November 21, 2024

Vokkuta News

kannada news portal

ದ್ವಜ ಸಗಟು ವಿತರಣೆಯಲ್ಲಿ, ಬಳಕೆ ಹೇಗೆಂದು ಸರ್ವರಿಗೂ ಸರಕಾರ ತರಬೇತಿ ನೀಡುವ ಅಗತ್ಯವಿದೆ: ಕೆ.ಅಶ್ರಫ್,ಮುಸ್ಲಿಮ್ ಒಕ್ಕೂಟ.

ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಸಂಧರ್ಭದಲ್ಲಿ ಜನರಿಗೆ ದೇಶ ಪ್ರೇಮದ ಪಾಠ ಹಿಂದೆಂದಿಗಿಂತಲೂ ಪ್ರಸ್ತುತ ಹೆಚ್ಚು ಅಗತ್ಯವಿದೆ. ಹಲವರಿಗೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳ ನಂತರ ಈ ದೇಶದ ತ್ರಿವರ್ಣ ಧ್ವಜದ ಮೇಲೆ ಇನ್ನಿಲ್ಲದ ಪ್ರೀತಿ ಹುಕ್ಕಿ ಹರಿಯಲು ಆರಂಭಿಸಿದೆ.

ಇದು ಅತ್ಯಂತ ಉತ್ತಮ ಬೆಳವಣಿಗೆ.ಆದರೆ ಭಾರತದ ರಾಷ್ಟ್ರ ದ್ವಜಕ್ಕೆ ಅದರದೇ ಆದ ಮಹತ್ವ ಗೌರವ ಇದೆ. ರಾಷ್ಟ್ರದ್ವಜವಾದ ತ್ರಿವರ್ಣ ದ್ವಜವನ್ನು ಭಾರತ ದೇಶದ ಅಭಿಮಾನದಿಂದ ಸಮರ್ಪಕ ರೀತಿಯಲ್ಲಿ ಬಳಕೆ ಮಾಡಬೇಕು.ತಪ್ಪಿದಲ್ಲಿ ರಾಷ್ಟ್ರ ದೇಶಕ್ಕೆ ನೀಡುವ ಅಗೌರವ ವಾಗುತ್ತದೆ.

ಈ ವರೆಗೆ ಹಲವು ದ್ವಜಗಳನ್ನು ಹಿಡಿದು ಪುಂಡತನ ಮೆರೆದವರ ದುಷ್ಟ ಹಸ್ತದಲ್ಲಿ ದೇಶದ ದ್ವಜವು ಅಗೌರವ ಗೊಳ್ಳಬಾರದು. ಆದುದರಿಂದ ರಾಷ್ಟ್ರ ದ್ವಜ ಉಪಯೋಗದ ಬಗ್ಗೆ ಅಂತವರಿಗೆ ತರಬೇತಿ ನೀಡುವ ಕಾರ್ಯವನ್ನು ಸರಕಾರ ಮಾಡಲಿ.

ರಾಷ್ಟ್ರ ದ್ವಜವನ್ನು ಸಗಟು ನೆಲೆಯಲ್ಲಿ ವಿತರಿಸುವಾಗ ಜವಾಬ್ದಾರಿತರು ಎಚ್ಚರಿಕೆ ವಹಿಸುವುದು ಸೂಕ್ತ. ರಾಷ್ಟ್ರ ದೇಶಕ್ಕೆ ಅವಮಾನ ಗೈಯುವ ವಿಷಯದಲ್ಲಿ ಇಲ್ಲಿನ ನೈಜ ದೇಶ ಪ್ರೇಮಿ ಪ್ರಜೆಗಳನ್ನು ವಿನಾ ಕಾರಣ ಗುರಿಯಾಗಿಸುವ ಷಡ್ಯಂತ್ರದ ಅಪಾಯವನ್ನು ಅರಿತು ಕೊಳ್ಳಬೇಕಾಗಿದೆ ಎಂದು ಕೆ. ಅಶ್ರಫ್ ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ರವರು ಪತ್ರಿಕಾ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ.