July 27, 2024

Vokkuta News

kannada news portal

ಪಾ…ಸ್ತಾನ್ ಗೆ ಹೋಗಲಿಲ್ಲವೇಕೆ? ವಿದ್ಯಾರ್ಥಿಗೆ ದೆಹಲಿ ಶಿಕ್ಷಕಿ ಪ್ರಶ್ನೆ: ದೂರು ದಾಖಲು.

ಆಮ್ ಆದ್ಮಿ ಪಕ್ಷದ ಮುಖಂಡ ಅನಿಲ್ ಕುಮಾರ್ ಬಾಜ ಪೇಯಿ ಶಿಕ್ಷಕಿಯ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿ: ದೆಹಲಿ ಶಾಲೆಯ ನಾಲ್ಕು ವಿಧ್ಯಾರ್ಥಿಗಳು ತಮ್ಮ ಶಾಲೆಯ ಶಿಕ್ಷಕಿಯ ವಿರುದ್ಧ ಆರೋಪಿಸಿ, ಶಿಕ್ಷಕಿಯು ನಮ್ಮನ್ನು ಮತೀಯ ವಿದ್ವೇಶದಿಂದ ಅವಮಾನಿಸಿದ್ದಾರೆ ಮತ್ತು ನಮ್ಮ ಹಿರಿಯರ ಕುಟುಂಬವೇಕೆ ಭಾರತದ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋಗಲಿಲ್ಲ? ಎಂದು.

ಇತ್ತೀಚೆಗೆ ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಅದರ ಶಿಕ್ಷಕಿ ತೃಪ್ತ ತ್ಯಾಗಿ ಯು ತಾನು ಓರ್ವ ಎಳೆ ವಿದ್ಯಾರ್ಥಿಗೆ ಪ್ರಚೋದಿಸಿ ಸಹಪಾಠಿ ಎಳೆ ಮುಸ್ಲಿಮ್ ವಿಧ್ಯಾರ್ಥಿಯ ಕಪಾಳಕ್ಕೆ ಹಲ್ಲೆ ಮಾಡುವುದಕ್ಕೆ ಕಾರಣರಾಗಿ ಮತ್ತು ಮತೀಯ ಅವಹೇಳನ ಮಾತುಗಳನ್ನು ಹೇಳಿದ ವೀಡಿಯೊಗಳು ವ್ಯಾಪಕವಾಗಿ ಪ್ರಕಟಣೆಯ ನಂತರ ಈ ಬೆಳವಣಿಗೆ ಆಗಿದೆ.

ಫಿರ್ಯಾದುದಾರರಲ್ಲಿ ಓರ್ವನಾದ ವಿದ್ಯಾರ್ಥಿ ಪ್ರಕಾರ ಬುಧವಾರದಂದು ಶಿಕ್ಷಕಿ ಹೇಮಾ ಗುಲಾಟಿ ವಿಧ್ಯಾರ್ಥಿಗಳನ್ನು ಗುರಿಯಾಗಿಸಿ ಮತೀಯ ಅವಹೇಳನ ಮಾಡಿದ್ದಾರೆ.ಮುಂದುವರಿದು ಶಿಕ್ಷಕಿ ಮಕ್ಕಾ ನಗರದಲ್ಲಿ ಇರುವ ಪವಿತ್ರ ಕಾಬಾ ಶಿಲೆಯ ಮತ್ತು ಕುರ್ ಆನ್ ವಿರುದ್ಧವೂ ಅವಹೇಳನಕಾರಿ ಪದ ಪ್ರಯೋಗ ಮಾಡಿದ್ದಾರೆ. ದೇಶ ವಿಭಜನೆಯ ಸಂಧರ್ಬದಲ್ಲಿ ನೀವು ಪಾಕಿಸ್ತಾನಕ್ಕೆ ಹೋಗಲಿಲ್ಲ, ಭಾರತದಲ್ಲಿ ವಾಸ ಇದ್ದೀರಿ,ಸ್ವಾತಂತ್ರ್ಯ ಸಮರದಲ್ಲಿ ನಿಮ್ಮದೇನೂ ಕೊಡುಗೆ ಇಲ್ಲ ಎಂದು ಶಿಕ್ಷಕಿ ಸಂಭೋಧಿಸಿದ್ದಾರೆ ಎಂಬುದಾಗಿದೆ ದೂರಿನ ಸಾರಾಂಶ.

ದೂರನ್ನು ಶುಕ್ರವಾರ ಸಂಜೆಯ ವೇಳೆ ದಾಖಲಿಸಲಾಗಿದೆ.ವಿಧ್ಯಾರ್ಥಿಯ ಪೋಷಕರ ಪ್ರಕಾರ ಇಂತಹ ಹೇಳಿಕೆಗಳು ತರಗತಿಯಲ್ಲಿ ಭಿನ್ನತೆಯನ್ನು ಸೃಷ್ಟಿಸುತ್ತದೆ ಮತ್ತು ಶಿಕ್ಷಕಿಯನ್ನು ನೌಕರಿಯಿಂದ ವಜಾ ಮಾಡಬೇಕಿದೆ, ಎಂದು.ಮಹಿಳೆಯೋರ್ವರ ಇಬ್ಬರು ಮಕ್ಕಳು ಶಾಲೆಯಲ್ಲಿ ಕಲಿಕೆ ಹೊಂದಿದ್ದು, ಸುದ್ದಿ ಸಂಸ್ಥೆಗೆ ಹೇಳಿದಂತೆ ಈ ಶಿಕ್ಷಕಿಯನ್ನು ಶಿಕ್ಷಿಸದೆ ಹೋದರೆ ಈ ಕೃತ್ಯ ಬೃಹದಾಗಲಿದೆ. ಶಿಕ್ಷಕಿಯರು ವಿಧ್ಯಾಭ್ಯಾಸ ಕಲಿಕೆ ನೀಡ ಬೇಕೆ ಹೊರತು ತಮಗೆ ಜ್ಞಾನ ವಿಲ್ಲದ ವಿಷಯದಲ್ಲಿ ತಲೆ ಹಾಕಬಾರದು. ವಿಧ್ಯಾರ್ಥಿಗಳ ಮದ್ಯೆ ಭಿನ್ನತೆ ಸೃಷ್ಟಿಸುವ ಶಿಕ್ಷಕರ ಅಗತ್ಯವಿಲ್ಲ.ಶಿಕ್ಷಕಿಯನ್ನು ತಕ್ಷಣದಿಂದ ವಜಾ ಮಾಡಬೇಕಿದೆ ಮತ್ತು ಇಂತಹ ಶಿಕ್ಷಕಿ ಯಾವುದೇ ಸಂಸ್ಥೆಯಲ್ಲಿ ನೌಕರಿ ಹೊಂದಕೂಡದು.

ಆಮ್ ಆದ್ಮಿ ಪಕ್ಷದ ಮುಖಂಡ ಅನಿಲ್ ಕುಮಾರ್ ಬಾಜಪೇಯಿ ಶಿಕ್ಷಕಿಯ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೃತ್ಯ ತಪ್ಪು ಶಿಕ್ಷಕಿಯ ಕರ್ತವ್ಯ ವಿದ್ಯಾರ್ಥಿಗಳಿಗೆ ಜವಾಬ್ದಾರಿಯುತ ಶಿಕ್ಷಣ ನೀಡುವುದಾಗಿದೆ. ಶಿಕ್ಷಕಿಯು ಯಾವುದೇ ಕಾರಣಕ್ಕೂ ಧಾರ್ಮಿಕ ಅವಹೇಳನ ಮತ್ತು ಯಾವುದೇ ಪವಿತ್ರ ಸ್ಥಳದ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡ ಕೂಡದು. ಅಂತವರನ್ನು ದಸ್ತಗಿರಿ ಮಾಡಬೇಕಿದೆ ಎಂದಿದ್ದಾರೆ.

ಉ.ಪ್ರ. ಶಾಲೆಯಲ್ಲಿ ಎಳೆ ಮುಸ್ಲಿಮ್ ವಿದ್ಯಾರ್ಥಿಗೆ ಕಪಾಳ ಹಲ್ಲೆ ನಡೆಸಿದ ಶಿಕ್ಷಕಿ ನಂತರ ತಾನು ಮತೀಯ ವಿದ್ವೇಶದ ಉದ್ದೇಶದಿಂದ ಇದನ್ನು ಪ್ರಚೋದಿಸಿದ್ದು ಅಲ್ಲ ಮತ್ತು ನನ್ನಿಂದ ತಪ್ಪಾಗಿದೆ ಎಂದು ಹೇಳಿಕೆ ನೀಡಿ ಸಾರ್ವಜನಿಕವಾಗಿ ವಿಡಿಯೋ ಒಂದರಲ್ಲಿ ಕ್ಷಮೆ ಯಾಚಿಸಿದ್ದಾರೆ. ಕಪಾಳ ಹಲ್ಲೆ ಸಂತ್ರಸ್ತ ವಿದ್ಯಾರ್ಥಿಯನ್ನು ಪ್ರತ್ಯೇಕ ಶಾಲೆಗೆ ಸೇರ್ಪಡೆ ಗೊಳಿಸಲಾಗಿತ್ತು.ಮುಜಾಫರ್ ನಗರ ಶಿಕ್ಷಕಿಯ ವಿರುದ್ಧ ಕೃತ್ಯ ಕಾರಣಕ್ಕಾಗಿ ಪ್ರಕರಣ ದಾಖಲಿಸಲಾಗಿದ್ದು ಮತ್ತು ಶಿಕ್ಷಣ ಇಲಾಖೆ ಶಾಲೆಯನ್ನು ಸ್ಥಗಿತ ಗೊಳಿಸಲು ಆದೇಶಿಸಿತ್ತು : ಕೃಪೆ, ಎಂಡಿಟಿವಿ.