November 9, 2024

Vokkuta News

kannada news portal

ಸಿದ್ದು ವಿರುದ್ದದ ಅಶ್ವತ್ ಹೇಳಿಕೆ: ಕೋಮು ಪ್ರಚೋದನೆಯ ಪರಮಾವಧಿ: ಕೆ.ಅಶ್ರಫ್,ಮುಸ್ಲಿಮ್ ಒಕ್ಕೂಟ.

ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಗುರಿಯಾಗಿಸಿ, ಸಚಿವ ಅಶ್ವತ್ ನಾರಾಯಣ್,ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕೆಂದು ಪ್ರಚೋದಿತ ಹೇಳಿಕೆ ನೀಡಿರುವುದು ಖಂಡನಾರ್ಹ,ಅಕ್ಸ್ಯಮ್ಮ ಅಪರಾಧ ಕೂಡಾ, ರಾಜ್ಯದ ಪೊಲೀಸು ಮಹಾ ನಿರ್ದೇಶಕರು ಈ ಹೇಳಿಕೆಯ ವಿರುದ್ಧ ಪ್ರಕರಣ ದಾಖಲಿಸಬೇಕಿದೆ.

ಸಿದ್ದು ವಿರುದ್ಧ ಜಾತಿ ಪ್ರಚೋದಿತ ಹೇಳಿಕೆ ನೀಡಲಾಗಿದೆ. ಮೊದಲು ಟಿಪ್ಪು ಬಗ್ಗೆಗಿನ ಹೇಳಿಕೆ ನೀಡಿ ವೈರಿಯಂತೆ ಬಿಂಬಿಸಲಾಗಿದೆ,ನಂತರ ಟಿಪ್ಪುವಿನ ಹೆಸರಿನೊಂದಿಗೆ ಸಿದ್ದರಾಮಯ್ಯರನ್ನು ಸಮೀಕರಿಸಿ ಬಿಂಬಿಸಲಾಯಿತು, ತದ ನಂತರ ಟಿಪ್ಪುವಿನ ದಾರುಣ ಅಂತ್ಯವನ್ನು ವೈಭವೀಕರಿಸಿ,ಸಿದ್ದರಾಮಯ್ಯನವರ ರಾಜಕೀಯ ಅಂತ್ಯದೊಂದಿಗೆ ಸಮೀಕರಿಸಿ ಪ್ರಚೋದಿತ ಹೇಳಿಕೆ ನೀಡಲಾಗಿದೆ. ಇದು ಮತೀಯ ದ್ವೇಷಿ ತ ಹೇಳಿಕೆ ಆಗಿದೆ. ಸಿದ್ದುವನ್ನು ಗುರಿಯಾಗಿಸಿ,ಟಿಪ್ಪುವನ್ನು ಸಮೀಕರಿಸಿ,ಮುಸ್ಲಿಮ್ ಜನಾಂಗವನ್ನು ವಿರೋಧಿಸುವ ವ್ಯವಸ್ಥಿತ ಷಡ್ಯಂತ್ರದ ಕೇಶವ ಕೃಪಾ ಪ್ರೇರಿತ ಹೇಳಿಕೆ ನೀಡಲಾಗಿದೆ. ಈ ಪ್ರಚೋದನೆ ಜನರಿಗೆ ಮನವರಿಕೆ ಆಗಲು ಅಧಿಕ ಸಮಯ ಬೇಕಾಗಿಲ್ಲ ಎಂದು ಕೆ.ಅಶ್ರಫ್(ಮಾಜಿ ಮೇಯರ್),ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ರವರು ಆಕ್ರೋಶ ವ್ಯಕ್ತಪಡಿಸಿದರು.