ಮಂಗಳೂರು: ದೇಶದ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿರುವ ಎನ್ ಐಎ ಅಧಿಕಾರಿಗಳು ಇಂದು ನಗರದ ಎಸ್ ಡಿಪಿಐ ಕಚೇರಿಯ ಬಾಗಿಲು ಮುರಿದು ಒಳಗೆ ನುಗ್ಗಿ ಪರಿಶೀಲನೆ ನಡೆಸಿದ್ದಾರೆ.
ಎನ್ ಐ ಎ ಅಧಿಕಾರಿಗಳು ಎಸ್ ಡಿ ಪಿ ಐ ಕಚೇರಿಯ ಬೀಗವನ್ನು ಬ್ಲೇಡ್ ನಿಂದ ಕಟ್ ಮಾಡಿ ಕಚೇರಿಯ ಶಟರ್ ತೆರೆದಿದ್ದಾರೆ. ಇದಲ್ಲದೇ ಅಧಿಕಾರಿಗಳು ಒಳಭಾಗದ ಬಾಗಿಲಿನ ನ ಗಾಜನ್ನು ಪುಡಿ ಮಾಡಿದ್ದಾರೆ. ಮಂಗಳೂರಿನ ಕಚೇರಿಯೊಳಗೆ ನುಗ್ಗಿದ ಎನ್ ಐಎ ಅಧಿಕಾರಿಗಳು ಅಲ್ಲಿ ಕೆಲವು ಮಹತ್ವದ ದಾಖಲೆಗಳು ಕಂಪ್ಯೂಟರ್ ಸಿಪಿಯುನ ಹಾರ್ಡ್ ಡಿಸ್ಕ್ ಅನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಎಸ್ ಡಿಪಿಐ ರಾಜ್ಯ ಮುಖಂಡರೊಬ್ಬರು ಮಾತನಾಡಿ, ದಾಳಿ ಮಾಡುವ ಸಂದರ್ಭದಲ್ಲಿ ಕಚೇರಿಯಲ್ಲಿ ಸಿಬ್ಬಂದಿಯಿದ್ದ. ಆತ ಎನ್ ಐಎ ಅಧಿಕಾರಿಗಳ ಬಳಿ ಪ್ರಶ್ನಿಸುವ ಮೊದಲೇ ಕಚೇರಿಯ ಬೀಗವನ್ನು ಒಡೆದು ನುಗ್ಗಿದ್ದಾರೆ. ಒಂದು ರೀತಿಯ ಅಕ್ರಮ ಪ್ರವೇಶ ಮಾಡಿದ್ದಾರೆ. ಈ ರೀತಿಯ ಘಟನೆಯನ್ನು ಎಸ್ ಡಿಪಿಐ ಖಂಡಿಸುತ್ತದೆ ಎಂದರು.
ಇನ್ನಷ್ಟು ವರದಿಗಳು
ವಕ್ಫ್ ಮಂ.ಸಮಿತಿಯ ‘ಖಾಸಗಿ’ ಆಸ್ತಿ ಘೋಷಿಸುವ ನಿರ್ವಾಹಕರ ಆದೇಶ ಹಿಂಪಡೆಯುವಿಕೆ ಅಸಾಧ್ಯ: ಹೈಕೋರ್ಟ್
ಕರ್ನಾಟಕ ಸಿಎಂ ಕಚೇರಿ: ಮುಸ್ಲಿಂ ಮೀಸಲಾತಿ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ.
ಶ್ರದ್ಧಾ ಕೇಂದ್ರಗಳು ವಕ್ಫ್ ಆಸ್ತಿಯಾಗಲಿವೆ ಎಂದು ಬಿಜೆಪಿ ಆರೋಪ, ಹಾವೇರಿಯಲ್ಲಿ ಉದ್ವಿಗ್ನ ಸ್ಥಿತಿ.