ಟೊರೆಂಟೋ: ಕೆನಡಾದಲ್ಲಿ ಖಾಲಿಸ್ತಾನಿ ಭಯೋತ್ಪಾದಕನೊಬ್ಬನ ಹತ್ಯೆಯಲ್ಲಿ ಭಾರತೀಯ ಏಜೆಂಟರ ಪಾಲ್ಗೊಳ್ಳುವಿಕೆಯ ಬಗ್ಗೆ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಆಕ್ರಮಣಕಾರಿ ಆರೋಪವನ್ನು ಪ್ರೇರೇಪಿಸಿದ ” ಫೈವ್ ಐಸ್ ಪಾಲುದಾರಿಕೆ ಗುಪ್ತ ಮಾಹಿತಿ ಹಂಚಿಕೆ” ಇದೆ ಎಂದು ಅಮೆರಿಕದ ಉನ್ನತ ರಾಜತಾಂತ್ರಿಕರು ದೃಢಪಡಿಸಿದ್ದಾರೆ ಎಂದು ಶನಿವಾರದ ಮಾಧ್ಯಮ ವರದಿ ಮಾಡಿದೆ.
ಭಾರತ ಸರ್ಕಾರ ಮತ್ತು ಕೆನಡಾದ ಪ್ರಜೆಯ ಹತ್ಯೆಯ ನಡುವಿನ “ಸಂಭಾವ್ಯ” ಸಂಬಂಧದ ಬಗ್ಗೆ ಟ್ರೂಡೊ ಅವರ ಸಾರ್ವಜನಿಕ ಆರೋಪವನ್ನು ತಿಳಿಸಿರುವ “ಫೈವ್ ಐಸ್ ಪಾಲುದಾರಿಕೆಯಲ್ಲಿನ ಗುಪ್ತ ಮಾಹಿತಿ ಹಂಚಿಕೆ” ಇತ್ತು, ಕೆನಡಾದ 24-ಗಂಟೆಗಳ ಎಲ್ಲಾ ಸುದ್ದಿ ಜಾಲತಾಣ, ಸಿ.ಟಿ. ವಿ ನ್ಯೂಸ್ ಚಾನೆಲ್, ಉಲ್ಲೇಖಿಸಿ ವರದಿ ಮಾಡಿದೆ ಎಂದು ಕೆನಡಾದಲ್ಲಿನ ಅಮೆರಿಕ ರಾಯಭಾರಿ ಡೇವಿಡ್ ಕೊಹೆನ್ ದೃಢ ಪಡಿಸಿದ್ದಾರೆ.
ಫೈವ್ ಐಸ್ ಜಾಲವು ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ, ಕೆನಡಾ ಮತ್ತು ನ್ಯೂಜಿಲೆಂಡ್‌ಗಳನ್ನು ಒಳಗೊಂಡಿರುವ ಗುಪ್ತಚರ ಒಕ್ಕೂಟವಾಗಿದೆ. ಇದು ಕಣ್ಗಾವಲು ಆಧಾರಿತ ಮತ್ತು ಸಂಕೇತಗಳ ಗುಪ್ತಮಾಹಿತಿ ಎರಡನ್ನು ಒಳಗೊಂಡಿದೆ.
ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆ ಎಂಬಲ್ಲಿ ಕೆನಡಾದ ಪ್ರಜೆಯಾದ ಖಾಲಿಸ್ತಾನಿ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ “ಸಂಭಾವ್ಯ” ಭಾಗಿಯಾಗಿರುವಿಕೆ ಬಗ್ಗೆ ಜಸ್ಟಿನ್ ಟ್ರುಡೊ ಸೆಪ್ಟೆಂಬರ್ 18 ರಂದು ಸ್ಫೋಟಕ ಆರೋಪವನ್ನು ಮಾಡಿದ್ದರು.
ಟ್ರುಡೊ ಅವರ ಆರೋಪಗಳನ್ನು ಭಾರತವು “ಅಸಂಬದ್ಧ” ಮತ್ತು “ಪ್ರೇರಿತ” ಎಂದು ತಿರಸ್ಕರಿಸಿತ್ತು. ಈ ಪ್ರಕರಣದ ಕುರಿತು ಒಟ್ಟಾವದಲ್ಲಿನ ಕೆನಡಾ ಆಡಳಿತ ಭಾರತೀಯ ಅಧಿಕಾರಿಯನ್ನು ಉಚ್ಚಾಟನೆ ಮಾಡಿದ ಕಾರಣಕ್ಕೆ, ಏಟಿಗೆ ಎದಿರೇಟು ಎಂಬ ಕ್ರಮದಲ್ಲಿ ಭಾರತವು ಕೆನಡಾದ ಹಿರಿಯ ರಾಜತಾಂತ್ರಿಕರನ್ನು ತನ್ನ ದೇಶದಿಂದ ಹೊರಹಾಕಿತ್ತು.
2020 ರ ಅವಧಿಯಲ್ಲಿ ಭಾರತವು 45 ವರ್ಷ ಪ್ರಾಯದ ನಿಜ್ಜರ್‌ನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು.
ಇನ್ನಷ್ಟು ವರದಿಗಳು
ಭವ್ಯ ವ್ಯಕ್ತಿ, ‘ನನ್ನ ಸ್ನೇಹಿತ’: ಪ್ರಧಾನಿ ಮೋದಿ-ಟ್ರಂಪ್ ಬಾಂಧವ್ಯ ಬಗ್ಗೆ ಬ್ರೋಮೆನ್ಸ್ ಪ್ರದರ್ಶನ.
ಖಾಲಿಸ್ತಾನಿ ಭಯೋತ್ಪಾದಕರು ಕೆನಡಾದಲ್ಲಿ ವಿದ್ಯಾರ್ಥಿಗಳ ಮೇಲೆ ಪ್ರಭಾವ: ಭಾರತೀಯ ಹೈಕಮಿಷನರ್ ಸಂಜಯ್ ವರ್ಮಾ.
ದೆಹಲಿಯ ಕ್ರಮಗಳು ‘ಸ್ವೀಕಾರಾರ್ಹವಲ್ಲ’, ಸಿಖ್ ಪ್ರತ್ಯೇಕತಾವಾದಿ ಹತ್ಯೆಯ ಮೇಲಿನ ಉದ್ವಿಗ್ನತೆಯ ಬಗ್ಗೆ ಜಸ್ಟಿನ್ ಟ್ರೂಡೊ