June 13, 2024

Vokkuta News

kannada news portal

ಬೋಸ್ನಿಯಾದಲ್ಲಿ ಸಾವಿರಾರು ಜನರಿಂದ ಪ್ಯಾಲೆಸ್ಟೈನ್ ಪರ ಪ್ರತಿಭಟನೆ.

ಬೋಸ್ನಿಯಾದ ರಾಜಧಾನಿ ಸರಜೆವೊದಲ್ಲಿ ಸಾವಿರಾರು ಜನರು ಜಮಾಯಿಸಿ, ಪ್ಯಾಲೇಸ್ಟಿನಿಯನ್ ಮತ್ತು ಬೋಸ್ನಿಯನ್ ಧ್ವಜಗಳನ್ನು ಹಿಡಿದು ಮತ್ತು ಗಾಝಾದ ವಿರುದ್ಧದ ಇಸ್ರೇಲ್‌ನ ಬಾಂಬ್ ದಾಳಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು.

ಧಾಳಿ “ಜನಾಂಗೀಯ ಹತ್ಯೆ, ನರಮೇಧ” ಎಂದು ಕೆಲವರು ಘೋಷಣೆಗಳನ್ನು ಕೂಗುವುದರೊಂದಿಗೆ, ಆದರೆ ದೊಡ್ಡ ಮತ್ತು ಪ್ರಮುಖ ಬಿತ್ತಿಪತ್ರ : “ನಿನ್ನೆ ಸ್ರೆಬ್ರೆನಿಕಾ, ಇಂದು ಗಾಝಾ” ಎಂದು 1995 ರ ಈ ಹಿಂದಿನ ಬೋಸ್ನಿಯನ್ ಪಟ್ಟಣದಲ್ಲಿನ ಹತ್ಯಾಕಾಂಡವನ್ನು ಉಲ್ಲೇಖಿಸುವಂತಿತ್ತು, ಎರಡನೆಯ ಮಹಾಯುದ್ಧದ ನಂತರ ಯುರೋಪಿನ ಅತ್ಯಂತ ಭೀಕರ ದೌರ್ಜನ್ಯವಾದ, ಇದರಲ್ಲಿ ಸೆರ್ಬ್ ಪಡೆಗಳು ಅಂದಾಜು 8,000 ಜನ ಮುಸ್ಲಿಂ ಪುರುಷರು ಮತ್ತು ಹುಡುಗರನ್ನು ಹತ್ಯೆ ಮಾಡಿರುತ್ತಾರೆ.

ಸರಜೆವೊದಲ್ಲಿ, ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮುಂದುವರಿದ ಈ ಸಂದರ್ಭದಲ್ಲಿ , ಗಾಝಾ ಪಟ್ಟಿ ಮತ್ತು ಪಶ್ಚಿಮ ದಂಡೆಯಲ್ಲಿ ಪ್ಯಾಲೇಸ್ಟಿನಿಯನ್ ಜನರನ್ನು ಬೆಂಬಲಿಸುವ ಈ ರ್ಯಾಲಿಯಲ್ಲಿ ಬೋಸ್ನಿಯನ್ನರು ಪ್ಯಾಲೇಸ್ಟಿನಿಯನ್ ಧ್ವಜಗಳನ್ನು ಬೀಸಿದರು.