October 18, 2024

Vokkuta News

kannada news portal

ಅನಧಿಕೃತ ಟೋಲ್ ತೆರವಿಗಾಗಿ ಶ್ರಮಿಸಿದ ಯು.ಟಿ. ಕಾದರ್ ರವರಿಗೆ ಅಭಿನಂದನೆ:ಕೆ.ಅಶ್ರಫ್.

ಕಳೆದ ಹಲವು ತಿಂಗಳಿಂದ ಟೋಲ್ ರದ್ದತಿಗಾಗಿ ಸಂಘಟನೆಗಳು, ಜನಪ್ರತಿನಿಧಿಗಳು,ಸಾರ್ವಜನಿಕರು ಟೋಲ್ ರದ್ದತಿಗಾಗಿ ಬೇಡಿಕೆ ಮುಂದಿರಿಸಿ,ತೀವ್ರ ಹೋರಾಟದ ಎಚ್ಚರಿಕೆ ನೀಡಲಾಗಿತ್ತು

ರಾಷ್ಟ್ರೀಯ ಹೆದ್ದಾರಿ 66 ಸುರತ್ಕಲ್ ನಲ್ಲಿ ಈ ಹಿಂದೆ ಸ್ಥಾಪನೆಯಾದ ಟೋಲ್ ಪ್ಲಾಝಾವನ್ನು ತೆರವು ಗೊಳಿಸುವ ನಿರ್ಧಾರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಣಯಿಸಿದ್ದು ,ಇತ್ತೀಚೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಪ್ರತಿಭಟನೆಗೆ ಚಾಲನೆ ನೀಡುತ್ತಿದ್ದಂತೆಯೇ,ನಿನ್ನೆ ಕರ್ನಾಟಕದ ಸರಕಾರದ ವಿರೋಧ ಪಕ್ಷದ ಉಪ ನಾಯಕರಾದ ಶ್ರೀ ಯು.ಟಿ.ಖಾದರ್ ರವರು ಅಧಿವೇಶನದ ಶೂನ್ಯ ವೇಳೆಯಲ್ಲಿ ಟೋಲ್ ರದ್ದತಿ ಬಗ್ಗೆ ಸರಕಾರದ ಸ್ಪಷ್ಟ ನಿಲುವು ಮತ್ತು ಪ್ರತಿಕ್ರಿಯೆ ಅಪೇಕ್ಷಿಸಿದ ಸದನ ಪ್ರಶ್ನೆಗೆ ಉತ್ತರವಾಗಿ ಸರ್ಕಾರ, ಹೆದ್ದಾರಿ ಪ್ರಾಧಿಕಾರ ಟೋಲ್ ರದ್ದು ಗೊಳಿಸುವ ಬಗ್ಗೆ ನಿರ್ಣಯಿಸಿದು ದನ್ನು ಸದನಕ್ಕೆ ತಿಳಿಸಿತು.ಈ ಬಗ್ಗೆ ಶ್ರಮಿಸಿದ ಶ್ರೀ ಯು.ಟಿ.ಖಾದರ್ ರವರನ್ನು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕೆ.ಅಶ್ರಫ್ ರವರು ಅಭಿನಂದಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66 ಸುರತ್ಕಲ್ ನಲ್ಲಿರುವ ಅವೈಜ್ಞಾನಿಕ ,ಅನಧಿಕೃತ ಟೋಲ್ ಅನ್ನು ತೆರವು ಗೊಳಿಸುವ ಬೇಡಿಕೆಯೊಂದಿಗೆ ಹಲವಾರು ವರ್ಷದಿಂದ ವಿವಿಧ ಸಂಘಟನೆಗಳು, ಜನ ಪ್ರತಿನಿಧಿಗಳು ಹೋರಾಟ ನಡೆಸಿ ಕೊಂಡು ಬಂದಿದ್ದು, ಹಿಂದಿನ ವರ್ಷ ಟೋಲ್ ವಿರುದ್ಧ ಜನಾಕ್ರೋಶ ಸೃಷ್ಟಿಯಾಗಿ ತೀವ್ರ ಪ್ರತಿಭಟನೆ ನಡೆಸಲಾಗಿತ್ತು.

ಇತ್ತೀಚೆಗೆ ಎಡ ಪಕ್ಷ ಸಂಘಟನೆ ಪ್ರತಿನಿಧಿಗಳು,ಸರಕು ವಾಹನ ಚಾಲಕರ ಮಾಲಕರ ಸಂಘ,ವಿಧ್ಯಾರ್ಥಿ ಸಂಘಟನೆ ಸಾರ್ವಜನಿಕರ ನೇತೃತ್ವದಲ್ಲಿ ರಸ್ತೆ ಜಾಥಾ ಇತ್ಯಾದಿ ರೂಪದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.

ಈ ಮಧ್ಯೆ ಸರಕಾರ ಹೋರಾಟಗಾರರಿಗೆ ಟೋಲ್ ರದ್ದು ಪಡಿಸುವ ಬಗ್ಗೆ ಭರವಸೆ ನೀಡಿತ್ತು. ಆದರೆ ಹೆದ್ದಾರಿ ಪ್ರಾಧಿಕಾರ ಮತ್ತು ಖಾಸಗಿ ಗುತ್ತಿಗೆ ಕಂಪೆನಿಗಳು ಟೋಲ್ ರದ್ದು ಪಡಿಸಲು ನಿರಾಕರಣೆ ಸೂಚಿಸಿತ್ತು. ಕಳೆದ ಹಲವು ತಿಂಗಳಿಂದ ಟೋಲ್ ರದ್ದತಿಗಾಗಿ ಸಂಘಟನೆಗಳು, ಜನಪ್ರತಿನಿಧಿಗಳು,ಸಾರ್ವಜನಿಕರು ಟೋಲ್ ರದ್ದತಿಗಾಗಿ ಬೇಡಿಕೆ ಮುಂದಿರಿಸಿ,ತೀವ್ರ ಹೋರಾಟದ ಎಚ್ಚರಿಕೆ ನೀಡಲಾಗಿತ್ತು.ಟೋಲ್ ರದ್ದತಿ ವಿಷಯದಲ್ಲಿ ಸಾರ್ವಜನಿಕರ ಅಪೇಕ್ಷೆ ಮೇರೆಗೆ ಕರ್ನಾಟಕದ ಸರಕಾರದ ವಿರೋಧ ಪಕ್ಷ ಉಪ ನಾಯಕರಾದ ಶ್ರೀ ಯು.ಟಿ. ಕಾದರ್ ರವರು ಅಧಿವೇಶನ ಶೂನ್ಯ ವೇಳೆಯಲ್ಲಿ ಸರಕಾರದ ಸ್ಪಷ್ಟ ಉತ್ತರ ಬಯಸಿ ದ್ವನಿ ಎತ್ತಿದ್ದರು.

ಇದೀಗ ಸರಕಾರ ಅಧಿಕೃತವಾಗಿ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ರದ್ದತಿ ಬಗ್ಗೆ ನಿರ್ಣಯಿಸಿದ ಬಗ್ಗೆ ಮಾಹಿತಿ ಬಹಿರಂಗ ಗೊಳಿಸಿದೆ .
ಬಹು ಜನರ,ಬಹು ಕಾಲದ ಅಪೇಕ್ಷೆಗೆ ಸ್ಪಂದಿಸಿ ಶ್ರೀ ಯು.ಟಿ.ಖಾದರ್ ಸರಕಾರದ ಸ್ಪಷ್ಟ ನಿಲುವು ಬಯಸಿ ದ್ವನಿ ಎತ್ತಿರುವುದಕ್ಕೆ ಅವರಿಗೆ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ.

ಕೆ.ಅಶ್ರಫ್.
(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.