ಕುಂದಾಪುರ: ಇತ್ತೀಚೆಗೆ ಬಹುಕೋಟಿ ವಂಚನೆ ಆರೋಪಿ ಮತ್ತು ದುರ್ಗಾ ವಾಹಿನಿ ಸಂಘಟನೆಯ ಮುಖ್ಯಸ್ಥೆ ಚೈತ್ರಾ ಕುಂದಾಪುರಳನ್ನು ಬೆಂಗಳೂರು ಸಿ.ಸಿ.ಬಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಪ್ರದರ್ಶಿಸಿ ,ಹೆಚ್ಚುವರಿ ತನಿಖೆಗಾಗಿ ಪೊಲೀಸ್ ಕಸ್ಟಡಿ ಪಡೆದ ನಂತರ ತನಿಖೆಯ ವೇಳೆ ಅಸ್ವಸ್ಥ ಗೊಂಡ ನಂತರ ಚಿಕಿತ್ಸೆಗಾಗಿ ಚೈತ್ರಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಚೈತ್ರಳ ವಿರುದ್ಧ ಗೋಪಾಲ್ ಪೂಜಾರಿ ಎಂಬವರು ತನಗೆ ಚೈತ್ರಾ ಮತ್ತು ಇತರರು ಬಿಜೆಪಿ ಪಕ್ಷದ ವತಿಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿತನ ನೀಡಲು ಪಕ್ಷ ವರಿಷ್ಠರಿಗೆ ಶಿಫಾರಸು ಮಾಡುತ್ತೇನೆಂದು ಭರವಸೆ ನೀಡಿ ಅಘಾದ ಮೊತ್ತದ ನಗದು ಹಣ ಪಡೆದು ವಂಚಿಸಲಾಗಿದೆ ಎಂದು ಪ್ರಕರಣದ ದೂರಿನಲ್ಲಿ ಆರೋಪಿಸಲಾಗಿದೆ ಮತ್ತು ಇದು ಬಹುಕೋಟಿ ಮೊತ್ತದ ಅವ್ಯವಹಾರ ಎಂದು ಪ್ರಚಾರವಾಗಿತ್ತು.
ಪ್ರಕರಣದಲ್ಲಿ ಹಲವರು ಬಂಧನಕ್ಕೆ ಒಳಗಾಗಿದ್ದು, ಒರ್ವ ಧಾರ್ಮಿಕ ವ್ಯಕ್ತಿ ಕೂಡಾ ಶಾಮೀಲು ಆಗಿದ್ದು,ಪ್ರಮುಖ ನಾಯಕರ ಪಾತ್ರವೂ ಇದೆ ಎಂದು ಮಾದ್ಯಮದ ಮುಂದೆ ಚೈತ್ರಾ ಹೇಳಿಕೆ ನೀಡಿದ್ದರು.
ಇನ್ನಷ್ಟು ವರದಿಗಳು
ಕರ್ನಾಟಕದಲ್ಲಿ ಎಳೆ ಶಿಶುವಿನಿಂದ 18 ವರ್ಷ ವಯಸ್ಸಿನ 7.2 ಲಕ್ಷ ಮಕ್ಕಳಲ್ಲಿ ಅಧಿಕ ರಕ್ತದೊತ್ತಡ ಪತ್ತೆ
ಸಮಾನಾಂತರ ವಕೀಲರ ಸಂಘದ ಪ್ರಸ್ತಾವಿತ ರಚನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ,ಕ.ಹೈಕೋರ್ಟ್ ಬೆಂಗಳೂರಿನ ವಕೀಲರ ಸಂಘ (ಎಎಬಿ)ಕ್ಕೆ ಮಧ್ಯಂತರ ಆದೇಶ.
ಧರ್ಮಸ್ಥಳ ಪ್ರಕರಣ, ಬೃಹತ್ ತಿರುವು, ಸುಳ್ಳು ಸಾಕ್ಷ್ಯದಾರ ಮುಸುಕುಧಾರಿ ವ್ಯಕ್ತಿ ಬಂಧನ.