ಕೋಪನ್ ಹ್ಯಾಗನ್: ಇತ್ತೀಚೆಗೆ ಸ್ಕಾಂಡಿನೇವಿಯನ್ ರಾಜ್ಯ ದಲ್ಲಿ ಭಿನ್ನ ಕಾರ್ಯಕರ್ತರು ಇಸ್ಲಾಮಿನ ಪವಿತ್ರ ಗ್ರಂಥ ಕುರ್ ಆನ್ ಅನ್ನು ದಹಿಸುವ ಘಟನೆ ಅಂತಾರಾಷ್ಟ್ರೀಯ ಮುಸ್ಲಿಮ್ ದೇಶಗಳ ಆಕ್ರೋಶಕ್ಕೆ ಕಾರಣವಾಗಿ, ಡೆನ್ಮಾರ್ಕ್ ತನ್ನ ದೇಶದಲ್ಲಿ ಮೂಲಭೂತ ಪವಿತ್ರ ಧರ್ಮ ಗ್ರಂಥಗಳನ್ನು ದಹಿಸುವ ಮತ್ತು ವಿಕೃತಿ ಗೊಳಿಸುವ ಕೃತ್ಯವನ್ನು ನಿಷೇಧಿಸುವ ಬಗ್ಗೆ ಕಾನೂನು ಜಾರಿಗೊಳಿಸುವ ಚಿಂತನೆ ನಡೆಸುತ್ತಿದೆ.
ಈ ಬಗ್ಗೆ ಡೆನ್ಮಾರ್ಕ್ ಸಂಸತ್ ಯಾವುದೇ ಧಾರ್ಮಿಕ ಸಮುದಾಯದ ಪ್ರಮುಖ ಧಾರ್ಮಿಕ ಸಂಕೇತ ಮತ್ತು ನಂಬಿಕೆಗಳನ್ನು ಪ್ರತಿನಿಧಿಸುವ ಸಾಧನಗಳನ್ನು ಅಸಮರ್ಪಕವಾಗಿ ಬಳಸುವುದನ್ನು ನಿಷೇಧಿಸುವ ಕಾನೂನನ್ನು ಆಂಗೀಕರಿಸಲಾಗುವುದು ಎಂದು ಕಾನೂನು ಸಚಿವ ಪೀಟರ್ ಹಮ್ಮೇಲ್ ಗಾರ್ಡ್ ಹೇಳಿದ್ದಾರೆ.
ಕಾನೂನು ರಚನೆ ಸಾರ್ವಜನಿಕವಾಗಿ ಮುಕ್ತ ಸ್ಥಳಗಳಲ್ಲಿ ದಹಿಸುವುದು ಮತ್ತು ಅಪವಿತ್ರ ಗೊಳಿ ಸುವ ಕೃತ್ಯವನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಸಾರ್ವಬೌಮತ್ವ ಈ ನಿಷೇಧದ ಪ್ರಮುಖ ಉದ್ದೇಶವಾಗಿದೆ. ಅನೇಕ ವ್ಯಕ್ತಿಗಳು ಹಿಂಸಾತ್ಮಕ ಪ್ರತಿಭಟನೆಗಳನ್ನು ಪ್ರಚೋದಿಸುವಾಗ ನಾವು ನಮ್ಮ ಕೈಗಳನ್ನು ಮಡಚಿ ಸುಮ್ಮನಿರುವ ನಿಲುವು ಹೊಂದಲು ಸಾಧ್ಯವಿಲ್ಲ ವೆಂದು ಅವರು ಹೇಳಿದರು.
ಕುರಾನ್ ದಹಿಸುವಿಕೆ ಮತ್ತು ಮೂಲಭೂತವಾದಿತ್ವದ ನಿಂದನೆ ಅನುಕಂಪ ರಹಿತವಾದುದು ಇದು ಡೆನ್ಮಾರ್ಕ್ ನ ರಾಷ್ಟ್ರೀಯ ಹಿತಾಸಕ್ತಿಗೆ ಅಪಾಯವಾಗಲಿದೆ ಎಂದು ಪೀಟರ್ ಹಮ್ಮೆಲ್ ಗಾರ್ಡ್ ಹೇಳಿದರು.
ನವ ಕಾನೂನನ್ನು ಡೆನ್ಮಾರ್ಕ್ ಪೀನಲ್ ಕೋಡ್ ನ ಹನ್ನೆರಡನೇ ಅಧ್ಯಾಯದಲ್ಲಿ ಅಂಗೀಕರಿಸಲಾಗುವುದು ಮತ್ತು ಅದರಲ್ಲಿಯೇ ಡೆನ್ಮಾರ್ಕ್ ದೇಶದ ಭದ್ರತೆಯ ಕೋಡ್ ಗಳು ಒಳಗೊಂಡಿದೆ.
ಕಾನೂನು ಬೈಬಲ್, ತೋರಾ ಮತ್ತು ಕ್ರೂಸಿಫಿಕ್ಸ್ ಗ್ರಂಥದ ಅಪವಿತ್ರ ಗೊಳಿಸುವಿಕೆಗೂ ಅನ್ವಯಿಸಲಿದೆ.ಕೃತ್ಯಕ್ಕೆ ದಂಡ ಪಾವತಿ ಮತ್ತು ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಿದೆ ಎಂದು ಪೀಟರ್ ಹೇಳಿದರು. ಕೃಪೆ ಎನ್ ಡಿ ಟಿ ವಿ ಡಾಟ್ ಕಾಮ್.
ಇನ್ನಷ್ಟು ವರದಿಗಳು
ಖಾಲಿಸ್ತಾನಿ ಭಯೋತ್ಪಾದಕರು ಕೆನಡಾದಲ್ಲಿ ವಿದ್ಯಾರ್ಥಿಗಳ ಮೇಲೆ ಪ್ರಭಾವ: ಭಾರತೀಯ ಹೈಕಮಿಷನರ್ ಸಂಜಯ್ ವರ್ಮಾ.
ದೆಹಲಿಯ ಕ್ರಮಗಳು ‘ಸ್ವೀಕಾರಾರ್ಹವಲ್ಲ’, ಸಿಖ್ ಪ್ರತ್ಯೇಕತಾವಾದಿ ಹತ್ಯೆಯ ಮೇಲಿನ ಉದ್ವಿಗ್ನತೆಯ ಬಗ್ಗೆ ಜಸ್ಟಿನ್ ಟ್ರೂಡೊ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನಕ್ಕಾಗಿ ಭಾರತದ ಪ್ರಸ್ತಾಪಕ್ಕೆ ಪ್ರಮುಖ ಉತ್ತೇಜನ.