June 13, 2024

Vokkuta News

kannada news portal

ಜಿ.20 ಶೃಂಗ ಸಭೆ: ದೆಹಲಿ ತಲುಪಿದ ಪ್ರಮುಖ ಜಾಗತಿಕ ನಾಯಕರು

ದೆಹಲಿ : ದೆಹಲಿಯಲ್ಲಿ ಜಿ 20 ಶೃಂಗಸಭೆಗೆ ಪ್ರಮುಖ ಜಾಗತಿಕ ನಾಯಕರು ದೇಶದ ರಾಜಧಾನಿ ದೆಹಲಿಗೆ ಆಗಮಿಸಿರುತ್ತಾರೆ. ಶೃಂಗಸಭೆಯ ಮುನ್ನ, ಜಿ 20 ಶೃಂಗಸಭೆ ಸ್ಥಳ ಮತ್ತು ಪ್ರತಿನಿಧಿಗಳಿಗಾಗಿ ಹೋಟೆಲ್‌ಗಳು ಇರುವ ಪ್ರದೇಶದಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಜಿ 20 ನಾಯಕರ ಶೃಂಗಸಭೆಯು ನವದೆಹಲಿಯಲ್ಲಿ ಸೆಪ್ಟೆಂಬರ್ 9-10, 2023 ರಂದು ನಡೆಯಲಿದೆ. 30 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು, ಆಹ್ವಾನಿತ ಅತಿಥಿ ರಾಷ್ಟ್ರಗಳು ಮತ್ತು 14 ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಶೃಂಗಸಭೆಗೆ ಮುಂಚಿತವಾಗಿ, ಜಿ 20 ಶೃಂಗಸಭೆಯ ಸ್ಥಳ ಮತ್ತು ಪ್ರತಿನಿಧಿಗಳಿಗಾಗಿ ಹೋಟೆಲ್‌ಗಳು ಇರುವ ಪ್ರದೇಶದಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲು ಕಟ್ಟುನಿಟ್ಟಾದ ಟ್ರಾಫಿಕ್ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ಶೃಂಗ ಸಭೆಯ ಆತಿತ್ಯ ವಹಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರನ್ನು ಶೃಂಗ ಸ್ಥಳಕ್ಕೆ ಬರಮಾಡಿ ಕೊಳ್ಳುವ ಶಿಷ್ಟಾಚಾರ ದೊಂದಿಗೆ ಶೃಂಗ ಸಭಾ ಪೂರ್ವ ಮಾತುಕತೆ ನಡೆಸಲಿದ್ದಾರೆ.

.