ್ವದ ದೃಢ ನಿಲುವುಗಳ ಮೂಲಕ ಅಧಿಕಾರವನ್ನು ನಾವು ಹಿಂಪಡೆಯಬೇಕು ಎಂದರು. ಯಾವುದೇ ಬೆಲೆ ತೆತ್ತಾದರೂ ಸಂವಿಧಾನ,ಜಾತ್ಯಾತೀತತೆ,ಮತ್ತು ಸಾಮರಸ್ಯತೆ ಯನ್ನು ಸಂರಕ್ಷಿಸುವ ಕಾರ್ಯ ನಮ್ಮಿಂದ ಆಗಬೇಕಿದೆ.ಅದಕ್ಕೆ ಅಲ್ಪ ಸಂಖ್ಯಾತ ವರ್ಗದ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಬೇಕಿದೆ ಎಂದರು.
ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಕೆ. ಎಸ್.ಮೊಹಮ್ಮದ್ ಮಸೂದ್,ಕರ್ನಾಟಕ ಸರಕಾರದ ವಿರೋಧ ಪಕ್ಷ ಉಪ ನಾಯಕರಾದ ಶ್ರೀ ಯು.ಟಿ.ಖಾದರ್, ಮಾಜಿ ಶಾಸಕರಾದ ಮೊಯಿದಿನ್ ಬಾವ, ಸಂಸ್ಥೆಯ ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್,ಪ್ರಧಾನ ಕಾರ್ಯದರ್ಶಿಯಾದ ಹಾಜಿ ಮೊಹಮ್ಮದ್ ಹನೀಫ್,ಉಪಾಧ್ಯಕ್ಷರಾದ ಪುತ್ತು ಬಾವ ಹಾಜಿ, ಕೆ.ಅಶ್ರಫ್, ಸಿ.ಎಂ.ಮುಸ್ತಾಫಾ, ಬೀ. ಎಚ್ ಖಾದರ್,ಸಹ ಕಾರ್ಯದರ್ಶಿಗಳಾದ ನೂರುದ್ದೀನ್ ಸಾಲ್ಮರ, ಸದಸ್ಯರಾದ ಮೊಯಿದಿನ್ ಮೋನು, ಅಹ್ಮದ್ ಬಜಾಲ್, ನಾಸಿರ್ ಲಕ್ಕಿ ಸ್ಟಾರ್, ಮನಪಾ ಮಾಜಿ ಸಚೆತಕರಾದ ಶಶಿಧರ ಹೆಗ್ದೆ,ನಗರ
ಪಾಲಿಕೆ ಕಾರ್ಪೊರೇಟರ್ ಅಬ್ದುಲ್ ರವೂಫ್ ,ಕಾರ್ಪೊರೇಟರ್ ಅಶ್ರಫ್, ಸಂಶುದ್ದೀನ್ ಏಚ್. ಬೀ.ಟಿ , ಮೊಹಮದ್ ಕುಂಜತ್ ಬೈಲ್, ಸ್ಟೀಲ್ ಸೆಂಟರ್ ಮೂಸಾ ಮೊಯಿದಿನ್,ಅಬ್ದುಲ್ ಜಲೀಲ್ ಕೃಷ್ಣಾಪುರ, ಬಶೀರ್ ಬೈಕಂಪಾಡಿ,ಅಶ್ರಫ್ ಬದ್ರಿಯಾ,ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಅಧ್ಯಕ್ಷರಾದ ಸಾಹುಲ್ ಹಮೀದ್,ಮೊಹಮ್ಮದ್ ಬಪ್ಪಲಿಕೆ,ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಮೊಹಮ್ಮದ್ ಮೋನು,ಪ್ರತಿಭಾ ಕುಳಾಯಿ, ಸಿ.ಎಂ.ಹನೀಫ್, ಬೀ. ಎಸ್.ಇಮ್ತಿಯಾಜ್,ಷರೀಫ್ ದೇರಳಕಟ್ಟೆ, ಇಬ್ರಾಹಿಂ ಕೊಣಾಜೆ,ಸೋಷಿಯಲ್ ಫಾರೂಕ್,ಮಾಜಿ ಕಾರ್ಪೊರೇಟ ರ್ ಅಬೂಬಕ್ಕರ್ ಕುದ್ರೋಳಿ,ಸದಸ್ಯರಾದ ಡಿ.ಎಂ. ಅಸ್ಲಂ ಮುಂತಾದವರು ಉಪಸ್ಥಿತರಿದ್ದರು.
ಸಂಸ್ಥೆಯ ವತಿಯಿಂದ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಸಮವಸ್ತ್ರ ವಿತರಣೆ ಮಾಡಲಾಯಿತು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಎಸ್. ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಗೈದ ವಿಧ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕೊನೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಕೆ.ಅಶ್ರಫ್ ರವರು ಅತಿಥಿಗಳಿಗೆ ಧನ್ಯವಾದ ಸಮರ್ಪಿಸಿದರು.
ಇನ್ನಷ್ಟು ವರದಿಗಳು
ವಖ್ಫ್ ವಿವಾದ: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ರನ್ನು ಬೇಟಿಯಾದ ಮುಸ್ಲಿಮ್ ವಾಯ್ಸ್ ಫಾರ್ ಜಸ್ಟಿಸ್ ನಿಯೋಗ
ಬ್ಯಾರಿ ಜನಾಂಗದವರು ಒಗ್ಗಟ್ಟಾಗಿ ಸವಲತ್ತುಗಳನ್ನು ಅಪೇಕ್ಷಿಸಬೇಕಿದೆ: ಸಮಾಲೋಚನಾ ಸಭೆಯಲ್ಲಿ ಸ್ಪೀಕರ್ ಯು.ಟಿ.ಕಾದರ್.
ಡ್ಯಾಮೇಜ್ ಪೊಲಿಟಿಕ್ಸ್ ನಿಂದ ಮಾತ್ರ ಮುಸ್ಲಿಮ್ ಪ್ರಾತಿನಿಧ್ಯ ಸಾಧ್ಯ: ಮು. ವಾಯ್ಸ್ ಆನ್ ಲೈನ್ ಸಂವಾದದಲ್ಲಿ ರಿಯಾಝ್ ಪರಂಗಿಪೇಟೆ ಅಭಿಮತ.