November 22, 2024

Vokkuta News

kannada news portal

ಪ್ರಧಾನಿ ಮೋದಿ ನಾ.ಗುರು ಸ್ಥಾಪಿತ ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡಲಿ: ಕೆ.ಅಶ್ರಫ್.

ರಾಜ್ಯ ಸರಕಾರ ಈ ಹಿಂದೆ ಶ್ರೀ ನಾರಾಯಣ ಗುರುಸ್ವಾಮಿ ಯವರ ಜೀವನ ಚರಿತ್ರೆ ಮತ್ತು ದಾರ್ಶನಿಕತೆ ಪ್ರತಿಪಾದಿಸುವ ಪಠ್ಯ ವನ್ನು ತೆರವು ಗೊಳಿಸಲು ಪ್ರಯತ್ನಿಸಿದ ಷಡ್ಯಂತ್ರಕ್ಕೆ ಪ್ರಾಯಶ್ಚಿತ ವಾದರೂ ಆಗಲಿ.

ಪ್ರಧಾನಿ ಮೋದಿಯವರು ಜಿಲ್ಲೆಗೆ ಭೇಟಿ ನೀಡುವ ಪ್ರಮುಖ ಉದ್ದೇಶ ಜಿಲ್ಲೆಯ ನಿರೀಕ್ಷಿತ ರಾಜಕೀಯ ಬೆಳವಣಿಗೆ ಹೊರತು,ಯಾವುದೇ ಅಭಿವೃದ್ಧಿ ಉದ್ದೇಶ ಅಲ್ಲ. ಜಿಲ್ಲೆಯಲ್ಲಿ ನಿರಂತರ ಮತೀಯ ಉದ್ವಿಗ್ನತೆ ಯಿಂದ ಜರ್ಜರಿತ ಗೊಂಡು ಬೃಹತ್ ಉದ್ದಿಮೆಗಳು ನಿಶ್ಶಬ್ದವಾಗಿ ವಲಸೆ ಆರಂಭಿಸಿದ್ದು, ಆರ್ಥಿಕ ಚಟುವಟಿಕೆ ಇತ್ಯಾದಿ ಕುಸಿತವಾಗಿದೆ. ಆಡಳಿತದಲ್ಲಿರುವ ಬಿ.ಜೆ.ಪಿ ಗೆ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ.

ಕರ್ನಾಟಕ ಸರಕಾರ ಈ ಹಿಂದೆ ಶಾಲಾ ವಿಷಯದಿಂದ ದಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪಠ್ಯವನ್ನು ತೆರವು ಗೊಳಿಸಿದ ಕಾರಣಕ್ಕಾಗಿಯೇ ರಾಜ್ಯದ ಜನರ ವಿರೋಧವನ್ನು ಕಟ್ಟಿ ಕೊಳ್ಳಬೇಕಾಯಿತು. ಕಳೆದ ತಿಂಗಳು ಸುಳ್ಯದ ವಿವಿಧ ಹತ್ಯಾ ಪ್ರಕರಣದ ಬೆಳವಣಿಗೆ ಪರಿಣಾಮವಾಗಿ ಜಿಲ್ಲೆಯ ಪರಿಗಣನಾತ್ಮಕ ಸಮುದಾಯ ಮತ್ತು ಪಕ್ಷದ ಕಾರ್ಯಕರ್ತರು ಬೀ. ಜೇ. ಪೀ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲುರವರ ವಿರುದ್ಧನಿಲ್ಲಬೇಕಾಯಿತು. ಪರಿಸ್ಥಿಯನ್ನು ತೇಪೆ ಹಚ್ಚಲು ಪ್ರಧಾನಿ ನರೇಂದ್ರ ಮೋದಿಯನ್ನು ಜಿಲ್ಲೆಗೆ ಆಮಂತ್ರಿಸಿ ಪಕ್ಷಕ್ಕೆ ಆದ ನಷ್ಟವನ್ನು ಸರಿ ದೂಗಿಸುವ ಪ್ರಯತ್ನದ ಭಾಗವೇ ಮಂಗಳೂರಿಗೆ ಮೋದಿ ಆಗಮನದ ವ್ಯವಸ್ಥೆ.

ಪ್ರಧಾನ ಮಂತ್ರಿ ಮೋದಿಯವರು ಜಿಲ್ಲೆಗೆ ಆಗಮಿಸುವುದರಲ್ಲಿ ಸರ್ವರಿಗೂ ಸಹಮತ ಇದೆ.ಆದರೆ
ಅಂದು ನರೇಂದ್ರ ಮೋದಿಯವರು ಜಿಲ್ಲೆಗೆ ಗುಪ್ತವಾಗಿ ಆಗಮಿಸಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆಸದೇ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಹೋಗಿದ್ದು ಜನರು ಇನ್ನೂ ಮರೆತಿಲ್ಲ.

ಮೋದಿಯವರು ಈ ಬಾರಿ ಮಂಗಳೂರಿಗೆ ಭೇಟಿ ನೀಡುವ ಈ ಸಂದರ್ಭದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಸ್ಥಾಪಿತ ಕುದ್ರೋಳಿ ಕ್ಷೇತ್ರಕ್ಕೇ ಭೇಟಿ ನೀಡಲಿ.
ರಾಜ್ಯ ಸರಕಾರ ಈ ಹಿಂದೆ ಶ್ರೀ ನಾರಾಯಣ ಗುರುಸ್ವಾಮಿ ಯವರ ಜೀವನ ಚರಿತ್ರೆ ಮತ್ತು ದಾರ್ಶನಿಕತೆ ಪ್ರತಿಪಾದಿಸುವ ಪಠ್ಯವನ್ನು ತೆರವು ಗೊಳಿಸಲು ಪ್ರಯತ್ನಿಸಿದ ಷಡ್ಯಂತ್ರಕ್ಕೆ ಪ್ರಾಯಶ್ಚಿತ ವಾದರೂ ಆಗಲಿ.

ಜಿಲ್ಲೆಯ ಸಂಸದರು,ಉಸ್ತುವಾರಿ ಸಚಿವರು,ನಾಮ ನಿರ್ದೇಶಿತ ರಾಜ್ಯ ಸಭಾ ಸಂಸದರು,ಮುಖ್ಯ ಮಂತ್ರಿಗಳು, ಶಾಸಕರು,ಪಕ್ಷದ ಮುಖಂಡರು ಸರ್ವರೂ ಪ್ರಧಾನಿಯವರ ಮನವೊಲಿಸಿ ಕುದ್ರೋಳಿ ಕ್ಷೇತ್ರಕ್ಕೆ ಪ್ರಧಾನಿಯವರನ್ನು ಭೇಟಿ ಮಾಡುವ. ಪ್ರಯತ್ನ ಮಾಡಲಿ. ರಾಜ್ಯದ ಜನತೆ ನಿರೀಕ್ಷಿಸುತ್ತಿದ್ದಾರೆ.

ಕೆ.ಅಶ್ರಫ್.

ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.