June 22, 2024

Vokkuta News

kannada news portal

ಆರ್ಯ ಮುತಾಲಿಕ್ ಸಂತತಿಯಿಂದ, ಹಿಂ.ವರ್ಗದ ಶರಣ್ ನ್ನು ಬಳಸಿ ಮಳಲಿ ವಿವಾದ ಸೃಷ್ಟಿ : ಕೆ.ಅಶ್ರಫ್.

ಹಿಂದುಳಿದ ವರ್ಗದ ಶರಣ್ ತನ್ನ ಪರಿವಾರದಲ್ಲಿ ಆರಾಧನಾ ಹಕ್ಕಿನಿಂದ ವಂಚಿತನಾಗಿದ್ದಾನೆ.

ಮಳಲಿಯ ಅತಿ ಪುರಾತನ ಮಸೀದಿಯ ವಿಸ್ತೃತ ಕಟ್ಟಡದ ನವೀಕರಣ ಕಾಮಗಾರಿ ಆರಂಭಿಸುವಾಗ,ಪುರಾತನ ರಚನೆಯ ವಾಸ್ತು ಶಿಲ್ಪವನ್ನು ವೀಕ್ಷಿಸಿ,ದೇವಸ್ಥಾನವೆಂದು ರದ್ದಾಂತವೆಬ್ಬಿಸಿದ, ಸಂಘೀ, ಕೃಪಾ, ನಿಖೇತನಿಗಳಿಗೆ, ತಮ್ಮ ಮುಸ್ಲಿಮರ ಮೇಲಿನ ವಿದ್ವೇಶವನ್ನು ಕರಾವಳಿ ಜಿಲ್ಲೆಗಳಲ್ಲಿ ಮತ್ತಷ್ಟು ಹಬ್ಬಿಸಿ ಶತಾಯ ಗತಾಯ ಒಂದು ಬೃಹತ್ ಕೋಮು ಗಲಭೆಯನ್ನು ಸೃಷ್ಟಿಸಲು ಸಂಘ ಪರಿವಾರ ಪ್ರಯತ್ನ ನಡೆಸುತ್ತಿದೆ.

ಆ ಮೂಲಕ ಇಲ್ಲಿನ ಹಿಂದುಳಿದ ವರ್ಗ,ದಲಿತರು,ಪರಿಶಿಷ್ಟರು,ಬುಡಕಟ್ಟು ಜನರು,ಮುಸ್ಲೀಮರ ಮದ್ಯೆ ಭಿನ್ನತೆ ಸೃಷ್ಟಿಸುವುದಾಗಿದೆ.
ಈಗಾಗಲೇ ಬ್ರಹ್ಮಶ್ರೀ ನಾರಾಯಣ ಗುರು ಸ್ತಬ್ಧ ಚಿತ್ರ, ಪಠ್ಯ ಇತ್ಯಾದಿ ವಿವಾದದಲ್ಲಿ ಸಿಲುಕಿ ಹಾಕಿಕೊಂಡು ದ.ಕ.ಜಿಲ್ಲೆಯ ಸುಮಾರು ನಾಲ್ಕು ಲಕ್ಷ ಬಿಲ್ಲವರ ದ್ವೇಷವನ್ನು ಕಟ್ಟಿಕೊಂಡ ಬೀಜೆಪಿ ಸಂಘಿಗಳಿಗೆ, ಸ್ವಘೋಷಿತ ಹಿಂದೂ ನಾಯಕ ಎಂದು ಕರೆಸಿ ಕೊಳ್ಳುತ್ತಿರುವ ಶರಣ್ ಪಂಪ್ ವೆಲ್ ನನ್ನು ಮಳಲಿ ಮಸೀದಿ ವಿವಾದದಲ್ಲಿ ಮುಂದೆ ಹಾಕಿ, ಪ್ರಚೋದಿತ ಹೇಳಿಕೆ ಕೊಡಿಸಿ ಗಲಭೆಗೆ ಪ್ರಯತ್ನಿಸಲಾಗುತ್ತಿದೆ.

ಈಗಾಗಲೇ ಹಿಂದುಳಿದ ವರ್ಗದ ಜನರಿಗೆ, ಈ ಸಂಘಿಗಳು ,ಅವರ ಆರಾಧನಾ ಹಕ್ಕುಗಳನ್ನು ಕಸಿದು,ಅವರನ್ನು ಗುಲಾಮ ಸ್ಥಿತಿಗೆ ತಂದು, ಕೈಯಲ್ಲಿ ತ್ರಿಶೂಲ, ಬಂದೂಕು ಕೊಟ್ಟು ಸಮಾಜ ಘಾತುಕ ಶಕ್ತಿಯಾಗಿ ಮಾರ್ಪಡಿಸಲು ಪ್ರಯತ್ನ ಸಿರುತ್ತಾರೆ.

ಆರ್ಯ ಸಂತತಿಯ ಮುತಾಲಿಕ ಈಗಾಗಲೇ ಉತ್ತರ ಕರ್ನಾಟಕದಲ್ಲಿ ಜನರ ಜೀವನಕ್ಕೆ ಕೊಳ್ಳಿ ಇಡಲು ಪ್ರಯತ್ನಿಸಿ ಗಲಭೆ ನಡೆಸಲು ವಿಫಲವಾಗಿ ದ.ಕ.ಜಿಲ್ಲೆಗೆ ವಕ್ಕರಿಸಿ ಈ ಹಿಂದುಳಿದ ವರ್ಗದ, ವಿಶ್ವ ಹಿಂದೂ ಪರಿಷತ್ ನಿಯಂತ್ರಿತ ಶರಣ್ ಪಂಪ್ ವೆಲ್ ನನ್ನು ಇಲ್ಲಿನ ಮುಸ್ಲಿಮರ ವಿರುದ್ದ ಇಳಿಸಿದ್ದಾನೆ.

ಹಿಂದುಳಿದ ವರ್ಗದ ಶರಣ್ ಏನಾದರೂ ಅಂದು ಮಳಲಿ ಮಸೀದಿಗೆ ಪರಿಶೀಲನೆಗೆ ಪ್ರವೇಶಿಸಿದಂತೆ ಯಾವುದಾದರೂ ಆರ್ಯರ ಧಾರ್ಮಿಕ ಕೇಂದ್ರ ಪ್ರವೇಶಿಸಿದ್ದರೆ ಅಂದೇ ಅಂತಹ ಧಾರ್ಮಿಕ ಕೇಂದ್ರದಿಂದ ಇದೇ ಶರಣನನ್ನು ಬಹಿಷ್ಕಾರ ಮಾಡುತ್ತಿದ್ದರು. ಇದು ಸಂಘೀ ಮನಸ್ಥಿತಿ.

ಬಹುಶ ಹಿಂದುಳಿದ ವರ್ಗದ ಶರಣ್ ತನ್ನ ಪರಿವಾರದಲ್ಲಿ ಆರಾಧನಾ ಹಕ್ಕಿನಿಂದ ವಂಚಿತನಾಗಿದ್ದಾನೆ. ಆದುದರಿಂದಲೇ ಇತರ ಧರ್ಮದ ಆರಾಧನಾ ಕೇಂದ್ರ ಗಳತ್ತ ಆಕರ್ಷಿತನಾಗಿ ಈ ರೀತಿಯ ವಿವಾದ ಸೃಷ್ಟಿಸುತ್ತಿದ್ದಾನೆ.ಶರಣ್ ಸಂಘೀಗಳ ಆಳು ಆಗಿರಬಹುದು,ಆದರೆ ಇತರ ಧರ್ಮದ ಆರಾಧನಾಲಯದ ವಿಷಯದಲ್ಲಿ ಕಾನೂನು ಪ್ರಕ್ರಿಯೆಯಿಂದ ಹೆಚ್ಚಿನ ಕೃತ್ಯ ನಡೆಸಿದರೆ, ಶರಣ್ ಅಂತಹ ಪ್ರಯತ್ನಕ್ಕೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ.

ಮುಸ್ಲಿಮ್ ಧಾರ್ಮಿಕ ಸಂಕೇತಗಳನ್ನು,ಭೀಕರವಾಗಿ ಬಿಂಬಿಸಿ,ಇತರರಲ್ಲಿ ಭಯ ಹುಟ್ಟಿಸಿ,ಹಿಂದೂ ಧರ್ಮಕ್ಕೆ ಅಪಾಯವಿದೆ,ಇತ್ಯಾದಿಯಾಗಿ ಸರ್ವ ಪ್ರಯತ್ನದ ಮೂಲಕ ಕರಾವಳಿಯಲ್ಲಿ ಮುಸ್ಲಿಮ್ ವಿರೋಧಿ ಗಲಭೆ ನಡೆಸಲು ವಿಫಲವಾದಾಗ,ಇನ್ನೂ ಯಾವುದೇ ಮುಸ್ಲಿಮ್ ಧಾರ್ಮಿಕ ಸಂಕೇತಗಳು,ಲಭ್ಯವಿಲ್ಲದ ಕಾರಣ ಮಳಲಿ ಮಸೀದಿಯ ವಾಸ್ತುಶಿಲ್ಪಕ್ಕೆ ಹಸ್ತ ಕ್ಷೇಪ ನಡೆಸಿ, ಅದು ಇತರ ಧರ್ಮದ ಧಾರ್ಮಿಕ ಕೇಂದ್ರ ಎಂಬಿತ್ಯಾದಿಯಾಗಿ ಇಲ್ಲದ ಸಮಸ್ಯೆಯನ್ನು ಹುಟ್ಟು ಹಾಕಿ, ಜಿಲ್ಲೆಯಲ್ಲಿ ತಾಂಬೂಲ ಪ್ರಶ್ನೆ ಎಂಬ ಅವೈಜಾನಿಕ ಪದ್ಧತಿಗಳು ಇತ್ಯಾದಿ ಮೂಲಕ,ಪ್ರದೇಶದ ಶಾಂತಿ ಸುವ್ಯವಸ್ಥೆಯನ್ನು ಹಾನಿ ಗೊಳಿಸಿ ,ಗಲಭೆ ನಡೆಸಿ ಸಾಮಾನ್ಯ ಜನರ ಜೀವ,ಆಸ್ತಿ ಗಳನ್ನು ನಷ್ಟ ಮಾಡಲು ಮುಂದಾದ ದುಷ್ಕರ್ಮಿ ಗಳಾದ ಪ್ರಮೋದ್ ಮುತಾಲಿಕ್ ಮತ್ತು ಶರಣ್ ಪಂಪ್ವೆಲ್ ನನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು.

ದ.ಕ.ಜಿಲ್ಲೆಯ ಜನರ ನೆಮ್ಮದಿಯ ಬಗ್ಗೆ ಮತ್ತು ಪೊಲೀಸು ಪರಿಕಲ್ಪನೆ ಜಿಲ್ಲೆಯಲ್ಲಿ ಜೀವಂತ ಇದೆ ಎಂದಿದ್ದರೆ ಪೊಲೀಸರು ಎಂದು ಹೇಳಿಸಿ ಕೊಳ್ಳುವವರು ತಕ್ಷಣ ಈ ದುಷ್ಕರ್ಮಿಗಳ ವಿರುದ್ದ ಕ್ರಮ ಕೈಗೊಂಡು ಪೊಲೀಸು ಪರಿಕಲ್ಪನೆಯ ಶುದ್ಧತೆಯನ್ನು ಪಾಲಿಸಲಿ.

ಕೆ.ಅಶ್ರಫ್ (ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.