July 27, 2024

Vokkuta News

kannada news portal

ಸಮಸ್ತ ಕೇರಳ ಸುನ್ನಿ ಮಹಲ್ ಫೆಡರೇಷನ್  ಮಂಗಳೂರು ವಲಯ ಸಮಿತಿ ಅಸ್ತಿತ್ವಕ್ಕೆ

ಅಧ್ಯಕ್ಷರಾಗಿ ಮೌಲಾನಾ ಯು.ಕೆ.ಎ. ಅಝೀಝ್ ದಾರಿಮಿ ಚೊಕ್ಕಬೆಟ್ಟು ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಮ್ ಕೊಣಾಜೆ ಆಯ್ಕೆ.

ಮಂಗಳೂರು: ಮಸೀದಿಗಳನ್ನು ಕೇಂದ್ರೀಕರಿಸಿ ಮುಸ್ಲಿಮರ ಧಾರ್ಮಿಕ,ಸಾಮಾಜಿಕ.ಶೈಕ್ಷಣಿಕ ಅಭಿವೃದ್ಧಿಯಲ್ಲಿ ಬಹು ಮುಖ್ಯ ಪಾತ್ರ ವಹಿಸಲು ಅನುಕೂಲವಾಗುವಂತೆ ಮೊಹಲ್ಲಾ ಸಮಿತಿಗಳನ್ನು ಜಿಲ್ಲಾ ಮಟ್ಟದಲ್ಲಿ ರಚಿಸುವ ನಿಟ್ಟಿನಲ್ಲಿ “ಸಮಸ್ತ”ದ ಮಾರ್ಗದರ್ಶನದಂತೆ ಸುನ್ನಿ ಮಹಲ್ ಫೆಡರೇಷನ್ ವಲಯ ಮಟ್ಟದ ಸಮಿತಿಗಳನ್ನು ರಚಿಸಲಾಗುತ್ತಿದ್ದು ,ಮಂಗಳೂರು ವಲಯ ಸಮಿತಿ ರಚನೆಯು ಮಂಗಳೂರಿನ ಕಂಕನಾಡಿಯಲ್ಲಿರುವ ಜಮಿಯ್ಯತುಲ್ ಫಲಾಹ್ ಆಡಿಟೋರಿಯಂ ನಲ್ಲಿಂದು ನಡೆಯಿತು.

ಸುನ್ನಿ ಮಹಲ್ ಫೆಡರೇಷನ್ ನೋಂದಾಣಿಗೊಂಡ ಮೊಹಲ್ಲಾ ಗಳು ಆಯ್ದ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಸೂಚಿಯನ್ನು ಮುಂದಿಟ್ಟು ಮೊಹಲ್ಲಾಗಳಲ್ಲಿ ಕಾರ್ಯರೂಪಕ್ಕೆ ತರುವ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯಬೇಕೆಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮೌಲಾನಾ ಅಝೀಝ್ ದಾರಿಮಿ ಯವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಉಸ್ತಾದ್ ಎಸ್.ಬಿ.ದಾರಿಮಿಯವರು ಮಾತನಾಡಿ ಮೊಹಲ್ಲಾ ಪದ್ಧತಿಯು ಮುಸ್ಲಿಮರ ಅವಿಭಾಜ್ಯ ಧಾರ್ಮಿಕ ಅಂಗವಾಗಿದ್ದು ಇದನ್ನು ಶಿಥಿಲೀಕರಿಸುವ ಯಾವುದೇ ಚಟುವಟಿಕೆಗಳಿಗೆ ಯಾರೂ ಪ್ರೋತ್ಸಾಹ ನೀಡಬಾರದು.ಮೊಹಲ್ಲಾಗಳು ಇಚ್ಚಾ ಶಕ್ತಿ ಪ್ರದರ್ಶಿಸಿದರೆ ಮುಸ್ಲಿಮರ ಬಹುತೇಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ದಾರುನ್ನೂರು ವಿದ್ಯಾಸಂಸ್ಥೆಯ ಸಹಾಯಕ ಪ್ರಾಂಶುಪಾಲರಾದ ಹುಸೈನ್ ರಹ್ಮಾನಿ ವಿಷಯ ಮಂಡನೆ ಗೈದರು.

ಮಂಗಳೂರಿನ ಝೀನತ್ ಬಕ್ಷ್ ಕೇಂದ್ರ ಜುಮ್ಮಾ ಮಸೀದಿ ಖತೀಬರಾದ ಬಹು! ಅಬ್ದುಲ್ ಅಕ್ರಂ ಬಾಖವಿ ಉಸ್ತಾದ್ ರವರ ದುವಾ:ದೊಂದಿಗೆ ಸಭೆಗೆ ಚಾಲನೆ ನೀಡಲಾಯಿತು.
ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಕರ್ನಾಟಕ ಮುಶಾವರ ಕಾರ್ಯದರ್ಶಿ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಮತ್ತು ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಜಿಲ್ಲಾ ಕೋಶಾಧಿಕಾರಿ ಮೆಟ್ರೋ ಸಾಹುಲ್ ಹಮಿದ್ ಹಾಜಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷರಾದ ಐ.ಮೊಯ್ದಿನಬ್ಬ ಹಾಜಿ ದಾರುನ್ನೂರು ವಿದ್ಯಾಸಂಸ್ಥೆಯ ಕೋಶಾಧಿಕಾರಿ ಹನೀಫ್ ಹಾಜಿ ಬಂದರ್ ಹಾಗೂ *ರಫೀಕ್ ಹಾಜಿ ಕೊಡಾಜೆ ಮೊದಲಾದ ಉಲಮಾ- ಉಮರಾ ನೇತಾರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ SMF ಮಂಗಳೂರು ವಲಯ ಸಮಿತಿ ರಿಟೇನಿಂಗ್ ಅಧಿಕಾರಿಯಾಗಿ ನಿಯುಕ್ತಿಗೊಂಡಿರುವ ಉಸ್ತಾದ್ ಎಸ್.ಬಿ.ದಾರಿಮಿ ಯವರು ವಲಯ ಸಮಿತಿ ಸದಸ್ಯರುಗಳ ಪಟ್ಟಿಯನ್ನು ಪರಿಶೀಲಿಸಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಿ ಮುಂದಿನ ಅವಧಿಗೆ ಈ ಕೆಳಕಂಡಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.

1.ಅಧ್ಯಕ್ಷರಾಗಿ : ಯು.ಕೆ.ಎ.ಅಝೀಝ್ ದಾರಿಮಿ ಚೊಕ್ಕಬೆಟ್ಟು
2.ಪ್ರಧಾನ ಕಾರ್ಯದರ್ಶಿಯಾಗಿ: ಇಬ್ರಾಹಿಂ ಕೊಣಾಜೆ
3.ಕೋಶಾಧಿಕಾರಿಯಾಗಿ : ಎನ್.ಕೆ.ಅಬೂಬಕ್ಕರ್ ಕುದ್ರೋಳಿ
4. ಉಪಾಧ್ಯಕ್ಷರುಗಳಾಗಿ:
1.ಹನೀಫ್ ಹಾಜಿ ಬಂದರ್
2.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ
3.ಅಬ್ದುಲ್ ರಹ್ಮಾನ್ ದಾರಿಮಿ ತಬೂಕ್

5.ಜತೆ ಕಾರ್ಯದರ್ಶಿಗಳಾಗಿ:
1.ಮೆಟ್ರೋ ಸಾಹುಲ್ ಹಮೀದ್ ಹಾಜಿ
2.ರಿಯಾಝ್ ಹಾಜಿ ಬಂದರ್
3.ಮುಹಮ್ಮದ್ ಶಾಫಿ ಪಡ್ಡಂದಡ್ಕ

ಜಿಲ್ಲಾ ಕೌನ್ಸಿಲರ್ ಗಳಾಗಿ:
1.ಐ.ಮೊಯ್ದಿನಬ್ಬ ಹಾಜಿ
2.ಇಸ್ಮಾಯಿಲ್ ಹಾಜಿ ಉಳಾಯಿಬೆಟ್ಟು ಮತ್ತು
3.ಮುಹಮ್ಮದ್ ಸ್ವಾಲಿಹ್ ಕಣ್ಣೂರು ಇವರುಗಳನ್ನು ಆಯ್ಕೆ ಮಾಡಲಾಯಿತು.

SMF ಮಂಗಳೂರು ವಲಯ ವೀಕ್ಷಕರಾದ ಅಬ್ದುಲ್ ರಹ್ಮಾನ್ ದಾರಿಮಿ ತಬೂಕ್ ಸ್ವಾಗತಿಸಿದರೆ,
ನೂತನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಕೊಣಾಜೆ ವಂದಿಸಿದರು.