June 13, 2024

Vokkuta News

kannada news portal

ಕಾಲ್ನಡಿಗೆ ಹಜ್ ಯಾತ್ರೆ ಮುಂದುವರಿಸಿ ಪಾಕಿಸ್ತಾನ ಪ್ರವೇಶಿಸಿದ ಶಿಹಾಬ್ ಚೋ ಟ್ಟುರು.

ಮಂಗಳೂರು: ಕಳೆದ ಜೂನ್ ತಿಂಗಳಲ್ಲಿ ಭಾರತದ ಕೇರಳ ರಾಜ್ಯದಿಂದ ಕಾಲ್ನಡಿಗೆಯ ಪ್ರಯಾಣದ ಮೂಲಕ ಉದ್ದೇಶಿತ ಹಜ್ ಯಾತ್ರೆಗೆ ಹೊರಟ ಶಿಹಾಬ್ ಚೋ ಟ್ಟೂರು ರವರು ಭಾರತದ ವಿವಿಧ ರಾಜ್ಯದ ಮೂಲಕ ಪಂಜಾಬ್ ಗಡಿ ದಾಟಿ ಪಾಕಿಸ್ತಾನ ಪ್ರವೇಶ ಪಡೆಯಲು ರಹದಾರಿ ದಸ್ತಾವೇಜೀಕರಣ ಸಮಸ್ಯೆ ಯಿಂದಾಗಿ ತಮ್ಮ ಪ್ರಯಾಣವನ್ನು ಸ್ಥಗಿತ ಗೊಳಿಸುವ ಅನಿವಾರ್ಯ ಪರಿಸ್ಥಿತಿ ಎದುರಾದ ನಂತರದ ಇದೀಗ ಪಾಕಿಸ್ತಾನ ಶಿಹಾಬ್ ಚೋಟ್ಟುರೂ ರವರಿಗೆ ರಹದಾರಿ ಅನುಮತಿ ನೀಡಿ ತಮ್ಮ ಪ್ರಯಾಣವನ್ನು ಮುಂದುವರಿಸಲು ಸೂಚಿಸಿದೆ.

ಅದರಂತೆ ಶಿಹಾಬ್ ರವರು ಇಂದು ಪಂಜಾಬ್ ಗಡಿ ದಾಟಿ ಪಾಕಿಸ್ತಾನ ಪ್ರವೇಶಿಸಿ ದ್ದಾಗಿ ಟ್ವೀಟ್ ಮಾಡಿದ್ದಾರೆ. ಶಿಹಾಬ್ ರವರು ತಮ್ಮ ಉಳಿದ ಅವಧಿಯಲ್ಲಿ ಇತರ ದೇಶಗಳ ಕಾಲ್ನಡಿಗೆ ಪ್ರಯಾಣವನ್ನು ಸರಿದೂಗಿಸಲು ದಿನವಹಿ ಹೆಚ್ಚುವರಿ ಅವಧಿಯ ಕಾಲ್ನಡಿಗೆ ಪ್ರಯಾಣ ಕೈಗೊಳ್ಳುವ ಸಾದ್ಯತೆ ಇದೆ.